ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬ್ಬಾ, ಕೊನೆಗೂ ಯಡಿಯೂರಪ್ಪ ರಾಜೀನಾಮೆ

By Srinath
|
Google Oneindia Kannada News

Yeddyurappa Resigns
ಬೆಂಗಳೂರು, ಏಪ್ರಿಲ್ 1: ನಾಡಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಕ್ಷದಲ್ಲಿ ಭಿನ್ನಮತೀಯರ ಕಾಟ ತಾಳದೆ ಕೊನೆಗೂ ಗುರುವಾರ ಬೆಳಗ್ಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅದಕ್ಕೂ ಮುನ್ನ, ಬೆಳ್ಳಂ ಬೆಳಗ್ಗೆಯೇ ಮುಖ್ಯಮಂತ್ರಿ ಮನೆಗೆ ಧಾವಂತದಿಂದ ಧಾವಿಸಿದ ಯಡಿಯೂರಪ್ಪ ನಿಷ್ಠರು 'ಪಕ್ಷದಲ್ಲಿ ಭಿನ್ನಮತ ತಾರಕಕ್ಕೇರಿದೆ. ಇನ್ನು ಕುರ್ಚಿ ಉಳಿಸಿಕೊಳ್ಳುವುದು ಅಸಾಧ್ಯ. ನೀವಾಗಿಯೇ ರಾಜೀನಾಮೆ ಸಲ್ಲಿಸಿ ಬಿಡಿ' ಎಂದು 'ಭಿನ್ನ'ವಿಸಿಕೊಂಡಿದ್ದರು.

ನಿಷ್ಠರು ನೀಡಿದ ಮಾಹಿತಿಯಿಂದ ಕಂಗಾಲಾದಂತೆ ಕಂಡುಬಂದ ಯಡಿಯೂರಪ್ಪ ಅವರು ಸೀದಾ ಗಾಳಿ ಆಂಜನೇಯ ದೇವಸ್ಥಾನಕ್ಕೆ ತೆರಳಿದರು. ಅಲ್ಲಿ ದೇವರಿಗೆ ಸಾಷ್ಟಾಂಗ ನಮಸ್ಕಾರ ಹಾಕಿ, ಐದು ನಿಮಿಷ ಏಕಾಂತದಲ್ಲಿ ಧ್ಯಾನಿಸತೊಡಗಿದರು. ಆ ಸಂದರ್ಭದಲ್ಲಿ ಟಿವಿ ಮಾಧ್ಯಮಗಳು ಅವರನ್ನು ಸುತ್ತುವರಿದವಾದರೂ ಯಡಿಯೂರಪ್ಪ ಅದಕ್ಕೆ ನಯವಾಗಿಯೇ ಅವಕಾಶ ನಿರಾಕರಿಸಿದರು. ಬಳಿಕ, ಟಿವಿ ಕ್ಯಾಮೆರಾಗಳ ಕಣ್ಣು ತಪ್ಪಿಸಿ ನೇರವಾಗಿ ರಾಜ್ಯಪಾಲರ ಅಂಗಳದಲ್ಲಿ ಕಾಣಿಸಿಕೊಂಡ ಯಡಿಯೂಪ್ಪ ಅವರು ರಾಜ್ಯಪಾಲ ಭಾರದ್ವಾಜ್ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು.

