ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ಚುನಾವಣೆ ಕಣದಲ್ಲಿ 33 ಅಭ್ಯರ್ಥಿಗಳು

By Mahesh
|
Google Oneindia Kannada News

Karnataka By Election 2011:33 candidates in fray
ಬೆಂಗಳೂರು, ಏ.5: ಭಾರಿ ಕುತೂಹಲ ಕಾರಣವಾಗಿರುವ ಕರ್ನಾಟಕ ಉಪ ಚುನಾವಣೆ 2011 ಕಣ ಹೋರಾಟಕ್ಕೆ ಸಿದ್ಧವಾಗಿದೆ. ರಾಜ್ಯದ ಮೂರು ಪ್ರಮುಖ ಪಕ್ಷಗಳಿಗೂ ಚನ್ನಪಟ್ಟಣ ಪ್ರತಿಷ್ಠೆಯ ಕಣವಾಗಿದೆ. ಬಂಗಾರಪೇಟೆ ಹಾಗೂ ಜಗಳೂರಿನಲ್ಲಿ ಆಡಳಿತ ಪಕ್ಷ ಬಿಜೆಪಿಗೆ ತೀವ್ರ ಪೈಪೋಟಿ ನೀಡಲು ಜೆಡಿಎಸ್, ಕಾಂಗ್ರೆಸ್ ಸಜ್ಜಾಗಿವೆ. ಕುಮಾರಸ್ವಾಮಿ, ಸುದೀಪ್ ರಿಂದ ಹಿಡಿದು ಅನಿತಾ, ಭವಾನಿ ತನಕ ಅನೇಕರ ಹೆಸರುಗಳು ಅಭ್ಯರ್ಥಿಗಳ ಪಟ್ಟಿಯಲ್ಲಿ ಸೇರುವ ಸಾಧ್ಯತೆ ಉಂಟಾಗಿ ಕುತೂಹಲ ಕೆರಳಿಸಿತ್ತು.

ಮತದಾನದ ದಿನಾಂಕ : ಏಪ್ರಿಲ್ 9
ನಾಮಪತ್ರ ಸಲ್ಲಿಕೆಗೆ ಕೊನೆ ದಿನ: ಮಾರ್ಚ್ 23
ನಾಮಪತ್ರ ಹಿಂಪಡೆಯಲು ಕೊನೆ ದಿನಾಂಕ : ಮಾರ್ಚ್ 26
ಚುನಾವಣೆ ಫಲಿತಾಂಶ : ಮೇ.13

ಅಪರೇಷನ್ ಕಮಲದಿಂದ ತೆರವಾಗಿರುವ ಚನ್ನಪಟ್ಟಣ, ಬಂಗಾರಪೇಟೆ (ಎಸ್ ಸಿ ಮೀಸಲು ಕ್ಷೇತ್ರ), ಜಗಳೂರು(ಎಸ್ ಟಿ ಮೀಸಲು ಕ್ಷೇತ್ರ) ಈ ಮೂರು ಕ್ಷೇತ್ರಗಳಿಗೆ ಎ.9ರಂದು ಮತದಾನ ನಡೆಯಲಿದ್ದು, ಮೇ. 13ರಂದು ಅಸ್ಸಾಂ, ಪಶ್ಚಿಮ ಬಂಗಾಲ, ತಮಿಳುನಾಡು, ಕೇರಳ ಹಾಗೂ ಪುದುಚೇರಿ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶದೊಂದಿಗೆ ಕರ್ನಾಟಕ ಉಪ ಚುನಾವಣೆ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.

ಕಣದಲ್ಲಿರುವ ಅಭ್ಯರ್ಥಿಗಳು : ಮಾರ್ಚ್ ಕೊನೆ ವಾರದಲ್ಲಿ ಸುಮಾರು 69 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಚನ್ನಪಟ್ಟಣ ಕ್ಷೇತ್ರದಲ್ಲಿ 30 ನಾಮಪತ್ರಗಳು ಸಲ್ಲಿಕೆಯಾಗಿದೆ. 21 ಮಂದಿ ಜಗಳೂರು ಕ್ಷೇತ್ರ ಹಾಗೂ 18 ಮಂದಿ ಬಂಗಾರಪೇಟೆಯಲ್ಲಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಮಾ. 26ರ ನಂತರ ಸುಮಾರು 36 ಮಂದಿ ನಾಮಪತ್ರ ಹಿಂಪಡೆದಿದ್ದರಿಂದ ಕಣದಲ್ಲಿ ಈಗ 33 ಜನ ಮಾತ್ರ ಉಳಿದಿದ್ದಾರೆ.

ಚನ್ನಪಟ್ಟಣ: ಸಿಪಿ ಯೋಗಿಶ್ವರ್ (ಬಿಜೆಪಿ), ಸಿಂಲಿಂ ನಾಗರಾಜ್ (ಜೆಡಿಎಸ್ ), ರಘುನಂದನ ರಾಮಣ್ಣ(ಕಾಂಗ್ರೆಸ್) ರಿದಂತೆ ಒಟ್ಟು 15 ಮಂದಿ.
ಬಂಗಾರಪೇಟೆ: ಎಂ ನಾರಾಯಣಸ್ವಾಮಿ(ಬಿಜೆಪಿ), ಕೆಎಂ ನಾರಾಯಣಸ್ವಾಮಿ(ಕಾಂಗ್ರೆಸ್), ಎಚ್ ಮಂಜುನಾಥ್(ಜೆಡಿಎಸ್) ಸೇರಿದಂತೆ ಒಟ್ಟು 10 ಮಂದಿ.
ಜಗಳೂರು: ಎಸ್ ವಿ ರಾಮಚಂದ್ರ(ಬಿಜೆಪಿ), ದೇವೇಂದ್ರಪ್ಪ(ಕಾಂಗ್ರೆಸ್) ಹಾಗೂ ವೆಂಕಟೇಶಪ್ಪ(ಜೆಡಿಎಸ್ )ಸೇರಿದಂತೆ ಒಟ್ಟು 8 ಮಂದಿ.

English summary
Karnataka By Election 2011: Here is the list of candidates from BJP, JDS and Congress in the fray for the April 9 bypoll. Totally 33 candidates in three assembly constituency Bangarpet, Channapatna, Jagaluru in Karnataka. counting of votes will be on May 13 along with Assam, West Bengal, Tamil Nadu, Kerala and Puducherry assembly elections said Election Commission
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X