ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಎಸ್ಎಲ್ ಸಿ ಪರೀಕ್ಷೆ : ವಿದ್ಯಾರ್ಥಿಗಳಿಗೆ ಶುಭವಾಗಲಿ

By Prasad
|
Google Oneindia Kannada News

Karnataka SSLC exam 2011
ಬೆಂಗಳೂರು, ಮಾ. 31 : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುತ್ತಿರುವ 2011ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಗಳು ಏಪ್ರಿಲ್ 1ರಿಂದ 13ರವರೆಗೆ ರಾಜ್ಯದಾದ್ಯಂತ ನಡೆಯುತ್ತಿವೆ. ವಿಶ್ವಕಪ್ ನಡೆಯುತ್ತಿರುವ ಹಂತದಲ್ಲಿಯೇ ಪರೀಕ್ಷೆಗಳು ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳು ಮತ್ತು ಪಾಲಕರು ಹೆಚ್ಚಿನ ನಿಗಾವಹಿಸಬೇಕಾಗಿದೆ.

ಈ ವರ್ಷ ಒಟ್ಟು 8.73 ಲಕ್ಷ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಪರೀಕ್ಷೆಗೆ ಕುಳಿತುಕೊಳ್ಳುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಐವತ್ತು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಳ್ಳುತ್ತಿರುವುದರಿಂದ ಪರೀಕ್ಷಾ ಕೇಂದ್ರಗಳು ಮತ್ತು ಅಧಿಕಾರಿಗಳ ಸಂಖ್ಯೆಗಳನ್ನು ಹೆಚ್ಚಿಸಲಾಗಿದೆ. ಈ ಬಾರಿ 55 ಹೆಚ್ಚಿನ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ.

ಏಪ್ರಿಲ್ 1ರಂದು ಪ್ರಥಮ ಭಾಷೆಯ ಪರೀಕ್ಷೆಯಿದ್ದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.45ರವರೆಗೆ ನಡೆಯುತ್ತಿವೆ. 11ನೇ ತಾರೀಖಿನಂದು ನಡೆಯುತ್ತಿರುವ ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತ ಪರೀಕ್ಷೆ ಹೊರತುಪಡಿಸಿ ಎಲ್ಲ ಪರೀಕ್ಷೆಗಳು ಬೆಳಿಗ್ಗೆ ನಡೆಯಲಿವೆ. ಪ್ರತಿ ಪರೀಕ್ಷೆಯಂದು ಪ್ರಶ್ನೆ ಪತ್ರಿಕೆ ಓದಿಕೊಳ್ಳಲೆಂದು 15 ನಿಮಿಷ ಹೆಚ್ಚುವರಿ ಅವಧಿ ನೀಡಲಾಗುತ್ತಿದೆ.

ಕಳೆದ ವರ್ಷದಂತೆ 25 ಅಂಕಗಳಷ್ಟು ಆಬ್ಜೆಕ್ಟೀವ್ ಮಾದರಿಯ ಪ್ರಶ್ನೆಗಳಿದ್ದು, 75 ಅಂಕಗಳಷ್ಟು ವಿಸ್ತೃತ ಉತ್ತರ ಬರೆಯುವ ಪ್ರಶ್ನೆಗಳಿರುತ್ತವೆ. ಈ ಮಾದರಿಯನ್ನು ಕಳೆದವರ್ಷವೇ ಜಾರಿಗೆ ತರಲಾಗಿತ್ತು. ಭಾನುವಾರದ ರಜೆ ಹೊರತುಪಡಿಸಿ ಏಪ್ರಿಲ್ 2 ಶನಿವಾರ, 4 ಸೋಮವಾರ (ಯುಗಾದಿ), 6 ಬುಧವಾರ, 9 ಶನಿವಾರ (ವಿಧಾನಸಭೆ ಉಪಚುನಾವಣೆ) ಮತ್ತು 12 ಮಂಗಳವಾರ ರಜೆ ದಿನಗಳಿರುತ್ತವೆ.

ವೇಳಾಪಟ್ಟಿ

ಏಪ್ರಿಲ್ 1 ಪ್ರಥಮ ಭಾಷೆ, ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಸಂಸ್ಕೃತ.
ಏಪ್ರಿಲ್ 2 ಭಾರತೀಯ ಅರ್ಥಶಾಸ್ತ್ರ, ಎಲಿಮೆಂಟ್ಸ್ ಆಫ್ ಇಂಜಿನಿಯರಿಂಗ್, ಇಂಜಿನಿಯರಿಂಗ್ ಡ್ರಾಯಿಂಗ್, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್.
ಏಪ್ರಿಲ್ 5 ಗಣಿತ, ಭಾರತೀಯ ಸಮಾಜಶಾಸ್ತ್ರ
ಏಪ್ರಿಲ್ 7 ದ್ವಿತೀಯ ಭಾಷೆ ಕನ್ನಡ, ಇಂಗ್ಲೀಷ್, ಅಲ್ಟರ್ನೇಟ್ ಇಂಗ್ಲೀಷ್
ಏಪ್ರಿಲ್ 8 ತೃತೀಯ ಭಾಷೆ ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ
ಏಪ್ರಿಲ್ 11 ವಿಜ್ಞಾನ, ಭಾರತೀಯ ರಾಜ್ಯಶಾಸ್ತ್ರ ಮತ್ತು ಪೌರನೀತಿ, ಕರ್ನಾಟಕ ಸಂಗೀತ /ಹಿಂದೂಸ್ತಾನಿ ಸಂಗೀತ
ಏಪ್ರಿಲ್ 13 ಸಮಾಜ ವಿಜ್ಞಾನ

ವದಂತಿಗಳಿಗೆ ಕಿವಿಗೊಡಬೇಡಿ : ಪ್ರಶ್ನೆ ಪತ್ರಿಕೆ ಬಹಿರಂಗವಾಗುವ ಕುರಿತು ಯಾವುದೇ ರೀತಿಯ ವದಂತಿಗಳಿಗೆ ವಿದ್ಯಾರ್ಥಿಗಳು ಮತ್ತು ಪಾಲಕರು ಕಿವಿಗೊಡಬಾರದು ಎಂದು ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮಾಡಿಕೊಂಡಿದ್ದಾರೆ. ಹಾಗೆಯೆ, ವಿದ್ಯಾರ್ಥಿಗಳ ಮೇಲೆ ಪಾಲಕರು ಅನಗತ್ಯ ಒತ್ತಡ ಹೇರಬಾರದು ಎಂದು ಕೋರಿದ್ದಾರೆ.

ಎಸ್ಎಸ್ಎಲ್ ಸಿ ಮತ್ತಿತರ ಪರೀಕ್ಷೆಗೆ ಸಂಬಂಧಿಸಿದ ಸುದ್ದಿಗಳು, ಫಲಿತಾಂಶಗಳಿಗೆ ಸಂಬಂಧಿಸಿದಂತೆ ದಟ್ಸ್ ಕನ್ನಡ ನೋಡುತ್ತಿರಿ. ರಾಜ್ಯದ ಎಲ್ಲ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಶುಭವಾಗಲಿ.

English summary
Karnataka SSLC examination 2011 is beginning from April 1. KSEEB has made wide arrangements for the smooth conduct of examination. Students are adviced to stay calm and do not listen to any rumors about paper leakage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X