ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧೋನಿ vs ಮನಮೋಹನ್ ಸಿಂಗ್ ಯಾರು ಬೆಸ್ಟ್?

By * ಇ. ಆರ್. ರಾಮಚಂದ್ರನ್. ಮೈಸೂರು
|
Google Oneindia Kannada News

ಮಹೇಂದ್ರ ಸಿಂಗ್ ಧೋನಿ ಮತ್ತು ಮನಮೋಹನ್ ಸಿಂಗ್ ಇಬ್ಬರೂ ರಾಷ್ಟ್ರ ಮಟ್ಟದ ನಾಯಕರು. ಒಬ್ಬರು ಭಾರತದ ಕ್ರಿಕೆಟ್ ಟೀಮಿನ ನಾಯಕರು. ಇನ್ನೊಬ್ಬರು ಪ್ರಧಾನ ಮಂತ್ರಿ. ಇಬ್ಬರೂ ಅವರವರ ಕ್ಷೇತ್ರಗಳಲ್ಲಿ ಹೆಸರು ವಾಸಿಯಾದವರು. ಅವರಿಬ್ಬರ ನಾಯಕತ್ವದ ಶೈಲಿ ಭಿನ್ನವಾದರೂ ಅವರ ಗುರಿ ಒಂದೇ ಅಗಬೇಕಾಗಿತ್ತು. ಆದರೆ ಹಾಗಾಗಿಲ್ಲ. ಎಲ್ಲೋ ಒಬ್ಬರು ದಾರಿ ತಪ್ಪಿದಂತಿದೆ. ನೋಡೋಣ ಬನ್ನಿ.

1. ಧೋನಿ ದಿನ ನಿತ್ಯ ಬಿಸಿಸಿಐಗೆ "ರಿಪೋರ್ಟ್" ಮಾಡುವ ಅವಶ್ಯಕತೆ ಇಲ್ಲ. ಮನಮೋಹನ್ ಸಿಂಗ್ ಅವರು ದಿನಾ ಹೈ ಕಮಾಂಡ್ ಸುತ್ತಾ ಚಕ್ಕರ್ ಹೊಡಿಲೇಬೇಕು.

2. ಧೋನಿಯನ್ನು ಸದ್ಯಕ್ಕಂತೂ ಕ್ಯಾಪ್ಟನ್ ಪದವಿಯಿಂದ ತೆಗೆಯುವ ಪ್ರಮೇಯವೇ ಇಲ್ಲ. ಮನಮೋಹನ್ ರಿಗೆ ಪಾಪ, ಮೊದಲ ದಿನದಿಂದ ಅದು ಬೀಸುವ ದೊಣ್ಣೆ ತರಹ, ಯಾವತ್ತು ಬೇಕಾದರೂ ಅವರಿಗೆ "ಕೊಕ್" ಕೊಡಬಹುದು.

3. ಧೋನಿಯ ಮಾತನ್ನು ಅಕ್ಷರಶಃ ಅವರ ಟೀಮಿನ ಸಹದ್ಯೋಗಿಗಳು ಪರಿಪಾಲಿಸುತ್ತಾರೆ; ಮನಮೋಹನ್ ರ ಕ್ಯಾಬಿನೆಟ್ ನಲ್ಲಿ ಅವರ ಮಾತನ್ನು ಕಿವಿಗೆ ಹಾಕಿಕೊಳ್ಳುವವರು ಒಬ್ಬರೋ, ಇಬ್ಬರೋ!

4. ಎಂತಹ ಪ್ರಾಬ್ಲಮ್ ಬಂದ್ರೂ ದಿಟ್ಟೆದೆಯ ಧೋನಿ ಅದನ್ನು ಎದಿರುಸುವುದಕ್ಕೆ ತಯಾರ್! ಮನಮೋಹನ್ ಅದನ್ನು ಅವರ ಸಹದ್ಯೋಗಿ(EGoM)ಗಳಿಗೆ ಕೊಟ್ಬಿಟ್ಟು ಆರಾಮವಾಗಿರುತ್ತಾರೆ, ಸ್ವಲ್ಪಾನೂ ತಲೇಬಿಸಿ ಮಾಡ್ಕೋಳಲ್ಲ!

