ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಕೆಟ್ ಮಧ್ಯೆ ಮದ್ಯ, ಉಕ್ಕುತ್ತಿದೆ ದೇಶಾಭಿಮಾನ !

By Srinath
|
Google Oneindia Kannada News

ಮೊಹಾಲಿ, ಮಾ. 26: ಭಾರತದ ಯುವರಾಜ ಭರ್ಜರಿ ಪ್ರದರ್ಶನದ ಮೂಲಕ ಕ್ರಿಕೆಟ್ ಅಮಲು ಹತ್ತಿಸುತ್ತಿದ್ದರೆ ಇತ್ತ ದೇಶದ ನಾನಾ ಕಡೆ 'ಅಮಲು'ದಾರರೂ ಭರ್ಜರಿ ನಿಶೆಯೇರಿಸಿಕೊಳ್ಳುತ್ತಿದ್ದಾರೆ. ಇದರ ಸಂಪೂರ್ಣ ಲಾಭ: ಪಬ್, ಬಾರ್ ಮಾಲೀಕರಿಗೆ. ಇವರ ಆಮದನಿ ಶೇ. 50ರಷ್ಟು ಏರಿದೆಯಂತೆ. ಭಾರತ ಅಹಮದಾಬಾದಿನಲ್ಲಿ ಆಸ್ಟ್ರೇಲಿಯಾವನ್ನು ಗುರುವಾರ ಬಗ್ಗುಬಡಿಯುತ್ತಿದ್ದಂತೆ ಅನೇಕ ಪಬ್-ಗಳಲ್ಲಿ ವ್ಯಾಪಾರದ ನೊರೆ ಶೇ. 100ರಷ್ಟು ಉಕ್ಕಿದೆ.

ವಾರದ ದಿನಗಳಲ್ಲಿ ಸಾಮಾನ್ಯವಾಗಿ ತಲಾ 1-2 ಲಕ್ಷ ರುಪಾಯಿ ವಹಿವಾಟು ಕಾಣುವ ಬಾರ್-ಗಳು ಅಂದು 3-4 ಲಕ್ಷದ ವಹಿವಾಟು ಹೊಳೆ ಹರಿಸಿವೆ. 'ನಮ್ಮ ಗೌರವಾನ್ವಿತ ಗ್ರಾಹಕರಲ್ಲಿ ದೇಶಾಭಿಮಾನ ಉಕ್ಕಿ ಹರಿಯುತ್ತಿದೆ. ಅದಕ್ಕೆ ತಕ್ಕಂತೆ ನಮ್ಮ ವಹಿವಾಟೂ' ಎಂದು ಬಾರ್ ಮಾಲೀಕರು ಹರ್ಷದ ಹೊನಲನ್ನು ಚೆಲ್ಲಿದ್ದಾರೆ.

ಮುಂಬರುವ ಮ್ಯಾಚ್-ಗಳನ್ನು ನೆನೆಸಿಕೊಂಡು ಕ್ರಿಕೆಟ್ ಪ್ರವಾಹದೊಂದಿಗೆ ಈಜಲು ಪಬ್ ಮಾಲೀಕರು ಈಗಾಗಲೇ ಸಿದ್ಧತೆ ನಡೆಸಿದ್ದಾರೆ. ಮಾರ್ಚ್ 30ರಂದು ಭಾರತ-ಪಾಕ್ ಪಂದ್ಯಕ್ಕೂ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಭಿಮಾನಿಗಳನ್ನು ನಿರಾಶೆಗೊಳಿಸಬಾರದೆಂದು ಟಿವಿಗಳ ಸಂಖ್ಯೆಯನ್ನು ಏರಿಸಿದ್ದಾರೆ. ಕೆಲವೆಡೆ ಬೃಹತ್ ಪರದೆಗಳನ್ನು ಇಳಿಯಬಿಟ್ಟಿದ್ದಾರೆ.

ಇನ್ನು ಕೆಲವೆಡೆ ಚೀರ್ ಹುಡುಗರನ್ನು (ಚೀರ್ ಗರ್ಲ್ಸ್!?) ಚೀರಾಡಲು ಅಣಿಗೊಳಿಸುತ್ತಿದ್ದಾರೆ. ಬೌಂಟರಿ, ಸಿಕ್ಸರ್, ಕ್ವಾರ್ಟರ್, ಸೆಮಿ ಕೊನೆಗೆ ಫುಲ್ ಟೈಟ್, ಕ್ಲೀನ್ ಬೌಲ್ಡ್... ಹೀಗೆ ಮೆನು ಪುಸ್ತಕದಲ್ಲಿ ಕ್ರಿಕೆಟ್ ಪದಗುಚ್ಛ ಅರಳಿಸಿದ್ದಾರೆ. ಕ್ಯಾಂಟೀನ್ ಮತ್ತು ಪಾನೀಯಗಳ ದರಗಳಲ್ಲಿ ಡಿಸ್ಕೌಟ್ ಅನೌನ್ಸ್ ಮಾಡಿದ್ದಾರೆ. ಬುಧವಾರ 5 ಲಕ್ಷ ರು. ವಹಿವಾಟು ತಲುಪುವ ಗುರಿ ಹೊಂದಿದ್ದಾರೆ.

ಮಾಂಸಾಹಾರಿಗಳಿಗೆ ಮಹಿ ಹೆಲಿಕಾಪ್ಟರ್ ಶಾಟ್ (ಚಿಕನ್ ಡಿಶ್) ಹಾಗೆಯೇ ಶಾಕಾ'ಹರಿ'ಗಳಿಗೆ ಸಚಿನ್ ಪ್ಯಾಡಲ್ ಸ್ಟ್ರೀಟ್, ಎಲ್ಬಿಡಬ್ಲ್ಯು, ಒಂದು ಕೈನೋಡೇಬಿಡೋಣ ಎನ್ನುವವರಿಗೆ 'ಯಾರ್ಕರ್' ...ಸಹ ಸ್ವಾಗತ ಕೋರುತ್ತಿವೆ. ತಡವೇಕೆ? ಸೀಟ್ ಬುಕ್ ಮಾಡಿಸಿ. ಆಮೇಲೆ ಸೋಲ್ಡ್ ಔಟ್ ಬೋರ್ಡ್ ನೋಡಿ ನಿರಾಶರಾಗುವುದು ಬೇಡ. ತಂಡೋಪಾದಿಯಲ್ಲಿ ಪಬ್, ಬಾರ್-ಗಳತ್ತ ಸುವರ್ಣ ನ್ಯೂಸ್-ನ ಸಿಂಗ್ರಿ ಸ್ಟೈಲ್-ನಲ್ಲಿ ತಟ್ಟಾಡಿಕೊಂಡು ತೆರಳಿ...

English summary
It's not Yuvraj Singh alone who is having a good time at the World Cup this year. Even pubs in many cities including Bangalore are scoring high with each game pushing revenues up by a good 50 per cent. Poor coffee shops of Bangalore!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X