• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಎಸ್ ಪಿಎನ್ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಗೆ ಜಾಕ್ ಪಾಟ್

By Srinath
|

ನವದೆಹಲಿ, ಏ. 5: ಭಾರತ ವಿಶ್ವ ಕಪ್ ಗೆದ್ದಾಗಿದೆ. ಕಡುಬೇಸಿಗೆಯಲ್ಲಿ ಕಂಡುಬಂದ ಮಹಾಮಳೆ ನಿಂತಿದೆ. ಆದರೆ ಇನ್ನೂ ಹನಿ ಉದುರುತ್ತಿದೆ. ಸುದ್ದಿಗಳ ಪ್ರವಾಹ ಧುಮ್ಮಿಕ್ಕುತ್ತಿದೆ. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ನೂತನ ವಿಶ್ವ ಚಾಂಪಿಯನ್ಸ್ ಟೀಂ ಇಂಡಿಯಾಗೆ ಉಘೆ ಉಘೆ ಎಂದಿದ್ದಾರೆ. ಅದ್ಭುತ ಪ್ರದರ್ಶನ ತೋರಿದ ಧೋನಿ ಬಳಗಕ್ಕೆ ಅಮೆರಿಕದ ಜನತೆ ಪರವಾಗಿ ಹತ್ಪೂರ್ವಕ ಅಭಿನಂದನೆ ತಿಳಿಸಿದ್ದಾರೆ.

ಈ ಮಧ್ಯೆ, ಈ ಬಾರಿಯ ವಿಶ್ವ ಕಪ್ ನಿಂದಾಗಿ ವಿಶ್ವ ಯಾವ ಕ್ರಿಕೆಟ್ ಮಂಡಳಿ, ಕ್ರಿಕೆಟ್ ತಂಡ, ಕ್ರಿಕೆಟ್ ಆಟಗಾರ ಕೊನೆಗೆ ಸ್ವತಃ ಕ್ರಿಕೆಟ್ ಆಟಕ್ಕೆ ವ್ಯಾವಹಾರಿಕವಾಗಿ ಏನೆಲ್ಲ ಲಾಭವಾಗಿದೆಯೋ ಸದ್ಯಕ್ಕೆ ಲೆಕ್ಕಾಚಾರಕ್ಕೆ ಸಿಕ್ಕಿಲ್ಲ. ಆದರೆ ವಿಶ್ವ ಕಪ್ ಪಂದ್ಯಾವಳಿಯನ್ನು ವಿಶ್ವದಾದ್ಯಂತ ಕ್ರಿಕೆಟ್ ಪ್ರಿಯರ ಮನ, ಮನೆಗಳಿಗೆ ಅಚ್ಚುಕಟ್ಟಾಗಿ ತಲುಪಿಸಿದ ಅಧಿಕೃತ ಟಿವಿ ಪ್ರಸಾರಕರಾದ ESPN STAR Sports (ESS) ಚಾನೆಲ್ ಗೆ ಅದೃಷ್ಟ ಯಾವ ಪಾಟಿ ಖುಲಾಯಿಸಿದೆ ಅಂದರೆ ಚಾನೆಲ್ ಗೆ ಬರೋಬ್ಬರಿ 800 ಕೋಟಿ ರು. ತಂದುಕೊಟ್ಟಿದೆ.

ಇದುವರೆಗಿನ ಕ್ರಿಕೆಟ್ ಚರಿತ್ರೆಯಲ್ಲಿ ಮೊಹಾಲಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ಸೆಮಿಫೈನಲ್ ಜಿದ್ದಾಜಿದ್ದಿಯನ್ನು ಕ್ರಿಕೆಟ್ ಪ್ರಿಯರು ಗರಿಷ್ಠ ಸಂಖ್ಯೆಯಲ್ಲಿ ವೀಕ್ಷಿಸಿದ್ದಾರೆ. ಇದರಿಂದಾಗಿ ಜಾಹೀರಾತು ದರ ಯರ್ರಾಬಿರ್ರಿ ಏರಿ, ಚಾನೆಲ್ ನತ್ತ ಹಣದ ಸುನಾಮಿಯನ್ನೇ ಹರಿಸಿದೆ. ವಿಶ್ವ ಕಪ್ ಆರಂಭದಲ್ಲಿ 10 ಸೆಕೆಂಡ್ ಗೆ 4 ಲಕ್ಷ ರು. ನಿಗದಿಯಾಗಿತ್ತು. ಅದು ಬರುಬರುತ್ತಾ ಕ್ರಿಕೆಟ್ ಜ್ವರ ಏರಿದ್ದೇ ಏರಿತ್ತು.

ಕ್ರಿಕೆಟ್ ಕ್ರೇಜ್ ಅನ್ನು ಸರಿಯಾಗಿ 'ಅರ್ಥೈಸಿಕೊಂಡ' ESS ಚಾನೆಲ್ ಫೈನಲ್ ವೇಳೆಗೆ ಅಂತಿಮ ಕ್ಷಣದಲ್ಲಿ 10 ಸೆಕೆಂಡ್ ಜಾಹೀರಾತಿಗೆ ದುಬಾರಿ ಪ್ರೀಮಿಯಂ ದರದಲ್ಲಿ 24 ಲಕ್ಷ ರು. ನಿಗದಿಪಡಿಸಿತ್ತು. ಆದರೆ ಜಾಹೀರಾತು ನೀಡುವ ಕಂಪನಿಗಳು ಹಿಂದುಮುಂದು ನೋಡಲಿಲ್ಲ. ನೈಕ್ ಕಂಪನಿಯ ಬ್ಲೀಡ್ ಇಂಡಿಯಾ ಬ್ಲೀಡ್, ಅಮಿಟಿ ಗ್ರೂಪ್, ವೋಕ್ಸ್ ವ್ಯಾಗನ್ ಹೀರೊ ಹೋಂಡಾ, ಉಶಾ ಫ್ಯಾನ್ಸ್, ಮತ್ತು ದೀಪಾವಳಿಗೆ ಬಿಡುಗಡೆಯಾಗಲಿರುವ ಶಾರುಖ್ ಖಾನ್ ಅವರ ಬಿಗ್ ಬಜೆಟ್ ಸಿನಿಮಾ ರಾ.ವನ್ ಜಾಹೀರಾತುಗಳು ಈ ಸಂದರ್ಭದಲ್ಲಿ ವಿಜೃಂಭಿಸಿದವು. ಅಂದಹಾಗೆ, ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) 2007ರಿಂದ 2015ರ ವರೆಗೆ ಆಯೋಜಿಸುವ ಎಲ್ಲ ಪಂದ್ಯಗಳ ಪ್ರಸಾರ ಹಕ್ಕನ್ನು 1.1 ಶತಕೋಟಿ ಡಾಲರ್ (4,900 ಕೋಟಿ ರು) ನೀಡಿ ತನ್ನದಾಗಿಸಿಕೊಂಡಿದೆ.

English summary
The 2011 cricket world cup has proved to be a golden goose for ESPN STAR Sports (ESS), with the telecaster raking in around Rs 800 crore from the tournament. They say with the India-Pakistan semi-final the most viewed on TV in the history of cricket, the broadcaster got a handful of advertisers who paid heavy premium to board on the final stage of the tournament.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more