ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಜನಗಣತಿ ಪ್ರಕಟ: ಮಕ್ಕಳಿರಲವ್ವ ಮನೆತುಂಬ

By Mahesh
|
Google Oneindia Kannada News

2011 : India Population figures
ನವದೆಹಲಿ, ಮಾ.31: 2011ರ ಭಾರತ ಜನಗಣತಿಯ ಫಲಿತಾಂಶ ಹೊರಬಿದ್ದಿದೆ. ಜನಗಣತಿ ಆಯೋಗದ ಪ್ರಕಾರ ಭಾರತ ದೇಶದ ಜನ ಸಂಖ್ಯೆ 1,210.2 ದಶಲಕ್ಷ ಅಂದರೆ 120 ಕೋಟಿ ಚಿಲ್ಲರೆ. ಇದು ವಿಶ್ವದ ಜನಸಂಖ್ಯೆ ಶೇ. 17 ರಷ್ಟು ಎಂದು ಜನಗಣತಿ ಆಯೋಗ ಹೇಳಿದೆ. ಆಯೋಗ ಸಿದ್ಧಪಡಿಸಿರುವ ಪ್ರಾಥಮಿಕ ವರದಿಯಂತೆ ದೇಶದ ಜನಸಂಖ್ಯೆ 2001ಕ್ಕೆ ಹೋಲಿಸಿದರೆ ಶೇ. 17.6ರಷ್ಟು ಅಧಿಕಗೊಂಡಿದೆ. ಈ ವಿವರಗಳನ್ನು ಆಯೋಗದ ಆಯುಕ್ತ ಸಿ.ಚಂದ್ರವೌಳಿ ಗುರುವಾರ ಪ್ರಕಟಿಸಿದ್ದಾರೆ.

ಆಯೋಗ ಇಂದು ಬಿಡುಗಡೆಗೊಳಿಸಿರುವ 2011ರ ಹಂಗಾಮಿ ವರದಿ ಪ್ರಕಾರ ದೇಶದ ಒಟ್ಟು 1,210.0 ಮಿಲಿಯನ್ ಜನಸಂಖ್ಯೆಯಲ್ಲಿ 623.7 ಮಿಲಿಯನ್ ಪುರುಷರು ಮತ್ತು 586.5 ಮಿಲಿಯನ್ ಮಹಿಳೆಯರಿದ್ದಾರೆ. ದೇಶದ ಹಾಲಿ ಜನಸಂಖ್ಯೆ ಅಮೆರಿಕ, ಇಂಡೋನೇಷ್ಯ, ಬ್ರೆಜಿಲ್, ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದ ಒಟ್ಟು ಜನಸಂಖ್ಯೆಗಿಂತ ದೊಡ್ಡದಿದೆ ಎಂದು ವರದಿ ಹೇಳಿದೆ.

ಅಕ್ಷರಸ್ಥರು, ಅನಕ್ಷರಸ್ಥರು: ವರದಿಯ ಪ್ರಕಾರ 2001ರ ಗಣತಿಯಲ್ಲಿ ಶೇ. 64.83ರಷ್ಟಿದ್ದ ಅಕ್ಷರಸ್ಥರ ಸಂಖ್ಯೆ 2011ರಲ್ಲಿ ಶೇ. 74.04ಕ್ಕೆ ಏರಿದೆ. ಒಟ್ಟಾರೆ ಶೇ. 9.21ರಷ್ಟು ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಒಟ್ಟು ಜನಸಂಖ್ಯೆಯಲ್ಲಿ ಏಳು ವರ್ಷ ಹಾಗೂ ಏಳಕ್ಕಿಂತ ಹೆಚ್ಚಿನ ವಯಸ್ಸಿನ ಅಕ್ಷರಸ್ಥರ ಸಂಖ್ಯೆ ಶೇ. 74ರಷ್ಟಿದ್ದರೆ, ಅನಕ್ಷರಸ್ಥರ ಸಂಖ್ಯೆ ಶೇ.26ರಷ್ಟಿದೆ. 2011ರ ಅವಧಿಯಲ್ಲಿ ಶೇ. 82.14 ರಷ್ಟು ಪುರುಷರು ಹಾಗೂ ಶೇ. 65.46 ರಷ್ಟು ಮಹಿಳೆಯರು ಅಕ್ಷರಸ್ಥರ ಪಟ್ಟಿಗೆ ಸೇರಿದ್ದಾರೆ. ರಾಜ್ಯಗಳ ಪೈಕಿ ಕೇರಳ ಶೇ. 93.91 ಅಕ್ಷರಸ್ಥ ರಾಜ್ಯವಾಗಿ ಮತ್ತೊಮ್ಮೆ ಹೊರಹೊಮ್ಮಿದೆ.

ರಾಜ್ಯವಾರು ವರದಿ ಪ್ರಕಾರ ಉತ್ತರ ಪ್ರದೇಶ ಅತಿ ಹೆಚ್ಚು ಜನ ಸಂಖ್ಯೆ ಹೊಂದಿರುವ ರಾಜ್ಯವಾಗಿದೆ. ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಒಟ್ಟು ಜನಸಂಖ್ಯೆ ಅಮೆರಿಕ ದೇಶಕ್ಕಿಂತಲೂ ದೊಡ್ಡದಾಗುತ್ತದೆ. ಜಮ್ಮು ಮತ್ತು ಕಾಶ್ಮೀರ, ಬಿಹಾರ ಮತ್ತು ಗುಜರಾತ್ ರಾಜ್ಯಗಳಲ್ಲಿ ಲಿಂಗ ಅನುಪಾತದಲ್ಲಿ ಇಳಿಮುಖವಾಗಿದ್ದರೆ 29 ರಾಜ್ಯಗಳಲ್ಲಿ ಈ ಅನುಪಾತದಲ್ಲಿ ಏರಿಕೆ ಕಂಡಿದೆ.

2011ರಲ್ಲಿ ಪ್ರತಿ 1,000 ಗಂಡು ಮಕ್ಕಳಿಗೆ 914 ಹೆಣ್ಣು ಮಕ್ಕಳ ಅನುಪಾತವಿದ್ದು, ಸ್ವಾತಂತ್ರ ನಂತರ ಇದೇ ಮೊದಲ ಬಾರಿಗೆ ಅನುಪಾತ ಪ್ರಮಾಣ ಇಳಿಮುಖವಾಗಿದೆ. ಈಶಾನ್ಯ ಹೊಸದೆಹಲಿ ಜಿಲ್ಲೆ ಅತಿ ಹೆಚ್ಚು ಜನ ಸಾಂದ್ರತೆ (ಪ್ರತಿ ಚದರ ಕಿ.ಮೀ.ಗೆ 37.346) ಹೊಂದಿದ್ದರೆ, ಅರುಣಾಚಲ ಪ್ರದೇಶದ ದಿಲ್‌ಬಂಗ್ ಕಣಿವೆ (ಪ್ರತಿ ಚದರ ಕಿ.ಮೀ. ಒಬ್ಬರು) ಅತಿ ಕಡಿಮೆ ಜನ ಸಾಂದ್ರತೆಯನ್ನು ಹೊಂದಿದೆ ಎಂದು 2011ರ ಹಂಗಾಮಿ ಜನಸಂಖ್ಯಾ ವರದಿ ಹೇಳಿದೆ.

English summary
India Census 2011 report published. Head count ; 1,210+ Million. (120 Crores) Growth rate; 17.64 %. Literacy growth 9.3 %. 73% literates, 23% illiterates ( persons above 7 years counted). Summary: Out of every 4 Indian 1 is an illiterate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X