• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಣಾಂಗಣ ತಲುಪಿದ ಯುವರಾಜ, ಮುಂದ!?

By Srinath
|

ಮೊಹಾಲಿ, ಮಾ. 26: ಭಾರತ-ಪಾಕ್ ಕದನಕ್ಕೆ ಮೊಹಾಲಿ ನವವಧುವಿನಂತೆ ಸಜ್ಜಾಗುತ್ತಿದೆ. ಯುವರಾಜ ಸಿಂಗ್ ಭಾನುವಾರ ಪುರಪ್ರವೇಶ ಮಾಡಿದ್ದು, ಬುಧವಾರದ ಮಹತ್ವದ ಪಂದ್ಯಕ್ಕಾಗಿ ಸ್ಟೇಡಿಯಂನಲ್ಲಿ ಬೆವರಿಳಿಸಿ, ಸಮರಾಭ್ಯಾಸದಲ್ಲಿ ನಿರತರಾಗಿದ್ದಾರೆ. ಅಂದ ಹಾಗೆ ಅವರು ತಾಯಿಯ ಆಶೀರ್ವಾದ ಪಡೆಯಲು ಸಮೀಪದಲ್ಲೇ ಇರುವ ಹುಟ್ಟೂರಿಗೆ ತೆರಳಿದ್ದರು.

ಅರೆ ಗಳಿಗೆ ಹಿಂದಕ್ಕೆ ಸರಿದಾಗ ಹಾಲಿ ವಿಶ್ವ ಕಪ್ ಕ್ರಿಕೆಟ್ ಆರಂಭಕ್ಕೂ ಮುನ್ನ ಭಾರತೀಯ ಕ್ರಿಕೆಟ್ ಮಂಡಳಿ ತಂಡವನ್ನು ಪ್ರಕಟಿಸಿತ್ತು. ತಂಡದಲ್ಲಿ ಯುವರಾಜ್ ಸಿಂಗ್-ಗೆ ಸ್ಥೈಆನ ದಯಪಾಲಿಸಿದ್ದನ್ನು ಕಂಡು ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಸತತ ವೈಫಲ್ಯಗಳಿಂದ ಬಳಲಿದ್ದ ಯುವ್ವಿ ತಮ್ಮ ಎಂದಿನ ಆಟದ ಲಯ ಕಂಡುಕೊಳ್ಳಲು ಪರದಾಡುತ್ತಿದ್ದರು. ಇವಯ್ಯನ್ನ ಯಾಕಪ್ಪಾ ಟೀಂಗೆ ತೆಗೆದುಕೊಂಡರು ಎಂದು ಕಿಡಿಕಾರಿದ್ದರು.

ಆದರೆ ಈಗ ಬದಲಾದ ಸನ್ನಿವೇಶದಲ್ಲಿ 'ವಿಶೇಷ ಪ್ರೇರಕ ಶಕ್ತಿ'ಯ ಆಣತಿಯಂತೆ ಆಡುತ್ತಿರುವ 29ರ ಹರಯದ ಯುವರಾಜನತ್ತಲೇ ಎಲ್ಲರ ನೋಟ. ಈಗಾಗಲೇ ನಾಲ್ಕು ಬಾರಿ ಪಂದ್ಯ ಪುರೊಷೋತ್ತಮ ಪ್ರಶಸ್ತಿಗಳೊಂದಿಗೆ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಇನ್ನೊಂದೇ ಒಂದು ಬಾರಿ ಪಂದ್ಯ ಪುರೊಷೋತ್ತಮ ಎನಿಸಿದರೂ ಸಾಕು ನಮ್ಮ ಯುವರಾಜನೇ ವಿಶ್ವ ಕಪ್-2011ರ ಮಹಾರಾಜ ಅರ್ಥಾತ್ ಸರಣಿ ಪುರೋಷತ್ತಮ ಎಂದು ಸಾರಿ ಹೇಳಬಹುದು.

ಇಂತಿಪ್ಪ ಯುವರಾಜ ಈ ಬಾರಿ ಸಿಕ್ಸರ್ ಎತ್ತದೆ ಎಚ್ಚರಿಕೆ ಮಿಶ್ರಿತ ಆಕ್ರಮಣದ ಆಟವಾಡುತ್ತಿದ್ದಾರೆ. ಒಂದೇ ಓವರ್-ನಲ್ಲಿ ಆರು ಸಿಕ್ಸರ್ ಎತ್ತಿದ ಪುಣ್ಯಾತ್ಮ ಇವಯ್ಯನೇನಾ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದೆ. ಅಷ್ಟಕ್ಕೂ ಇದುವೆಗಿನ ಪಂದ್ಯಗಳಲ್ಲಿ ಯುವ್ವಿ ಮೂರು ಬಾರಿ ಮಾತ್ರ ಬೌಂಡರಿ ಆಚೆಗೆ ಬಾಲನ್ನು ಎತ್ತಿದ್ದಾನೆ. ಆದಾಗ್ಯೂ ವಿರೋಧಿ ತಂಡಗಳನ್ನು ಪಂದ್ಯದಿಂದಾಚೆಗೆ, ಕೊನೆಗೆ ಪಂದ್ಯಾವಳಿಯಿಂದಾಚೆಗೆ (ಆಸ್ಟ್ರೇಲಿಯಾ) ಒಗಾಯಿಸಿದ್ದಾನೆ.

ಪಂದ್ಯಾವಳಿ ಆರಂಭಕ್ಕೂ ಮುನ್ನ, ಯುವ್ವಿ ಆಯ್ಕೆಯನ್ನು ಸಮರ್ಥಿಸಿಕೊಳ್ಳುವ ಧಾಟಿಯಲ್ಲಿ ತಂಡದ ದೊಡ್ಡಣ್ಣ ಧೋನಿ, ಐದನೇ ಬೌಲರ್ ತಲಾಶೆಯಲ್ಲಿದ್ದೇವೆ. ಯುವರಾಜ ಆ ಜವಾಬ್ದಾರಿ ಹೊತ್ತರೆ ಸಾಕು ಎಂದಿದ್ದರು. ಈಗ ನೋಡಿದರೆ ಯುವ್ವಿ ತಮ್ಮ ಕೈ ಚಳಕದಿಂದಲೇ ಪಂದ್ಯಗಳನ್ನು (ಇದುವರೆಗೆ 11 ವಿಕೆಟ್ ಕಬಳಿಸಿದ್ದಾರೆ) ಏಕಾಂಗಿಯಾಗಿ ಗೆದ್ದುಕೊಟ್ಟಿದ್ದಾರೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ ಮತ್ತು ಏಳು ಓವರೆ ಎಸೆದರೂ ವಿಕೆಟ್ ತೆಗೆದುಕೊಳ್ಳಲಿಲ್ಲ ಎಂಬುದನ್ನು ಬಿಟ್ಟರೆ ಯುವ್ವಿ ಹಿಂದುರುಗಿ ನೋಡಿದ್ದೇ ಇಲ್ಲ.

ಮುಂದ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Yuvraj Singh started the World Cup assured of a place in the playing eleven but unsure of his role and batting position in India's powerful team. By the time he reached his home ground Sunday to prepare for the World Cup semifinal against archrival Pakistan, he has proven to be the team's key match-winner. A roll-back scenario.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more