• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇವರಿಗೆ ಜೀವದಾನ ನೀಡಿದ್ದು ಜಾಸ್ತಿಯಾಯ್ತು

By Mahesh
|

ಮೊಹಾಲಿ, ಮಾ. 30: "ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸೆಂಚುರಿ ಹೊಡೆದರೆ ಭಾರತದ ಸೋಲುವುದು ಗ್ಯಾರಂಟಿ" ಎಂಬ ತಲೆಬುಡವಿಲ್ಲದ ಲಾಜಿಕ್ ಅನ್ನು ನಿಜ ಎಂದು ಪಾಕಿಸ್ತಾನ ತಂಡ ನಂಬಿದ್ದಂತೆ ತೋರುತ್ತದೆ. ಅಂತೂ ಇಂತೂ ತಮ್ಮ ವೃತ್ತಿ ಜೀವನದ ನೂರನೇ ಶತಕ ಸಿಡಿಸುವ ಪ್ರಯತ್ನದಲ್ಲಿದ್ದ ಸಚಿನ್ ಮುಗ್ಗರಿಸಿದ್ದಾರೆ. ಕ್ರಿಕೆಟ್ ದೇವರಿಗೆ 6ಕ್ಕೂ ಹೆಚ್ಚು ಜೀವದಾನ ನೀಡುವ ಮೂಲಕ ಬೇಜಾನ್ ಅವಕಾಶ ನೀಡಿದ್ದ ಪಾಕಿಸ್ತಾನಕ್ಕೆ ಕೊನೆಗೂ ಬುದ್ಧಿ ಬಂದು, 85 ರನ್ ಗಳಿಸಿದ್ದ ಸಚಿನ್ ಔಟ್ ಆಗಿ ಪೆವಿಲಿಯನ್ ನಲ್ಲಿ ಕೂರುವಂತೆ ಮಾಡಿದೆ.

ಆರಂಭಿಕ ಆಟಗಾರ ವಿರೇಂದರ್ ಸೆಹ್ವಾಗ್ ಸ್ಫೋಟಕ ಬ್ಯಾಟಿಂಗ್(9 ಬೌಂಡರಿ 25 ಎಸೆತದಲ್ಲಿ 38 ರನ್) ಗೆ ಬಲಿಯಾಗಿದ್ದ ಪಾಕಿಸ್ತಾನದ ಬೌಲರ್ ಗಳು ಸಾಕಷ್ಟು ಬಸವಳಿದಿದ್ದರು. ಇನ್ನೊಂದೆಡೆ ನಿಧಾನಗತಿಯಿಂದ ಆಡುತ್ತಿದ್ದ ಸಚಿನ್ ಜೀವದಾನದ ಲಾಭ ಪಡೆದು 95ನೇ ಅರ್ಧ ಶತಕ ಗಳಿಸಿ ದಾಖಲೆ ಬರೆದರು.

ಜೀವದಾನಗಳ ದಾಖಲೆ: ಸಯೀಸ್ ಅಜ್ಮಲ್ ರ ಎರಡನೇ ಓವರ್ ನಲ್ಲಿ ನಾಲ್ಕನೇ ಎಸೆತದಲ್ಲಿ ತೆಂಡೂಲ್ಕರ್ ಪ್ಯಾಡ್ ಗೆ ಚೆಂಡು ಬಡಿದ ತಕ್ಷಣ ಪ್ರತಿಕ್ರಿಯಿಸಿದ ಅಂಪೈರ್ ಅಯಾನ್ ಗೌಲ್ಡ್ ಔಟ್ ಎಂದು ತೀರ್ಪು ನೀಡಿದರು. ಆದರೆ, ತೀರ್ಪಿನ ಮರು ವಿಮರ್ಶೆ ಬಯಸಿದ ಸಚಿನ್, ಬಚಾವಾದರು.