ಭೇಟಿ ವೇಳೆ 'ಹೇಗಾದರೂ ಮಾಡಿ ತಮ್ಮನ್ನು ಉಳಿಸಿಕೊಳ್ಳಿ' ಎಂದು ಯಡಿಯೂರಪ್ಪ ರಾಜ್ಯಪಾಲರನ್ನು ಅಂಗಲಾಚಿದರು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರು ರಾಜ್ಯಪಾಲರ ನಿವಾಸದಲ್ಲಿ ಮರೆಯಲ್ಲಿ ನಿಂತು ತಮ್ಮ ಪುತ್ರ ಕುಮಾರಸ್ವಾಮಿ ಅವರೊಂದಿಗೆ ಗಹನ ಚರ್ಚೆಯಲ್ಲಿ ತೊಡಗಿರುವುದು ಕಂಡುಬಂದಿತು. ಇದನ್ನು ಗಮನಿಸಿದ ಯಡಿಯೂರಪ್ಪ, ತಮ್ಮ ಪದಚ್ಯುತಿಗೆ ದೇವೇಗೌಡರದೇ ಕಿತಾಪತಿಯೊ ಅಥವಾ ತಮ್ಮ ನಂತರ ಮಗನ ಪಟ್ಟಾಭಿಷೇಕಕ್ಕೆ ರಾಜ್ಯಪಾಲರನ್ನು ಭೇಟಿಯಾಗಲು ಬಂದಿದ್ದಾರೋ ಎಂಬ ಗೊಂದಲದಲ್ಲಿದ್ದಂತೆ ಭಾಸವಾಯಿತು.

ಆ ವೇಳೆಗೆ ಅವರ ನಿಷ್ಠರು ಪ್ರತ್ಯಕ್ಷರಾಗಿ ಪರಿಸ್ಥಿತಿ ಕೈಮೀರಿದೆ. ಎಲ್ಲ ದೇವ ಲೀಲೆ ಎಂದು ಉಸುರತೊಡಗಿದರು. 'ತಮಗಾಗಿ ಯಾರೋ ಸರಿಯಾದ ಖೆಡ್ಡಾ ತೋಡಿದ್ದಾರೆ. ಇನ್ನು ಬೇರೆ ದಾರಿ ಇಲ್ಲ' ಎಂದು ಪರಿಭಾವಿಸಿದ ಯಡಿಯೂರಪ್ಪ ಅವರು ರಾಜೀನಾಮೆ ಒಗಾಯಿಸಿ, ತಮ್ಮ ಆಪ್ತ ಸಚಿವರಾದ ಶೋಭಾ ಕರಂದ್ಲಾಜೆ ಅವರ ಮನೆಯತ್ತ ತೆರಳಿದ್ದಾರೆ ಎಂದು ಮೂಲಗಳು ಹೇಳಿವೆ. ತಾಜಾ ಮಾಹಿತಿಗಾಗಿ ಕಾಯಲಾಗುತ್ತಿದೆ.

ಈ ಮಧ್ಯೆ, ಯಡಿಯೂರಪ್ಪ ಅವರ ನಿಷ್ಠಾವಂತ ಸಚಿವ ಸುರೇಶ್ ಕುಮಾರ್ ಅವರು ಪರಿಸ್ಥಿತಿಯನ್ನು ವಿವರಿಸಿ, 'ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಈ ಗಾಳಿ ಸುದ್ದಿಯ ಹಿಂದೆ ಯಾರದೋ ಕುತಂತ್ರ ಅಡಗಿದೆ. ಇಂದಿಗೂ ಯಡಿಯೂರಪ್ಪ ಅವರೇ ನಾಡಿನ ಮಖ್ಯಮಂತ್ರಿ. ಇದರಲ್ಲಿ ಯಾವುದೇ ಅನುಮಾನ ಇಲ್ಲ' ಎಂದು ಎಲ್ಲ ಮಾಧ್ಯಮಗಳಿಗೂ, ವಿಶೇಷವಾಗಿ ಈ ಸುದ್ದಿಯನ್ನು ಶ್ರದ್ಧೆಯಿಂದ ಪ್ರಕಟಿಸಿದ ದಟ್ಸ್ ಕನ್ನಡ ಬಳಗಕ್ಕೆ ಇ-ಮೇಲ್ ಮಾಡಿ ತಿಳಿಸಿದ್ದಾರೆ! ಹ.. ಹ್ಹ .. ಹ್ಹಾ...!

English summary
Karnataka Chief Minister BS Yeddyurappa, whose seat was insecured through out his tenure, has ultimately resigned today (April 1). His loyalists in the Ministry indicated him that the situation is out of control. As such the resignation is inevitable. Taking cue, Yeddyurappa promptly tendered his resignation to the CM post. Latest reports are awaited. ha! ha! ha!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X