ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏ.2ರಂದು ಮುಂಬೈನಲ್ಲಿ ರಜೆ ಏಕೆ ಗೊತ್ತಾ?

By Mahesh
|
Google Oneindia Kannada News

ಮುಂಬೈ, ಏ.1: ಶನಿವಾರ ಏಪ್ರಿಲ್ 2 ರಂದು ಎಲ್ಲಾ ಸರ್ಕಾರಿ ಮತ್ತು ಅರೆ ಸರ್ಕಾರಿ ಕಚೇರಿಗಳಿಗೆ ಮಹಾರಾಷ್ಟ್ರ ಸರ್ಕಾರ ರಜೆ ನೀಡಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ವಿಶ್ವಕಪ್ 2011ರ ಅಂತಿಮ ಹಣಾಹಣಿಯಲ್ಲಿ ಭಾರತ ಹಾಗೂ ಶ್ರೀಲಂಕಾ ಸೆಣಸಾಟಕ್ಕೆ ಪೂರ್ವ ಸಿದ್ಧತೆಯಲ್ಲಿರುವ ಮುಂಬೈ ನಗರ ಪೊಲೀಸ್, ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಬಾಂಬ್ ಸ್ಫೋಟ, ಉಗ್ರರ ದಾಳಿ ಭೀತಿ ಇರುವ ಹಿನ್ನೆಲೆಯಲ್ಲಿ ಪಂದ್ಯ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರು ಆದಷ್ಟು ತಮ್ಮ ತಮ್ಮ ಮನೆಗಳಲ್ಲೇ ಕ್ರಿಕೆಟ್ ವೀಕ್ಷಿಸಿ ಆನಂದಿಸಬೇಕು ಎಂದು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

ಶಾಲಾ, ಕಾಲೇಜುಗಳಿಗೆ ಅರ್ಧದಿನ ರಜೆ ಇರುವುದರಿಂದ ಮ್ಯಾಚ್ ನಡೆಯುವ ಸಮಯಕ್ಕೆ ಕ್ರೀಡಾಂಗಣದ ಸಮೀಪ ಜನಜಂಗುಳಿ ತಪ್ಪಿಸಬಹುದು.ದಕ್ಷಿಣ ಮುಂಬೈನ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆ ನಡೆದರೂ ಅದರ ಪರಿಣಾಮವನ್ನು ತಕ್ಷಣಕ್ಕೆ ಶಮನಗಳಿಸಲು ಆದಷ್ಟು ಜನರನ್ನು ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ಬಲ್ಕ್ ಎಸ್ ಎಂಎಸ್ ಸಂದೇಶಗಳನ್ನು ಎರಡು ದಿನಗಳ ಕಾಲ ನಿಷೇಧಿಸಲಾಗಿದೆ ಎಂದು ಪೊಲೀಸ್ ವಕ್ತಾರ ರಾಜ್ ಕುಮಾರ್ ಹೇಳಿದ್ದಾರೆ. [ಗ್ಯಾಲರಿ: ಟಾಪ್ ಬ್ಯಾಟ್ಸ್ ಮನ್| ಟಾಪ್ ಬೌಲರ್

ವಿವಿಧ ಹಂತದ ಸುರಕ್ಷತೆ:
ಮೂರು ವಲಯಗಳ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು 3 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನು ಆಯೋಜಿಸಲಾಗಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆ(CREF), ರಾಜ್ಯ ಮೀಸಲು ಪಡೆ(SREF) ಹಾಗೂ ಕ್ಷಿಪ್ರ ಕಾರ್ಯಪಡೆ(RAF) ಗಳನ್ನು ಬಳಸಿಕೊಳ್ಳಲಾಗುತ್ತಿದೆ. ವಾಂಖೆಡೆ ಕ್ರೀಡಾಂಗಣದ ಸುತ್ತಾ 260ಕ್ಕೂ ಹೆಚ್ಚು ಸಿಸಿಟಿವಿ ಕೆಮೆರಾಗಳನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಶಸ್ತ್ರಧಾರಿ ಎನ್ ಎಸ್ ಜಿ ಕಮಾಂಡೋಗಳು, ಬಾಂಬ್ ನಿರೋಧಕ ದಳ, ಶ್ವಾನದಳ, ಅಗ್ನಿಶಾಮಕದಳ ಸೇರಿದಂತೆ ಹಲವು ಪಡೆಗಳ ಸೇವೆಯನ್ನು ಮುಂಬೈ ಪೊಲೀಸ್ ಪಡೆಯುತ್ತಿದೆ.

English summary
World Cup 2011 : Maharashtra government declared a holiday for the government and semi-government offices in Mumbai. Mumbai Deputy Police Commissioner Rajkumar Vhatkar has welcomed the govt move and said Bulk SMS are banned in Mumbai and Mumbai Police are supported by RAF, CRPF and SREFin ensuring heavy security around Stadium where World Cup 2011 Final will be played on April.2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X