ಮುಂದಿನ ಎಸೆತದಲ್ಲಿ ಅಜ್ಮಲ್ ಎಸೆದ ದೂಸ್ರಾ ತಿಳಿಯದೆ ಕ್ರೀಸ್ ನಲ್ಲಿ ಸಚಿನ್ ತಿಣುಕಾಡುತ್ತಿದ್ದಾಗ, ಕಮ್ರಾನ್ ಅಕ್ಮಲ್ ಬೇಲ್ ಎಗರಿಸಿ ಎಲ್ ಬಿ ಅಪೀಲ್ ಮಾಡಿದರು. ಲೆಗ್ ಅಂಪೈರ್ ಸೈಮನ್ ಟಫಲ್ ಹಾಗೂ ಮೂರನೆ ಅಂಪೈರ್ ಬಿಲ್ಲಿ ಬೌಡನ್ ಸ್ಲೋ ಮೋಷನ್ ರಿಪ್ಲೇ ಪದೇ ಪದೇ ನೋಡಿ, ಸಚಿನ್ ನಾಟೌಟ್ ಎಂದು ತೀರ್ಮಾನಿಸಿದರು.

ಇದಕ್ಕೂ ಮುನ್ನ ಸಚಿನ್ 27 ರನ್ ಗಳಿಸಿದ್ದಾಗ ಮಿಡ್ ವಿಕೆಟ್ ನಲ್ಲಿ ನಿಂತಿದ್ದ ಮಿಸ್ಬಾ ಉಲ್ ಹಕ್ ಗೆ ಕ್ಯಾಚ್ ನೀಡಿದ್ದರು ಹಾಗೂ ಮಿಡ್ ಆಫ್ ನಲ್ಲಿದ್ದ ಯೂನಿಸ್ ಖಾನ್ ಗೆ 45 ರನ್ ಗಳಿಸಿದ್ದಾಗ ಕ್ಯಾಚ್ ನೀಡಿದ್ದರು ಎರಡು ಬಾರಿಯೂ ಪಾಕಿ ಫೀಲ್ಡರ್ ಗಳು ಕ್ಯಾಚ್ ಚೆಲ್ಲಿದರು. ಅಫ್ರಿದಿ ಎರಡೂ ಬಾರಿ ನತದೃಷ್ಟನಾಗಬೇಕಾಯಿತು. ಇದಲ್ಲದೆ ಸಚಿನ್ ಔಟ್ ಆಗುವುದಕ್ಕೂ ಮುನ್ನ ಉಮರ್ ಅಕ್ಮಲ್ ಸಹಾ ಒಂದು ಜೀವದಾನ ನೀಡಿದ್ದರು. ಒಟ್ಟಾರೆ ಸಚಿನ್ 100ನೇ ಶತಕ ಬಾರಿಸುವ ಕಾಲ ಇನ್ನೂ ಕೂಡಿ ಬಂದಿಲ್ಲ ಎನ್ನಬಹುದು. ಆದರೂ, ವಿಶ್ವಕಪ್ ಟೂರ್ನಿಯಲ್ಲಿ ಐದಕ್ಕಿಂತ ಹೆಚ್ಚು ಶತಕ ಗಳಿಸಿದ ಮೊದಲ ಆಟಗಾರ, ವಿಶ್ವಕಪ್ ನಲ್ಲಿ 2000 ರನ್ ಗಡಿ ದಾಟಿದ ಮೊದಲ ಆಟಗಾರ ಎಂಬ ಸಾಧನೆ ಸಚಿನ್ ಹೆಸರಲ್ಲಿದೆ. [ಸಚಿನ್ ವೃತ್ತಿ ಜೀವನ ಸವಿವರ]

English summary
World Cup 2011 : Pakistani fielders dropped Sachin Tendulkar repeatedly which helped him to hit his 95th ODI half-century. Sachin also fortunate to miss LBW decision which was a close call. But he was not fortunate to get is 100th century.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more