ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೈನಲ್ ಪಂದ್ಯಕ್ಕೆ 5,000 ಕೋಟಿ ರೂ ಬೆಟ್ಟಿಂಗ್?

By Mahesh
|
Google Oneindia Kannada News

ಮುಂಬೈ, ಏ.3: ಭಾರತ ಮತ್ತು ಶ್ರೀಲಂಕಾ ನಡುವಿನ ವಿಶ್ವಕಪ್ ಕ್ರಿಕೆಟ್ ಹಣಾಹಣಿಯಿಂದ ಸುಮಾರು 5,000 ಕೋಟಿ ರೂಪಾಯಿ ಬೆಟ್ಟಿಂಗ್ ವ್ಯವಹಾರ ನಡೆದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ನಡೆದ ಬೆಟ್ಟಿಂಗ್ ದಂಧೆಗೆ ಹೋಲಿಸಿದರೆ ಇದು ಕಮ್ಮಿ ಎನ್ನಬಹುದು. ಸೆಮಿಫೈನಲ್ ಪಂದ್ಯದ ವೇಳೆ ಸುಮಾರು 6,500 ಕೋಟಿ ರು ಬೆಟ್ಟಿಂಗ್ ನಡೆದಿದೆ ಎಂಬ ವರದಿ ಇದೆ.

ಫೈನಲ್ ಯಾರು ಪ್ರವೇಶಿಸುತ್ತಾರೆ. ಟಾಸ್ ಯಾರು ಗೆಲ್ಲುತ್ತಾರೆ ಎಂಬುದರಿಂದ ಹಿಡಿದು, ಬಾಲ್ ಬೈ ಬಾಲ್ ಸ್ಪಾಟ್ ಬೆಟ್ಟಿಂಗ್ ನಡೆಯುತ್ತದೆ. ಮುಂಬೈ ಪೊಲೀಸರ ಭಯದಿಂದ ಮಾಮೂಲಿ ತಾಣಗಳನ್ನು ಬಿಟ್ಟು ಹೊಸ ತಾಣಗಳಲ್ಲಿ ದಂಧೆ ನಡೆಸಿರುವ ಬೆಟ್ಟಿಂಗ್ ಜಾಲಕ್ಕೆ ಕೊಂಚ ಲಾಸ್ ಆಗಿದೆಯಂತೆ. ಭಾರತ, ಪಾಕಿಸ್ತಾನ ಅಲ್ಲದೆ ಗಲ್ಫ್ ರಾಷ್ಟ್ರಗಳಲ್ಲೂ ಬೆಟ್ಟಿಂಗ್ ಅವ್ಯಾಹತವಾಗಿ ನಡೆದಿದೆ. ಈ ಮೂಲಕ ವಿಶ್ವಕಪ್ ನಿಂದ ಐಸಿಸಿ ನ್ಯಾಯಯುತವಾಗಿ ಗಳಿಸಿದ ಮೊತ್ತದ ಐದು ಪಟ್ಟು ವ್ಯವಹಾರ ಬೆಟ್ಟಿಂಗ್ ಬಿಸಿನೆಸ್ ನಲ್ಲಿ ನಡೆಯುವುದು ಖಾತ್ರಿಯಾಗಿದೆ.

