ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿದ್ದು ಲೋ ಕಮಾಂಡ್: ಆರ್ಎಸ್ಎಸ್ ಗೆ ನೈತಿಕತೆಯಿಲ್ಲ

By Srinath
|
Google Oneindia Kannada News

H D Deve Gowda
ಬೆಂಗಳೂರು, ಏ. 2: 'ಬಿಜೆಪಿಗೆ ಹೈಕಮಾಂಡ್ ಇಲ್ಲ. ಅದಕ್ಕಿರುವುದು ಲೋ ಕಮಾಂಡ್. ಅದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಭ್ರಷ್ಟಾಚಾರ ಪ್ರಕರಣದಲ್ಲಿ ಸಾಬೀತಾಗಿದೆ' ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಲೇವಡಿ ಮಾಡಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದ ಮೂಲಕ ಶೃಂಗೇರಿಗೆ ತೆರಳುವಾಗ ದೇವೇಗೌಡರು ಮಾಧ್ಯಮದವರೊಂದಿಗೆ ಶುಕ್ರವಾರ ಮಾತನಾಡಿದರು. ಆ ಸಂದರ್ಭದಲ್ಲಿ, 'ಯಡಿಯೂರಪ್ಪನ ವಿರುದ್ಧ ದಾಖಲೆ ಸಮೇತ ಭ್ರಷ್ಟಾಚಾರದ ಆರೋಪ ಬಂದಾಗ ಬಿಜೆಪಿ ಹೈಕಮಾಂಡ್ ಸುಮ್ಮನಿದೆ ಅಂದ್ರೆ ಬಿಜೆಪಿಗೆ ನಿಜವಾಗಿಯೂ ಹೈಕಮಾಂಡ್ ಇದೆಯಾ ಎಂಬ ಪ್ರಶ್ನೆ ಉದ್ಭವಿಸುತ್ತದೆ' ಎಂದು ಗೌಡರು ಗುಡುಗಿದರು.

ಆರ್ಎಸ್ಎಸ್ ಗೆ ನೈತಿಕತೆಯಿಲ್ಲ: 'ಶ್ಯಾಮ್ ಪ್ರಸಾದ್ ಮುಖರ್ಜಿ ಅವರಂಥ ಸಂಘ ಪರಿವಾರದ ನಾಯಕರಿರುವಾಗ ಸಂಘಟನೆಯಲ್ಲಿ ನೈತಿಕತೆ ತುಂಬಿತುಳುಕುತ್ತಿತ್ತು. ಆದರೆ ಈಗ ಆರ್ಎಸ್ಎಸ್ ನೈತಿಕತೆ ಕಳೆದುಕೊಂಡಿದೆ. ಇದೇ ಆರ್ಎಸ್ಎಸ್ ಗಡ್ಕರಿಯಂತಹವರನ್ನು ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿದೆ' ಎಂದು ವ್ಯಂಗ್ಯವಾಡಿದರು.

English summary
Former Prime Minister and JDS supremo H D Deve Gowda has lashed at BJP, describing it as party with lo command. 'It has been prooved umpteen times in case of Corrupt CM Yadiyurappa' Devegowda accused
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X