ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಕೆಟ್ ಸಂಭ್ರಮಾಚರಣೆಗೆ ಸೂತಕದ ಛಾಯೆ

By Mahesh
|
Google Oneindia Kannada News

ಮಂಡ್ಯ/ದಾವಣಗೆರೆ. ಏ.3: ವಿಶ್ವಕಪ್ 2011 ಗೆದ್ದ ಸಂಭ್ರಮಾಚರಣೆಯಲ್ಲಿ ಇಡೀ ಭಾರತ ಮುಳುಗಿರುವಾಗ ರಾಜ್ಯದ ಕೆಲವೆಡೆ ಸೂತಕ ಛಾಯೆ ಆವರಿಸಿದೆ. ಮಂಡ್ಯದಲ್ಲಿ ಒಬ್ಬ ಕ್ರಿಕೆಟ್ ಅಭಿಮಾನಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ, ದಾವಣಗೆರೆ, ಬಳ್ಳಾರಿಯಲ್ಲಿ ಅಭಿಮಾನಿಗಳು ಗೆದ್ದ ಸಂಭ್ರಮ ಸಾವಿಗೆ ದೂಡಿದೆ.


ಪಾಂಡವಪುರದ ಮಹಾಕಾಳೇಶ್ವರಿ ಬಡಾವಣೆಯ ಯುವಕ ಸುಜಲ್ ಕುಮಾರ್(22) ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತನ ನೆಚ್ಚಿನ ಆರಾಧ್ಯ ದೈವ ಸಚಿನ್ ತೆಂಡೂಲ್ಕರ್ ನೂರನೇ ಶತಕ ಗಳಿಸದೆ ಔಟಾಗಿದ್ದು ಇದಕ್ಕೆ ಕಾರಣ ಎನ್ನಲಾಗಿದೆ. ಸಚಿನ್ ಆಟವನ್ನು ಕಣ್ಣು ಮಿಟುಕಿಸದಂತೆ ನೋಡುತ್ತಿದ್ದ ಸುಜಲ್, 18 ರನ್ ಗಳಿಸಿ ಔಟಾಗುತ್ತಿದ್ದಂತೆ, ಹತಾಶನಾಗಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬಿಎ ಓದುತ್ತಿದ್ದ ಸುಜಲ್ ತನ್ನ ಕಾಲೇಜಿನಲ್ಲಿ ಸಚಿನ್ ಶತಕ ಗಳಿಸುತ್ತಾರೆ ಎಂದು ಭಾರಿ ಬೆಟ್ಟಿಂಗ್ ಕಟ್ಟಿದ್ದ ಎಂದು ತಿಳಿದುಬಂದಿದೆ. ಸಾವಿಗೆ ಕಾರಣ ಸ್ಪಷ್ಟವಾಗದಿದ್ದರೂ, ಕ್ರಿಕೆಟ್ ಹುಚ್ಚಿಗೆ ಬಲಿಯಾಗಿರುವುದಂತೂ ಸತ್ಯ. ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆದಿದೆ ಎಂದು ಪಟ್ಟಣ ಠಾಣಾಧಿಕಾರಿ ಹೇಳಿದ್ದಾರೆ. ವ್ಯಕ್ತಿ ಪೂಜೆಗಿಂತ ವ್ಯಕ್ತಿತ್ವ ಪೂಜೆ

ದಾವಣಗೆರೆಯಲ್ಲಿ ದುರ್ಘಟನೆ: ಲಂಕನ್ನರನ್ನು ಮಣಿಸಿ ವಿಶ್ವಕಪ್ 2011 ಗೆದ್ದ ಟೀಂ ಇಂಡಿಯಾದ ಗೆಲುವಿನ ಸಂಭ್ರಮಾಚರಣೆ

English summary
World Cup 2011 : crazy cricket fans who can't control emotions are ending their life miserably. Sachin Tendulkar fan Sujith committed suicide in Pandavapura, A fan from Davangere dead of heart attack after world cup victory celebrations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X