ವಿಶ್ವಕಪ್ : ಮುಖಪುಟ | ಚಿತ್ರಪಟ | ಟಾಪ್ ಬ್ಯಾಟ್ಸ್ ಮನ್| ಟಾಪ್ ಬೌಲರ್

ಭಾರತ ಫೈನಲ್ ಪ್ರವೇಶಿಸುತ್ತದೆ ಎಂದು 57 ಪೈಸೆ ಮತ್ತು ಶ್ರೀಲಂಕಾಕ್ಕೆ 1.70 ರೂಪಾಯಿಯಂತೆ ಬೆಟ್ಟಿಂಗ್ ನಡೆದಿದೆ. ಇದೇ ವೇಳೆ ಶ್ರೀಲಂಕಾ ಟಾಸ್ ಗೆದ್ದಿದ್ದು, ಬ್ಯಾಟಿಂಗ್ ಆಯ್ದುಕೊಳ್ಳಲಿದೆ ಮತ್ತು ಅದು 250 ರಿಂದ 260 ರನ್ ಗಳಿಸುತ್ತದೆ ಎಂದು ಬುಕ್ಕಿಗಳು ಭವಿಷ್ಯ ನುಡಿದಿದ್ದರು. ಮುಂಬೈ ಪೊಲೀಸರು ಕಿದ್ವಾಯಿ ನಗರ, ಸ್ವರೂಪ್ ನಗರ, ಶಿವಾಜಿ ನಗರ, ಯಶೋಧ ನಗರ, ಬಿರ್ಹಾನ ರಸ್ತೆ ಮುಂತಾದ ಸ್ಥಳಗಳಲ್ಲಿ ಬುಕ್ಕಿಗಳನ್ನು ಹುಡುಕಿ ಹುಡುಕಿ ಸುಸ್ತಾಗಿದ್ದಾರೆ.

ಬುಕ್ಕಿಗಳ ಅಡ್ಡಾ ಚೇಂಜ್ : ಫೈನಲ್ ಪಂದ್ಯದಲ್ಲಿ ಮುಂಬೈ ನಗರದಲ್ಲಿ ಶೋಬನ್ ಕಾಲಚೌಕಿ, ಅಶೋಕ್ ರೋಯಲ್, ಪಟಿಯ ಕನೋ, ವೀರೇಂದ್ರ ಬೊರಿವಲಿ, ಜ್ಯೂನಿಯರ್ ಕೋಲ್ಕತ್ತ, ಮಂಡಿ ದಿಲ್ಲಿ, ಪ್ರಕಾಶ್ ಕ್ಯಾಸೆಟ್ ಮತ್ತು ದಿಲೀಪ್ ಸಧನ ಪ್ರಮುಖ ಬುಕ್ಕಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ರನ್ ಚೇಸಿಂಗ್ ನಲ್ಲಿ ಭಾರತಕ್ಕೆ ಕೊಂಚ ಎಡವಟ್ಟಾದರೂ ಹೆಚ್ಚಿನ ಬುಕ್ಕಿಗಳು, ಭಾರತದ ಪರವೇ ಬೆಟ್ ಕಟ್ಟಿದ್ದರು.

ಬುಕ್ಕಿಗಳಿಗೆ ಕೊಂಚ ಲಾಸ್ : ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನದಲ್ಲಿ ಒಂದು ತಂಡ ಫೈನಲ್ ಪ್ರವೇಶಿಸುವುದು ಖಚಿತ ಎಂದು ಮುಂಚಿತವಾಗಿ ಬೆಟ್ ಕಟ್ಟಿದ್ದ ಬುಕ್ಕಿಗಳಿಗೆ ಭಾರಿ ಹೊಡೆತ ಬಿದ್ದಿದೆ. ಸ್ಪಾಟ್ ಬುಕ್ಕಿಂಗ್ ಮಾಡುವ ಬುಕ್ಕಿಗಳು ಮಾತ್ರ ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ವಿಶ್ವಕಪ್ ನಲ್ಲಿ ಆದ ನಷ್ಟವನ್ನು ಐಪಿಎಲ್ ಪಂದ್ಯಗಳಲ್ಲಿ ತುಂಬಿಸಿಕೊಳ್ಳಲು ಈಗಿಂದೀಗಲೇ ಬೆಟ್ಟಿಂಗ್ ತಯಾರಿ ನಡೆಸುತ್ತಿದ್ದಾರೆ.

English summary
Bookies shifted their base from Mumbai city But Punters made around Rs. 5,000 cr in the India vs Sri Lanka WC Finals. Though this number is much less compare to Rs 6,500 crore worth betting during India vs Pakistan Semi Finals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X