ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಬಾನಿ ಕ್ರಿಕೆಟ್ ಕ್ರೇಜ್ ಬೆಲೆ 5 ಕೋಟಿ ರು!

By Mahesh
|
Google Oneindia Kannada News

ಮುಂಬೈ, ಮಾ. 29: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಏ.2ರಂದು ನಡೆಯಲಿರುವ ವಿಶ್ವಕಪ್ 2011 ಅಂತಿಮ ಹಣಾಹಣಿಯ ಪ್ರತಿಕ್ಷಣದ ರಸಾನುಭೂತಿ ಪಡೆಯಲು ಭಾರತದ ಅತಿ ದೊಡ್ಡ ಶ್ರೀಮಂತ ರಿಲೆಯನ್ಸ್ ಸಂಸ್ಥೆ ಮುಖ್ಯತಥ ಮುಖೇಶ್ ಅಂಬಾನಿ ಭಾರಿ ಸಿದ್ಧತೆ ನಡೆಸಿದ್ದಾರೆ. ವಾಂಖೆಡೆ ಸ್ಟೇಡಿಯಂನ ಮೂರು ಕಾರ್ಪೊರೇಟ್ ಬಾಕ್ಸ್ ಗಳ ಮೇಲೆ ಸುಮಾರು 5 ಕೋಟಿ ರು ತೆತ್ತು, ತಮ್ಮ ಕ್ರಿಕೆಟ್ ಪ್ರೇಮಿ ಪತ್ನಿ ನೀತು ಸೇರಿದಂತೆ ಸಕುಟುಂಬ ಸಪರಿವಾರ ಸಮೇತ ಕ್ರಿಕೆಟ್ ಪಂದ್ಯ ವೀಕ್ಷಿಸಲು ಅಣಿಯಾಗುತ್ತಿದ್ದಾರೆ.

ಮುಂಬೈ ಕ್ರಿಕೆಟ್ ಸಂಸ್ಥೆ(MCA)ಯ ಪೆವಿಲಿಯನ್ ನ ದಕ್ಷಿಣ ಭಾಗದ ಮೂರು ಕಾರ್ಪೊರೇಟ್ ಬಾಕ್ಸ್ ಗಳನ್ನು ಅಂಬಾನಿ ಪಡೆದಿದ್ದಾರೆ. ಪ್ರತಿ ಬಾಕ್ಸ್ ನಲ್ಲೂ 15 ರಿಂದ 16 ಸೀಟುಗಳಿದ್ದು, ಪ್ರತಿ ಸೀಟಿಗೆ 10 ಲಕ್ಷರು ತಗುಲಲಿದೆ. ಫೈನಲ್ ಪಂದ್ಯದ ಟಿಕೆಟ್ ಕನಿಷ್ಠ ದರವೇ 1,500 ರು. ಈ ಎಸಿ ಕಾರ್ಪೊರೇಟ್ ಬಾಕ್ಸ್ ನಲ್ಲಿ ಎಲ್ಲವೂ ಇದೆ.

ಎಲ್ ಸಿಡಿ ಟಿವಿಗಳು, ವಿಡಿಯೋ ಮ್ಯಾಟ್ರಿಕ್ಸ್ ನೇರ ಸ್ಕೋರ್ ಕಾರ್ಡ್, ವೈಯಕ್ತಿಕವಾಗಿ ಆತಿಥ್ಯ, ಪುಷ್ಕಳ ಭೋಜನ, ಬೇಕಾದ ಪಾನೀಯ ಸೇವೆ ಎಲ್ಲಕ್ಕಿಂತ ಹೆಚ್ಚಾಗಿ ಸಾವಿರಾರು ಜನರ ಮಧ್ಯದಲ್ಲಿದ್ದರೂ ಆರಾಮದಾಯಕವಾಗಿ ಕ್ರಿಕೆಟ್ ವೀಕ್ಷಿಸುವ ಅನುಭವ ಲಭ್ಯವಾಗಲಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಸುಮಾರು 57 ಕಾರ್ಪೊರೇಟ್ ಬಾಕ್ಸ್ ಗಳಿವೆ. ಅಂಬಾನಿಗಳಿಗೆ ಮೂರು ಬಾಕ್ಸ್ ಗಳನ್ನು ನೀಡಲಾಗಿದೆ. ಉದ್ಯಮಿಗಳು, ಸಿನಿ ತಾರೆಯರಿಂದ ಭಾರಿ ಬೇಡಿಕೆ ಬಂದಿದೆ ಎಂದು ಮುಂಬೈ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಲಾಲ್ ಚಂದ್ ರಾಜ್ ಪುಟ್ ಹೇಳಿದ್ದಾರೆ.

ವಾಂಖೆಡೆಯಲ್ಲಿ ಸುಮಾರು 33,000 ಸೀಟುಗಳಿದೆ. ಕೇವಲ 4 ಸಾವಿರ ಟಿಕೆಟುಗಳನ್ನು ಸಾರ್ವಜನಿಕರಿಗೆ ನೀಡಲಾಗಿದೆ. ಬೆಂಗಳೂರು ಹಾಗೂ ನಾಗಪುರದಲ್ಲಿ ಟಿಕೆಟ್ ಖರೀದಿಸಲು ಬಂದ ಕ್ರಿಕೆಟ್ ಅಭಿಮಾನಿಗಳು ಪೊಲೀಸರ ಲಾಠಿ ರುಚಿ ತಿಂದಿದ್ದರು. ಈ ಕಾರಣದಿಂದ ಕೌಂಟರ್ ನಲ್ಲಿ ಟಿಕೆಟ್ ಮಾರಾಟಕ್ಕೆ ಐಸಿಸಿ ನಿರ್ಬಂಧ ಹೇರಿದೆ.ಹೊರಗಡೆ ಖಾಕಿಗಳ ದರ್ಬಾರು, ಪೆವಿಲಿಯನ್ ನಲ್ಲಿ ಗಣ್ಯರ ಉಪಸ್ಥಿತಿ, ಮೈದಾನದಲ್ಲಿ ರೋಚಕ ಹಣಾಹಣಿಗೆ ವಾಂಖೆಡೆ ಸಾಕ್ಷಿಯಾಗಲಿದೆ.

English summary
India’s richest man Reliance Industries chairman Mukesh Ambani has splurged Rs 5 crore on three A/C corporate boxes in Wankhede Stadium, Mumbai Cricket Association for WC Final 2011. Wankhede stadium has 57 corporate boxes and a capacity of 33,000 and only 4,000 tickets were made available for the public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X