ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಕೆಟ್ ಜ್ವರ: ಕಾಶ್ಮೀರಿಗಳಿಂದ ಭರ್ಜರಿ 'ಬ್ಯಾಟಿಂಗ್'

By Srinath
|
Google Oneindia Kannada News

kashmir bat industry
ಶ್ರೀನಗರ, ಮಾ. 31: ಕಾಶ್ಮೀರ ಬ್ಯಾಟ್ ಗಳಿಗೆ ಶುಕ್ರದೆಸೆ ಬಂದಿದೆ. ಥ್ಯಾಂಕ್ಸ್ ಟು ವಿಶ್ವ ಕ್ರಿಕೆಟ್. ಪ್ರಸಕ್ತ ವಿಶ್ವ ಕ್ರಿಕೆಟ್ ಮುಕ್ತಾಯ ಹಂತಕ್ಕೆ ಬಂದಿದ್ದು, ಆತಿಥೇಯ ಉಪಖಂಡದ ಆರ್ಥಿಕತೆಗೆ ಮಹತ್ವದ ಕಾಣಿಕೆ ನೀಡಿದೆ. ಅದರಲ್ಲೂ ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನ ಕೊನೆಯ ಚರಣದವರೆಗೂ ಪಾದ ಬೆಳೆಸಿದ್ದು ಕ್ರಿಕೆಟ್ ಲೋಕಕ್ಕೆ ಮಹದುಪಕಾರವಾಗಿದೆ. ಕಾಶ್ಮೀರದ ಉದಾಹರಣೆಯನ್ನೇ ತೆಗೆದುಕೊಳ್ಳಿ.

ಬ್ಯಾಟ್ ತಯಾರಿಕೆ ಕೈಗಾರಿಕೆ ಭಾರತದಲ್ಲಿ ಹೆಚ್ಚಾಗಿ ಕಂಡುಬರುವುದು ಕಾಶ್ಮೀರದಲ್ಲಿ. ಇಲ್ಲಿನ ಅವಾಂತಿಪುರದಲ್ಲಿ ಪ್ರತಿ ವರ್ಷ 30 ಲಕ್ಷ ಬ್ಯಾಟ್ ಗಳು ತಯಾರಾಗುತ್ತವೆ. ಈ ಬಾರಿ ಈ ಬ್ಯಾಟ್ ಗಳ ಮಾರಾಟ ಶೇ. 25ರಷ್ಟು ವೃದ್ಧಿಸಿದೆ. ಅವಾಂತಿಪುರದಲ್ಲಿ ಸಾಲು ಮರಗಳಿಮದ ಕೂಡಿರುವ ರಸ್ತೆಗಳನ್ನು ನೋಡುವುದೇ ಚೆನ್ನ. ರಸ್ತೆಯ ಎರಡೂ ಬದಿಯಲ್ಲಿ ಬ್ಯಾಟ್ ತಯಾರಿಸುವ ಗುಡಿ ಕೈಗಾರಿಕೆಗಳು ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ. ಬ್ಯಾಟ್ ತಯಾರಿಸುವ ಪ್ರಕ್ರಿಯೆಯಲ್ಲಿ ತೊಡಗುವ ಮೆಷಿನ್ ಗಳ ಸದ್ದು ಮತ್ತು ಅವುಗಳಿಂದ ಹಾರಿ ಬರುವ ಮರದ ಧೂಳು ಇಡೀ ಪಟ್ಟಣವನ್ನು ಆವರಸುತ್ತದೆ. ಬಣ್ಣರಹಿತ ಬ್ಯಾಟ್ ಗಳು ಸುಂದರ ದೃಶ್ಯ ಕಾವ್ಯ ಇಲ್ಲಿ ಮನೆಮಾಡಿದೆ.

ಅಶಾಂತಿಯ ಗೂಡಾದ ಕಾಶ್ಮೀರಕ್ಕೆ ಬ್ಯಾಟ್ ತಯಾರಿಕೆ ಉದ್ಯಮ ಭಾರಿ ಆದಾಯ ತಂದುಕೊಡುತ್ತದೆ. ಇಡೀ ದೇಶಕ್ಕೆ ಇಲ್ಲಿಂದ ಬ್ಯಾಟುಗಳ ಸರಬರಾಜಾಗುತ್ತವೆ. ಸುಮಾರು 5,000 ಮಂದಿ ಸಹಸ್ರಾರು ಬ್ಯಾಟ್ ಗಳಿಗೆ ಸುಂದರ ಆಕಾರವನ್ನು ನೀಡುವಲ್ಲಿ ತೊಡಗಿಸಿಕೊಳ್ಳುತ್ತಾರೆ. ಕಾಶ್ಮೀರದಲ್ಲಿ ತಯಾರಾದ ಬ್ಯಾಟ್ ಗಳು ತಾಂತ್ರಿಕವಾಗಿ ಸದೃಢವಾಗಿದ್ದು, ಹೆಚ್ಚು ಜನಪ್ರಿಯವಾಗಿವೆ.

English summary
Awantipora in Kashmir is famous for manufacturing Cricket Willows The bat making industry here got a shot in arm thanks to World Cup cricket 2011. Sales are up by over 25 per cent since the World Cup started and to meet the demand the town aims to roll out three million bats this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X