• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೌದು, ಸಾನಿಯಾ ಬೆಂಬಲ ಯಾರಿಗೆ !?

By Srinath
|

ಮೊಹಾಲಿ, ಮಾ. 26: ಭಾರತ ಮತ್ತು ಪಾಕಿಸ್ತಾನ ಮಧ್ಯೆ ಬುಧವಾರ ಸೆಮಿಫೈನಲ್ ಕದನ ನಿಕ್ಕಿಯಾಗುತ್ತಿದ್ದಂತೆ ಇತ್ತೀಚೆಗೆ ನಿಖಾ ಆಗಿ ಭಾರತ-ಪಾಕ್ ಬಂದಾ ಜೋಡಿ ಎನಿಸಿರುವ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ನಡುವೆಯೂ ಕದನ ಕುತೂಹಲ ಏರ್ಪಟ್ಟಿದೆ. ನೆರೆಹೊರೆಯವರ ಮಧ್ಯೆ ಬಹುನಿರೀಕ್ಷಿತ ಕ್ರಿಕೆಟ್ ಯುದ್ಧಕ್ಕೆ ಸಿದ್ಧತೆ ನಡೆದಿರುವಾಗ ಯಾರಿಗೆ ನಿಷ್ಠೆ ತೋರಬೇಕು ಎಂಬುದರ ಕುರಿತು ಈ ಜೋಡಿಯ ಮಧ್ಯೆಯೇ ಸುಂಟರಗಾಳಿ ಎದ್ದಿದೆ.

ಟೆನಿಸ್ ದೇವತೆ ಸಾನಿಯಾಗೆ ತವರಿನ ವ್ಯಾಮೋಹ. 'ಪತಿ ಸಾಹೇಬನಿಗೋ ಪಾಕಿಸ್ತಾನದ್ದೇ ಚಿಂತೆ. ನಾನು ಭಾರತವನ್ನು ಹುರಿದುಂಬಿಸುತ್ತೇನೆ. ಅವ ಎಂದಿನಂತೆ ಪಾಕ್-ಗೇ ತನ್ನ ನಿಷ್ಠೆ ಎಂದಿದ್ದಾನೆ. ಯುದ್ಧ ಆರಂಭವಾಗಿದೆ' ಎಂದು ಸಾನಿಯಾ ಘೋಷಿಸಿದ್ದಾಳೆ. 'ಬೇಬಿ! ರೆಡಿಯಾಗು ಬುಧವಾರದ ಕದನಕ್ಕೆ' ಎಂದು ಶೋಯೆಬ್ ತನ್ನ ಬೇಗಂ ಕಿವಿಯಲ್ಲಿ ಪಿಸುಗುಟ್ಟಿದ್ದಾನೆ. ಅಂದಹಾಗೆ ಪಂದ್ಯ ವೀಕ್ಷಿಸಲು ನಮ್ಮ ಹೊಸ ಜೋಡಿ ಅದಾಗಲೇ ಟಿಕೆಟ್ ಬುಕ್ ಮಾಡಿಸಿದೆ. ಮೈದಾನದ ಮಧ್ಯೆ ಮದಗಜಗಳು ಹೋರಾಡುತ್ತಿದ್ದರೆ ಪ್ರೇಕ್ಷಕರ ಮಧ್ಯೆ ಈ ಜೋಡಿ ಏನೆಲ್ಲ 'ಆಟ' ಆಡುತ್ತದೋ ಮೂಕ ಪ್ರೇಕ್ಷಕರಾಗಿ ನಾವೂ ನೋಡುವ.

ಇನ್ನು, ಖ್ಯಾತ ನಾಮರು, ಬಾಲಿವುಡ್ ತಾರೆಯರಿಂದಾಗಿ ಟ್ವಿಟ್ಟರ್ ಅಂತಹ ಆಧುನಿಕ ಸಾಮಾಜಿಕ ತಾಣಗಳು ಅದಾಗಲೇ ತುಂಬಿತುಳುಕುತ್ತಿವೆ. ಮಹೇಂದ್ರ ಸಿಂಗ್ ಧೋನಿಗೆ ಉಘೇ, ಉಘೇ ಅನ್ನುತ್ತಿದ್ದಾರೆ. ಮಹತ್ವದ ಪಂದ್ಯದಲ್ಲಿ ಸಕಲಾದೃಷ್ಟವೂ ನಿನ್ನದೇ ಆಗಲಿ ಎಂದಿದ್ದಾರೆ. 'ನಮಗಿದೇ ಫೈನಲ್. ನಾವಾಗಲೇ ಮಿಯಾಮಿಯಲ್ಲಿ ಢ್ಯಾನ್ಸ್ ಪಾರ್ಟಿ ಶುರುವಚ್ಚುಕೊಂಡಿದ್ದೀವಿ' ಎಂದು ಕನ್ನಡಿಗ ಮಹೇಶ್ ಭೂಪತಿ ಟ್ವೀಟ್ ಮಾಡಿದ್ದಾರೆ.

ಬಾಲಿವುಡ್ ದೇವತೆ ಶಿಲ್ಪಾ ಶೆಟ್ಟಿ ಕ್ರಿಕೆಟ್ ಪ್ರೇಮ ಯಾರಿಗೆ ತಾನೇ ತಿಳಿದಿಲ್ಲ. ರಾಜಸ್ಥಾನ್ ರಾಯಲ್ಸ್ ತಂಡದ ಅಧಿನಾಯಕಿ ಶಿಲ್ಪಾ, Yesssssssssssssssss We did it, good job team india...fabulous work Yuvi:)In the Semis...Bring it on, yipeeeeeeeeee!" ಎಂದಿದ್ದಾಳೆ. ಅನಾರೋಗ್ಯದಿಂದಾಗಿ ಅರೆಮನಸ್ಸಿನಿಂದ ಮೈದಾನದಿಂದ ಸೀದಾ ಆಸ್ಪತ್ರೆ ಸೇರಿರುವ ಇಂಗ್ಲೆಂಡ್ ದೈತ್ಯ ಪ್ರತಿಭೆ ಕೆವಿನ್ ಪೀಟರ್ ಸನ್-ಗೆ ನಮ್ಮ ಯುವರಾಜನ ಬಗ್ಗೆ ಎಲ್ಲಿಲ್ಲದ ಪ್ರೀತಿ... ಅದಕ್ಕೇ Congrats India!! @yuvsingh09 on fire.. ? ಎಂದಿದ್ದಾನೆ.

English summary
Ahead of the high-voltage World Cup semifinal clash between India and arch-rivals Pakistan in Mohali next week. A "war" seems to be brewing between Indo-Pak couple of Sania Mirza and Shoaib Malik. The couple have caught in a battle of loyalty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more