ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಹಾಲಿ ಕದನಕ್ಕೆ ತೆರೆದಿದೆ ವೆಬ್ ಬಾಗಿಲು

By Srinath
|
Google Oneindia Kannada News

ಮೊಹಾಲಿ, ಮಾ. 30: ಹಾಲಿ ವಿಶ್ವ ಕಪ್ ನಲ್ಲಿ ಕ್ರಿಕೆಟ್ ಕುತೂಹಲ ತಣಿಸಿಕೊಳ್ಳಲು ಗರಿಷ್ಠ ಸಂಖ್ಯೆಯಲ್ಲಿ ಜನ ವೆಬ್ ತಾಣಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಹಿಂದೆ ಯಾವುದೇ ಸುದ್ದಿಗೂ ಜನ ಈ ಪಾಟಿ ಅಂತರ್ಜಾಲವನ್ನು ಜಾಲಾಡಿಲ್ಲ. ಇದರಿಂದ ಆನ್ ಲೈನ್ ಮಾಧ್ಯಮ ತೀವ್ರ ಚಟುವಟಿಕೆಯ ತಾಣವಾಗಿದ್ದು, ಜೇನುಗೂಡಿನಂತಿದೆ. ಜನ ತಣ್ಣಗೆ ತಮ್ಮ ಕಂಪ್ಯೂಟರ್ ಮುಂದೆ ಕುಳಿತು ಜೇನನ್ನು ಸವಿಯುತ್ತಿದ್ದಾರೆ.


ಡಿಜಿಟಲ್ ಲೋಕದ ಮಾರುಕಟ್ಟೆ ಸಮೀಕ್ಷೆ ನಡೆಸುವ ವಿಶ್ವಸನೀಯ ಕಾಂ ಸ್ಕೋರ್ ಪ್ರಕಾರ ವೆಬ್ ಸೈಟ್ ಟ್ರಾಫಿಕ್ ಆಕಾಶ ಮುಟ್ಟಿದೆ. ಇತ್ತೀಚಿನ ದಿನಗಳಲ್ಲಿ ಜಗತ್ತಿನ ಯಾವ ಮೂಲೆಯಲ್ಲೇ ಕ್ರೀಡೆಗಳು ನಡೆಯಲಿ ಇಂಟರ್ನೆಟ್ ಹೆಚ್ಚು ಮಹತ್ವ ಪಡೆದುಕೊಂಡಿದೆ. ಕ್ಷಣ ಕ್ಷಣದ ತಾಜಾ ಮಾಹಿತಿಗಾಗಿ ನೆಟ್ಟಣಿಗರು ತಹತಹಿಸುತ್ತಿದ್ದಾರೆ ಎಂದು ಕಾಂ ಸ್ಕೋರ್ ಉಪಾಧ್ಯಕ್ಷ ಜೊ ಗುಯೆನ್ ಹೇಳಿದ್ದಾರೆ.

ಇನ್ನು, ಇಂದು ನಡೆಯುವ ಬಹುನಿರೀಕ್ಷಿತ ಭಾರತ-ಪಾಕ್ ಸೆಮಿಫೈನಲ್ ಪಂದ್ಯದ ವೇಳೆಯಂತೂ ನೆಟ್ ಜನ ವೆಬ್ ಬಾಗಿಲನ್ನು ಪಟಪಟನೆ ಬಡಿಯುವುದು ಖಚಿತ. ಇಡೀ ಕ್ರಿಕೆಟ್ ಜಗತ್ತೇ ಈ ಪದ್ಯಕ್ಕಾಗಿ ಕಾತರದಿಂದ ಕಾಯುತ್ತಿದೆ. ವೆಬ್ ಸೈಟ್ ಗಳೂ ಜನರ ನಿರೀಕ್ಷೆಯನ್ನು ತಣಿಸಲು ಸಜ್ಜಾಗಿವೆ ಎಂದು ಅವರು ಹೇಳಿದ್ದಾರೆ.

English summary
The online medium is abuzz with a large number of cricket lovers flocking to the digital world for live updates and match results of the World Cup.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X