ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಕಾ ಫೈನಲ್ ಗೆ; ಉಪಖಂಡಕ್ಕೆ ವಿಶ್ವಕಪ್

By Mahesh
|
Google Oneindia Kannada News

ಕೊಲಂಬೋ, ಮಾ.30: ವಿಶ್ವಕಪ್‌ನ ಮೊದಲ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು 5 ವಿಕೆಟ್ ಗಳಿಂದ ಮಣಿಸಿದ ಶ್ರೀಲಂಕಾ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದ ಸಾಧನೆ ಮೆರೆದಿದೆ. ಇದರಿಂದಾಗಿ ಆಸ್ಟ್ರೇಲಿಯಾದಲ್ಲೇ ಮೆರೆಯುತ್ತಿದ್ದ ವಿಶ್ವಕಪ್ ಈ ಬಾರಿ ಉಪಖಂಡದಲ್ಲೇ ಉಳಿಯಲಿದೆ. ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಯಾರೇ ಗೆದ್ದರೂ ಗೆಲ್ಲುವ ವಿಶ್ವಾಸವಿದೆ ಎಂದು ಶ್ರೀಲಂಕಾ ನಾಯಕ ಸಂಗಕ್ಕಾರ ಹೇಳಿದ್ದಾರೆ.

ಲಂಕನ್ನರ ಗೆಲುವಿಗೆ ಪಿಚ್ ಕಾರಣ: ಸ್ಪಿನ್ನರ್ ಗಳಿಗೆ ನೆರವಾಗುವ ಪಿಚ್ ಅನ್ನು ಬದಲಾಯಿಸದಿದ್ದದ್ದು ಲಂಕನ್ನರಿಗೆ ವರದಾನವಗಿದೆ. ಪಂದ್ಯಕ್ಕೂ ಮುನ್ನ ಹಳೆ ಪಿಚ್ ನ್ನು ಬಳಸುವ ಬಗ್ಗೆ ನ್ಯೂಜಿಲೆಂಡ್ ನಾಯಕ ವೆಟ್ಟೋರಿ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ, ಐಸಿಸಿ ನಿಯಮದಂತೆ ಪಿಚ್ ಕಾಪಾಡಲಾಗಿದ್ದು, ಕಿವೀಸ್ ಗೆ ಮುಳುವಾಯಿತು.

ಸಂಕ್ಷಿಪ್ತ ಸ್ಕೋರ್ ವಿವರ:
ನ್ಯೂಜಿಲೆಂಡ್ : 217 ಆಲೌಟ್ (48.5 ಓವರ್ ) (ಸ್ಟೈರಿಸ್ 57, ಗುಪ್ಟಿಲ್ 39; ಮಾಲಿಂಗ 3/55)
ಶ್ರೀಲಂಕಾ :220-5 (ದಿಲ್ಷಾನ್ 73, ಸಂಗಕ್ಕಾರ 54; ಸೌಥಿ 3/57)

ಸಂಪೂರ್ಣ ಸ್ಕೋರ್ ವಿವರ ಸ್ಕೋರ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ

ಲಂಕಾ ಮಿಂಚಿಂಗ್ : ಮತ್ತೆ ಆಲ್‌ರೌಂಡರ್ ಆಟ ಪ್ರದರ್ಶಿಸಿದ ತಿಲಕರತ್ನೆ ದಿಲ್ಶನ್ ಮತ್ತು ನಾಯಕ ಕುಮಾರ ಸಂಗಕ್ಕರ ಬಾರಿಸಿದ ಅರ್ಧಶತಕಗಳ ನೆರವಿನಿಂದ ಗೆಲ್ಲಲು ಬೇಕಾದ 218 ರನ್‌ಗಳ ಮೊತ್ತವನ್ನು ಸುಲಭವಾಗಿ ದಾಟಿದರು. ಆದರೂ, 47.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ ವಿಜಯ ಪತಾಕೆ ಹಾರಿಸುವ ಮುನ್ನ ಕೊಂಚ ಮುಗ್ಗರಿಸಿತು. ನ್ಯೂಜಿಲೆಂಡ್ ಸತತವಾಗಿ 6 ಬಾರಿ ಫೈನಲ್ ಹಂತ ತಲುಪದೆ ಮನೆಗೆ ತೆರಳಿತು.

English summary
World Cup 2011: Sri Lanka beat New Zealand in Semi Final held at Colombo on Mar 29 and entered second successive final. By this one can say, World Cup returns to Subcontinent after 15 years. Murali taken a wicket off his last ball at home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X