ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮ್ಯಾಚ್ ಫಿಕ್ಸಿಂಗ್ ಮಾಡಬೇಡಿ, ಸಚಿವ ಫರ್ಮಾನು

By Srinath
|
Google Oneindia Kannada News

ಕರಾಚಿ, ಮಾ. 28: ಭಾರತ-ಪಾಕ್ ದಾಯಾದಿ ಕಲಹ ಕ್ಷಣಗಣನೆ ಆರಂಭವಾಗಿದೆ. ಈ ಮಧ್ಯೆ, ಪಾಕಿಸ್ತಾನದ ಸಚಿವರೊಬ್ಬರು ಪಂದ್ಯದಲ್ಲಿ ಶಕುನಿ ಆಟ ಬೇಡ್ರಪ್ಪಾ ಎಂದು ಫರ್ಮಾನು ಹೊರಡಿಸಿದ್ದಾರೆ. ಇದಕ್ಕೆ ನಗಬೇಕೋ, ಅಳಬೇಕೋ? ತಿಳಿಯದಾಗಿದೆ. ಸಾಕ್ಷಾತ್ ದೇಶದ ಸಚಿವರೇ ತನ್ನ ತಂಡಕ್ಕೆ ಕಳ್ಳಾಟದಲ್ಲಿ ತೊಡಗಬೇಡಿ ಎಂದು ಅಲವತ್ತುಕೊಂಡಿದ್ದಾರೆಂದರೆ ...

ಅಂದಹಾಗೆ ಈ ರಾಜಾಜ್ಞೆ ಹೊರಡಿಸಿರುವುದು ಪಾಕ್ ಒಳಾಡಳಿತ ಸಚಿವ ರೆಹಮಾನ್ ಮಲಿಕ್. 'ಮ್ಯಾಚ್ ಫಿಕ್ಸಿಂಗ್ ಇರಲೇಬಾದರು. ನಿಮ್ಮ ಎಲ್ಲ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದ್ದೇನೆ, ಹುಷಾರು! ಅದರ ಸಣ್ಣ ಸುಳಿವು ಸಿಕ್ಕಿದರೂ ಮಟಾಷ್. ಕಳ್ಳಾಟದ ಆಟಗಾರನನ್ನು ಸರಿಯಾಗಿಯೇ ವಿಚಾರಿಸಿಕೊಳ್ಳುವೆ' ಎಂದು ತಮ್ಮ ಮುದ್ದಿನ ಆಟಗಾರರಿಗೆ ಕಿವಿಮಾತು ಹೇಳಿದ್ದಾರೆ.

'ತಂಡದಲ್ಲಿ ತುಂಬಾ ಶುದ್ಧ ಆಟಗಾರರಿದ್ದಾರೆ ಎಂಬುದನ್ನು ನಾನು ಬಲ್ಲೆ. ಆದರೂ ಕೆಟ್ಟ ಘಳಿಗೆ ಹೇಗೋ, ಏನೋ? ತಂಡದ ಸದಸ್ಯರನ್ನು ಯಾರು ಭೇಟಿ ಮಾಡುತ್ತಿದ್ದಾರೆ? ಸ್ವತಃ ಆಟಗಾರರೂ ಯಾರನ್ನೆಲ್ಲ ಭೇಟಿ ಮಾಡುತ್ತಿದ್ದಾರೆ? ಎಂಬುದರ ಬಗ್ಗೆ ಬೇಹುಗಾರಿಕೆ ಕಣ್ಗಾವಲು ಹಾಕಲಾಗಿದೆ. ದೂರವಾಣಿಗಳೂ ನಮ್ಮ ನಿಗಾದಲ್ಲಿಯೇ ಇವೆ' ಎಂದು ಮಲಿಕ್ ಖಡಕ್ಕಾಗಿ ಎಚ್ಚರಿಸಿದ್ದಾರೆ.

'ಸಮರಾಭ್ಯಾಸ ಶಿಸ್ತುಬದ್ಧವಾಗಿರಲಿ. ಬೇಗನೇ ಮಲಗಿ. ಸರಿಯಾದ ಸಮಯಕ್ಕೆ ಎದ್ದೇಳಿ. ನಿಮ್ಮನ್ನು ನೀವೇ ಮೊಹಾಲಿ ಸೆಮಿಫೈನಲ್ ಪಂದ್ಯಕ್ಕೆ ಅರ್ಪಿಸಿಕೊಳ್ಳಿ' ಎಂದು ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಮೂಲಕ ಸಚಿವ ಮಲಿಕ್ ತಮ್ಮ ತಂಡದ ಸದಸ್ಯರಿಗೆ ಸೋಮವಾರ ಸಂದೇಶ ರವಾನಿಸಿದ್ದಾರೆ.

English summary
Ahead of their crucial World Cup semifinal against India, Pakistani cricketers have been warned not to indulge in any match-fixing by Pakistan interior minister Rehman Malik. He is keeping a "close watch" on the activities of the players he said during an interaction with the media in the port city of Karachi on 28 March 2011.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X