• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆತ್ತಲೆ ಪೂನಂ ಮೇಲೆ ಬಿತ್ತು ಕೇಸು

By Srinath
|

ಭೂಪಾಲ್, ಏಪ್ರಿಲ್ 2: ಭಾರತ ವಿಶ್ವ ಕಪ್ ಗೆದ್ದರೆ ಬೆತ್ತಲೆಯಾಗುವ ಬೆದರಿಕೆಯೊಡ್ಡಿರುವ ತರಲೆ ಪೂನಂ ಪಾಂಡೆ ಎಂಬ ಹದಿಹರಯದ ಮಾಡೆಲ್ ಅನ್ನು ವಕೀಲರೊಬ್ಬರು ಕಟೆಕಟೆಗೆ ಎಳೆದಿದ್ದಾರೆ. ಜತೆಗೆ ಬಂಟ್ವಾಳದ ಬಂಟ ವಿಜಯ್ ಮಲ್ಯ ಸಾಹೇಬರನ್ನೂ. ಆಯಮ್ಮ ಪೂನಂ ಬ್ರಾಹ್ಮಣರಿಗೆ ಅವಮಾನ ಮಾಡಿದ್ದಾಳೆ ಎಂದೂ, ಇವಯ್ಯ ಮಲ್ಯ ಪೂನಂಳನ್ನು ತನ್ನ ಕಿಂಗ್ ಫಿಷರ್ ಕ್ಯಾಲೆಂಡರ್ [ಗ್ಯಾಲರಿ] ನಲ್ಲಿ ತೆಳು ಉಡುಪಿನಲ್ಲಿ ನಿಲ್ಲಿಸುವ ಮೂಲಕ ಅವಳನ್ನು ಬೆತ್ತಲೆ ಜಗತ್ತಿಗೆ ಪರಿಚಯಿಸಿದ್ದಾನೆ ಎಂದೂ ವಕೀಲರು ತಮ್ಮ ದೂರುದುಮ್ಮಾನ ತೋಡಿಕೊಂಡಿದ್ದಾರೆ.

ಒಂದು ವೇಳೆ ಕ್ರಿಕೆಟ್ ಸಮ್ಮುಖದಲ್ಲಿ ಅವಳ ಬೆತ್ತಲೆ ಆಟ ನಡೆಯದಿದ್ದರೂ ಬ್ರಾಹ್ಮಣ ಕುಡಿಯ ಇಂತಹ ಅವಹೇಳನಕಾರಿ ನಡೆ ಅಕ್ಷಮ್ಯ. ಫೈನಲ್ ಆಗಿ ಭಾರತೀಯ ಸಂಸ್ಕೃತಿಗೂ ಅವಮಾನ ಎಂದು ವಕೀಲ ಆರ್.ಕೆ. ಪಾಂಡೆ ಎಂಬವವರು ವ್ಯಗ್ರರಾಗಿದ್ದು, ಇಬ್ಬರನ್ನೂ ಸುಮ್ಮನೆ ಬಿಡಬೇಡಿ. ಸರಿಯಾಗಿ ಬುದ್ಧಿ ಕಲಿಸಿ ಅವರಿಗೆ ಎಂದು ಅಲವತ್ತುಕೊಂಡಿದ್ದಾರೆ. ಕೇಸು ಎಲ್ಲ ಮುಗಿದ ಮೇಲೆ ಏಪ್ರಿಲ್ 5ರಂದು ವಿಚಾರಣೆಗೆ ಒಳಪಡಲಿದೆ.

'ಯಾರೇ ಕೂಗಾಡಲಿ, ಊರೇ ಹೋರಾಡಲಿ ನನ್ನ ಬೆತ್ತಲೆಗೆ ಭಂಗವಿಲ್ಲ' ಎಂದು ಪೂನಮ್ಮ ತಾನು ವಿವಸ್ತ್ರಳಾಗುವುದನ್ನು ಖಚಿತಪಡಿಸಿದ್ದಾಳೆ. ಆಟಗಾರರ ಡ್ರೆಸ್ಸಿಂಗ್ ರೂಮಿನಲ್ಲಾದರೂ ಸರಿ ವಾಂಖೆಡೆ ಸ್ಟೇಡಿಯಂನ ನಟ್ಟನಡುವೆಯಾದರೂ ಬೆತ್ತಲೆ ಪ್ರದರ್ಶನ ನಡೆಯುವುದರಲ್ಲಿ ಯಾವುದೇ ಅನುಮಾನ ಬೇಡ ಎಂದೂ ಗ್ಯಾರಂಟಿ ನೀಡಿದ್ದಾಳೆ. ಇದಕ್ಕೆ ತಾವೂ ಸಾಕ್ಷಿಯಾಗಲಿದ್ದೇವೆ ಎಂದು ಪೂನಂಳ ಅಪ್ಪ-ಅಮ್ಮ ಘೋಷಿಸಿದ್ದಾರೆ!

ಈ ಮಧ್ಯೆ, ಪೂನಂಳ ಬೆತ್ತರಲೆಯನ್ನು ಪರೋಕ್ಷವಾಗಿ ಬೆಂಬಲಿಸಿರುವ ಪೇಟಾ ಎಂಬ ಪ್ರಾಣಿ ದಯಾ ಸಂಘವು ವಸಿ ನಮ್ ಕಡೆನೂ ಹಾಗೇ (ಬೆತ್ತಲೆಯಾಗಿ) ಬಾರವ್ವಾ ಎಂದು ಕರೆದಿದ್ದಾರೆ. ಅಂದರೆ ಬಟ್ಟೆ ಕಳಚುವ ಮುನ್ನವೇ ಮತ್ತೊಂದು ಅಫರ್ ಭಾಗ್ಯ ಪೂನಂಗೆ ಒಲಿದಿದೆ. 'ಕ್ರಿಕೆಟ್ ಬಾಲ್ ಮಾಡಲು ಚರ್ಮ ಬಳಸುತ್ತಾರೆ, ಅದು ನಮ್ಮ ಪ್ರಾಣಿಗಳಿಗೆ ಶ್ಯಾನೆ ನೋವುಂಟು ಮಾಡುತ್ತದೆ. ಆದ್ದರಿಂದ ಸಿಂಥೆಟಿಕ್ ಬಾಲ್ ಬಳಸುವಂತೆ ಐಸಿಸಿ ಮೇಲೆ ಒತ್ತಡ ಹೇರಲು ವಸಿ ಪೂರ್ತಿಯೇ ಬೆತ್ತಲಾಗು ಬಾ' ಎಂದು ಆಹ್ವಾನ ನೀಡಿದ್ದಾರೆ. ಪುಣ್ಯಾತ್ಗಿತ್ತಿ ಏನೆಲ್ಲ ಮಾಡ್ತಾಳೋ ತಪ್ಪದೇ ಅವಳ ಮೇಲೆ ಒಂದು ಕಣ್ಣಿಟ್ಟಿರಿ.

English summary
Model Poonam Pandey, who has vowed to strip naked if India wins the World Cup cricket title, has been dragged to court in Bhopal, with a lawyer accusing her of depicting Brahmins in poor light. RK Pandey also named Indian liquor baron Vijay Mallya, who included a scantily clad Poonam in his company’s Kingfisher calendar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more