• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೂನಂ ಪಾಂಡೆ ಬೆತ್ತಲೆ ಸೇವೆಗೆ ದಿನಗಣನೆ!

By Mahesh
|

ಭಾರತ ತಂಡ ವಿಶ್ವಕಪ್ ಕ್ರಿಕೆಟ್ ಗೆದ್ದರೆ ತಾನು ಸಂಪೂರ್ಣ ಬಟ್ಟೆ ಬಿಚ್ಚಿ ಕುಣಿದಾಡುವುದಾಗಿ ಹೇಳಿ ಕ್ರೀಡಾಭಿಮಾನಿಗಳಿಗೆ ಕಿಚ್ಚು ಹಚ್ಚಿದ್ದ ಪೂನಂ, ನಗ್ನ ಸೌಂದರ್ಯ ಪ್ರದರ್ಶನಕ್ಕೆ ದಿನಗಣನೆ ಆರಂಭವಾಗಿದೆ. ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್, ಟ್ವಿಟ್ಟರ್ ಗಳಲ್ಲಿ ಪೂನಮ್ ಹಾಟ್ ಟಾಪಿಕ್ ಆಗಿದ್ದಾರೆ.

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಬುಧವಾರ ಮೊಹಾಲಿಯಲ್ಲಿ ಭಾರತ ಬಗ್ಗು ಬಡಿದಿರುವುದು ಪೂನಂಗೆ ಸಾಕಷ್ಟು ಖುಷಿ ಕೊಟ್ಟಿದೆಯಂತೆ."3 days to go to Complete my Promise to INDIA :)" ಎಂದು ಟ್ವೀಟ್ ಮಾಡುವ ಮೂಲಕ ಮಾತಿಗೆ ತಪ್ಪುವುದಿಲ್ಲ ಎಂದು ಪೂನಮ್ ಹೇಳಿದ್ದಾರೆ.

ಅಲ್ಲಮ್ಮಾ. ನೀನು ಬಟ್ಟೆ ಬಿಚ್ಚಿವುದರಿಂದ ಟೀಂ ಇಂಡಿಯಾಗೆ ಏನು ಲಾಭ ಎಂದರೆ? ನನ್ನ ನಗ್ನ ದೇಹವನ್ನು ನೋಡಿ ಟೀಂ ಇಂಡಿಯಾದ ಹುಡುಗರಲ್ಲಿ ಮತ್ತಷ್ಟು ಹುರುಪು ಮೂಡಲಿದೆ ಎಂದಿದ್ದಾರೆ! ಟೀಂ ಇಂಡಿಯಾವನ್ನು ಭೇಟಿ ಮಾಡಿ ಅವರ ಡ್ರೆಸ್ಸಿಂಗ್ ರೂಂನಲ್ಲಿ ಅವರ ಮುಂದೆ ಬಟ್ಟೆ ಬಿಚ್ಚಿಡುತ್ತೇನೆ! ಒಂದು ವೇಳೆ ಇದಕ್ಕೆ ಒಪ್ಪದಿದ್ದರೆ ಕ್ರೀಡಾಂಗಣದಲ್ಲೇ ಬಟ್ಟೆ ಬಿಚ್ಚಿ ಕುಣಿದಾಡಲು ನನಗೇನು ಮುಜುಗರವಿಲ್ಲ ಎಂದು ಪೂನಂ ಹೇಳಿದ್ದಾರಂತೆ.

ಫೀಫಾ ಫುಟ್ಬಾಲ್ ವಿಶ್ವಕಪ್ ಸಂದರ್ಭದಲ್ಲಿ ಪರುಗ್ವೆ ರೂಪದರ್ಶಿ ಲಾರಿಸ್ಸಾ ರಿಕೆಲ್ಮೆ ಹಾಗೂ ಅರ್ಜೆಂಟೀನಾದ ಲೂಸಿಯಾನಾ ಸಲಾಜಾರ್ ಕೂಡಾ ಇದೇ ರೀತಿ ಬೆತ್ತಲೆ ಸೇವೆ ಓಟ ಮಾಡುವುದಾಗಿ ಘೋಷಿಸಿ, ತಕ್ಕಮಟ್ಟಿನ ದರ್ಶನ ಭಾಗ್ಯ ನೀಡಿದ್ದರು. ಬಹುಶಃ ಚಿತ್ರರಂಗ ಹಾಗೂ ಮಾಡೆಲ್ ಪ್ರಪಂಚದಲ್ಲಿ ಈಗಷ್ಟೇ ಕಾಲಿರಿಸುತ್ತಿರುವ ಪೂನಂ ಕೂಡಾ ದಿಢೀರ್ ಎಂದು ಪ್ರಚಾರ ಪಡೆಯಲು ಬೆತ್ತಲೆ ತಂತ್ರ ಪ್ರಯೋಗಿಸಿದ್ದಾರೆ.

ವಾಂಖೆಡೆ ಸ್ಟೇಡಿಯಂನಲ್ಲಿ ಲಂಕನ್ನರ ವಿರುದ್ಧ ಟೀಂ ಇಂಡಿಯಾ ಅಂತಿಮ ಹಣಾಹಣಿ ಮೇಲೆ ಒಂದು ಕಣ್ಣು, ಪೂನಂ ಪಾಂಡೆ ಮೇಲೆ ಇನ್ನೊಂದು ಕಣ್ಣು ಇರಿಸುವುದಾಗಿ ಅಭಿಮಾನಿಗಳು ಟ್ವೀಟ್ ಮಾಡುತ್ತಿದ್ದಾರೆ. ಪೂನಂ ಸುದ್ದಿ ಪ್ರಕಟವಾದ ತಕ್ಷಣ ನಮ್ಮ ಹಿರಿಯ ಓದುಗರೊಬ್ಬರು ಪ್ರತಿಕ್ರಿಯಿಸಿದ್ದು ಹೀಗೆ: " ಮೊದಲು ಬಟ್ಟೆ ಹಾಕಿಕೊಳ್ಳುವುದು ಕಲಿಯಲ್ಲ, ಆಮೇಲೆ ಬಿಚ್ಚುವಂತೆ".

English summary
Actress and Model Poonam Pandey decides to bare if Indian cricket team wins the World Cup 2011 against Sri Lanka. After watching the India vs Pakistan WC semis match, Poonam has confirmed once again by tweeting on Thursday that 3 days to go to Complete my Promise to INDIA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more