5. ಆಟದ ಮಧ್ಯ ಧೋನಿ ಒಂದು ಸಣ್ಣ ತಪ್ಪು ಮಾಡಿದ್ರೂ, ನೂರು ಕೋಟಿ+ ಜನಾ ಅವರ ಮೇಲೆ ಹಾಯ್ದು ಬೀಳುತ್ತಾರೆ; ಮೊನ್ನೆ ಕೊನೇ ಓವರ್ ಆಶೀಷ್ ನೆಹ್ರಾ ಗೆ ಕೊಟ್ಟು ಭಾರತ ದಕ್ಷಿಣ ಆಫ್ರಿಕಾದ ಮೇಲೆ ಸೋತಾಗ, ಧೋನಿನ ಎಲ್ಲರೂ ಸೇರಿ "ಹಣ್ಣು ಗಾಯ್, ನೀರುಗಾಯ್" ಮಾಡಿದ್ರು. ಆದರೆ ಮನಮೋಹನ್ರಿಗೆ ಶಿಶುಪಾಲನ ತರಹ ಎಷ್ಟು ತಪ್ಪು ಮಾಡಿದ್ರೂ ಕ್ಷಮೆ ಇದ್ದೇ ಇದೆ!

2ಜಿ ರಾಜ, ಇಸ್ರೋ, ಸಿವಿಸಿ, ಕಾಮನ್ವೆಲ್ತ್ ಗೇಮ್ಸ್... ದಿನ ಬೆಳಗಾದರೆ ಒಂದಲ್ಲಾ ಒಂದು ಸ್ಕ್ಯಾಮ್‌ ಆಗಿ ಭ್ರಷ್ಟಾಚಾರದ ವಿಷಯ ಬಯಲಾಗಿ ಮನಮೋಹನ್ ಸರ್ಕಾರ ದಿನಾ ಸುಪ್ರೀಮ್ ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿದೆ. ಇಷ್ಟೆಲ್ಲಾ ಘೋರ ತಪ್ಪುಗಳಾದರೂ ಜನರು ಶ್ರೀ ಕೃಷ್ಣನ ಹಾಗೆ ಅದನ್ನು ನೋಡಿಯೂ ನೋಡದೆತರಹ ಕಿವಿ ಮೇಲೆ ಹಾಕಿ ಕೊಳ್ಳುವುದಿಲ್ಲ! ಎಲೆಕ್ಷನ್ ಬಂದಾಗ "ನೂರು" ಅಂತ ಎಣಿಸಿ ಸುದರ್ಶನ ಚಕ್ರ ಬಿಡಬಹುದು ಜನ!

6. ಎಲ್ಲರ ಸಲಹೆ ಪಡೆದು, ಕೊನೆಗೆ ಧೋನಿ ಮುಂದೆ ಏನು ಮಾಡಬೇಕೆಂದು ಸ್ವತಃ ನಿರ್ಣಯ ತೆಗೆದು ಕೊಳ್ಳುತ್ತಾರೆ. ವಿಕಿ ಲೀಕ್ಸ್ ಪ್ರಕಾರ ಮನಮೋಹನ್ ಏನು ಮಾಡ ಬೇಕೆಂದು ಅಮೆರಿಕಾದ ರಾಷ್ಟ್ರಪತಿ ನಿಶ್ಚಯ ಮಾಡುತ್ತಾರೆ!

7. ಧೋನಿ ಬಹಳ ಓದಿದವರಲ್ಲ, ಮನಮೋಹನ್ ರ ಹಾಗೆ. ಆದ್ರೆ ಧೋನಿಗೆ ಕಾಮನ್ ಸೆನ್ಸ್, ಸಿಕ್ತ್ ಸೆನ್ಸ್ ಚೆನ್ನಾಗಿದೆ! ಅದನ್ನು ವ್ಯರ್ಥಮಾಡದೆ ಚೆನ್ನಾಗಿ ಉಪಯೋಗಿಸಿ, ಅದ್ಭುತ ನಾಯಕತ್ವ ನಡೆಸುತ್ತಾರೆ.

