ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂಡೀಗಢದಲ್ಲಿ ಕಿಂಗ್ ಫಿಶರ್ ಬಸ್ ನಿಲ್ದಾಣ

By * ಸಾಧು ಶ್ರೀನಾಥ್
|
Google Oneindia Kannada News

ಮೊಹಾಲಿ, ಮಾ. 28: ಭಾರತ-ಪಾಕಿಸ್ತಾನ ನಡುವಣ ಮತ್ತೊಂದು ಸುತ್ತಿನ ದಾಯಾದಿ ಸಮರಕ್ಕೆ ಚಂಡೀಗಢ ಸಾಕ್ಷಿಯಾಗಲಿದೆ. ಚಂಡೀಗಢ ನಿಜಕ್ಕೂ ನೋಡಲಿಕ್ಕೆ ಎರಡು ಕಣ್ಣು ಸಾಲದು ಎನ್ನುವಂತಿದೆ. ಇಲ್ಲಿನ ಸುವಿಶಾಲ ರಸ್ತೆಗಳೇ ಆಗಲಿ, ಬಡಾವಣೆಗಳೇ ಆಗಲಿ, ಜನರ ಶಿಸ್ತುಬದ್ಧ ಜೀವನವಾಗಲಿ, ತಂಬಾಕುರಹಿತ ನಗರ ಎಂಬ ಅಗ್ಗಳಿಕೆಯಾಗಲಿ ಎಲ್ಲವೂ ಸೂಪರ್ ಸೂಪರ್. ಆದರೆ ಇಲ್ಲಿಗೆ ಜನರನ್ನು ಹೊತ್ತುತರಲು ಸರಿಯಾದ ವಿಮಾನ ನಿಲ್ದಾಣವೇ ಇಲ್ಲ.

ಸದ್ಯಕ್ಕೆ ಇಲ್ಲಿರುವುದು ಅಕ್ಷರಶಃ ಕಿತ್ತೋಗಿರೊ ವಿಮಾಣ ನಿಲ್ದಾಣ. ನಾವೂ ನೀವು ದಿನನಿತ್ಯ ಕಾಣುವ ರೈಲ್ವೆ ಸ್ಟೇಷನ್ನೋ ಅಥವಾ ಬಸ್ ಸ್ಟೇಶನ್ನೊ ಇದ್ದಂತಿದೆ. ಇನ್ನು, ಪಂದ್ಯದ ನಿಮಿತ್ತ ಇಲ್ಲಿಗೆ ದೇಶೀಯ ವಿಮಾನಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆಯಿದ್ದು, ವಿಮಾನಗಳಿಗೂ ಪಾರ್ಕಿಂಗ್ ಸಮಸ್ಯೆ ಕಾಡಲಿದೆ. ಅಂತಾರಾಷ್ಟ್ರೀಯ ವಿಮಾನಗಳು ಇಲ್ಲಿಗೆ ನೇರವಾಗಿ ಬರುವ ಮಾತೇ ಇಲ್ಲ. ಸಮೀಪದ ದೆಹಲಿ (ಅರ್ಧ ಗಂಟೆ ಹಾರಾಟ) ಅಥವಾ ಮುಂಬೈಗೆ ಆಗಮಿಸಿ ಅಲ್ಲಿಂದ ದೇಶೀಯ ವಿಮಾನದಲ್ಲಿ ಇಲ್ಲಿಗೆ ತಲುಪುಬೇಕಾದ ದುಃಸ್ಥಿತಿಯಿದೆ. ಇನ್ನು ರಾತ್ರಿ ವೇಳೆಯಂತೂ ಇಲ್ಲಿ ಯಾವುದೇ ವಿಮಾನ ಹಾರಾಟ ನಡೆಸುವಂತಿಲ್ಲ. ಏರ್ ಟ್ರಾಫಿಕ್ ಕಂಟ್ರೋಲ್ ಸೇರಿದಂತೆ ಎಲ್ಲವೂ ಭಾರತೀಯ ವಾಯುಪಡೆ ಅಧೀನದಲ್ಲಿಯೇ ಇದೆ.

ಮಾರ್ಚ್ 30ರಂದು ಭಾರತ-ಪಾಕ್ ಕದನವನ್ನು ಕಣ್ಣಾರೆ ನೋಡಿ ಆಸ್ವಾದಿಸಲು ಪಾಕ್ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಆಗಮಿಸಲಿದ್ದಾರೆ. ಸೊ, ಅವರನ್ನು ಹೊತ್ತುತರಲಿರುವ ವಿಮಾನವೇ ಇಲ್ಲಿಯವರೆಗೂ ಪ್ರಯಾಣ ಬೆಳೆಸಲಿರುವ ಮೊದಲ ಅಂತಾರಾಷ್ಟ್ರೀಯ ವಿಮಾನ ಅಂದರೆ ನೀವು ನಂಬಲೇಬೇಕು. ಗಣ್ಯಾತಿಗಣ್ಯರೊಂದಿಗೆ ಬೃಹತ್ ವಿಮಾನ ಇಲ್ಲಿಗೆ ಬಂದಿಳಿಯಲಿದೆ ಎಂದು ಅಧಿಕೃತ ಮೂಲಗಳು ಖಚಿತಪಡಿಸಿವೆ.

ಸಮಾಧಾನದ ಸಂಗತಿಯೆಂದರೆ ಹೊಸ ಅಂತಾರಾಷ್ಟ್ರೀಯ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು, ಸದ್ಯದಲ್ಲೇ ವಿದೇಶೀ ವಿಮಾನಗಳೂ ಇಲ್ಲಿಗೆ ಬಂದು ಹೋಗಲಿವೆ. ಆದರೆ ಇಲ್ಲಿವರೆಗೂ ಅದೇ ಇರ್ಲಿಲ್ವಲ್ಲ ಎಂಬುದೇ ಚಂಡೀಗಢ ಜನರ ಅಳಲು.

English summary
The airport in Chandigarh may witness its first international flight with the expected arrival of Pak PM Gilani to watch the Indo-Pak cricket semi final on Mar 30 at Mohali. Presently the local airport is operating around 11 flights daily for various domestic destinations only. The construction work of the new international airport terminal is expected to be completed soon. Due to World cup match the traffic load on this airport is so heavy, the entire infrastructure appears like a bus stand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X