ವಿಶ್ವಕಪ್ : ಮುಖಪುಟ | ಚಿತ್ರಪಟ | ಅಂಕಗಳ ಕೋಷ್ಟಕ | ಟಾಪ್ ಬ್ಯಾಟ್ಸ್ ಮನ್| ಟಾಪ್ ಬೌಲರ್

8. ಧೋನಿ ಟೀಮಿನಲ್ಲಿ ತಂಡದ ಒಗ್ಗಟ್ಟಿಗೆ ಯಾವಾಗಲೂ ಪ್ರಧಾನ್ಯ ; ಮನಮೋಹನ್ ರ ತಂಡದಲ್ಲಿ ರಾಜ್ಯ ಮಟ್ಟದಲ್ಲಿ ಪಾಳೇಗಾರರಾಗಿರುವ ಕರುಣಾನಿಧಿ, ಮಮತಾ ಬ್ಯಾನರ್ಜಿ ಅಂತವರಿಂದ ಎಲ್ಲಿ ಸರ್ಕಾರ ಉರುಳಿ ಹೋಗುತ್ತೋ ಎಂಬ ಭಯದಿಂದ ಅವರು ಏನು ಮಾಡಿದರೂ ನೋಡದೆ ಇದ್ದ ಹಾಗೆ ಸುಮ್ಮನಿದ್ದು ಬಿಡುತ್ತಾರೆ ಪ್ರಧಾನ ಮಂತ್ರಿ!

9. ಧೋನಿಯವರ ತಂಡದಲ್ಲಿ ಯಾರೂ ದುಡ್ಡು ಹೊಡೆಯುವ ಪ್ರಶ್ನೆಯೇಯಿಲ್ಲ; ಮನಮೋಹನ್ನರ ತಂಡದಲ್ಲಿ ಸುಮಾರು ಮಂತ್ರಿಗಳಿಗೆ ಅದೇ ಮುಖ್ಯ ಅಜೆಂಡಾ ! ಅವರವರು ಬೇಗ ಬೇಗ ದುಡ್ಡು ಮಾಡ್ಕೊಂಡು ಓಡ್ತಾ ಇದ್ರು! ಆದರೆ ಈಗೀಗ, ಸುಪ್ರೀಮ್ ಕೋರ್ಟ ತನಿಖೆ ಶುರು ಮಾಡಿದಲಾದಾಗಿನಿಂದ, ರಾಜಾ ಅಂತವರು ಜೈಲಿನಲ್ಲಿ ಕಲ್ಲುಹೊಡೀತಿದಾರೆಂದು ವದಂತಿ!

10. ಧೋನಿ ನಾಯಕತ್ವದ ಜೊತೆ ವಿಕೆಟ್ ಕೀಪರ್ ಕೂಡ; ಅಂದ್ರೆ "ಪ್ರೆಷರ್ ಕುಕರ್" ಸನ್ನಿವೇಶ ಬಂದಿದೆ ಅನ್ನಿ! ಅಷ್ಟಾಗಿಯೂ ಫೀಲ್ಡ್ ಪ್ಲೇಸಿಂಗ್, ಬೌಲಿಂಗ್ ಬದಲಾವಣೆಯನ್ನು ತಾನೇ ಚಾಕಚಕ್ಯತೆಯಿಂದ ನಿರ್ವಹಿಸುತ್ತಾರೆ. ಮನಮೋಹನ್ ಗೆ, ಆವತ್ತಿನ ಕೆಲಸ ಏನು, ಅದು ಹೇಗೆ ಮಾಡಬೇಕೆಂದು ದಿನನಿತ್ಯ ಸುಪ್ರೀಮ್ ಕೋರ್ಟಿನಿಂದ ಆದೇಶ ಬರುತ್ತೆ.

12. ಧೋನಿಯ ನಾಯಕತ್ವ ಬಹುತೇಕ ಜನರಿಗೆ ಸಂತೋಷವನ್ನು ತಂದಿದೆ. ಮನಮೋಹನ್ ರ ಒಲ್ಲದ ನಾಯಕತ್ವ ಜನರಲ್ಲಿ ಅಸಮಾಧಾನ ಮತ್ತು ಹತಾಶೆಯನ್ನು ಉಂಟು ಮಾಡಿದೆ.

English summary
Here is comparison between Team India captain MS Dhoni and Indian Prime Minister Manmohan Singh. Both have good leadership qualities but Dhoni scores more than MM Singh in handling crunch situations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X