ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಕ್ರಿಕೆಟ್ ಪ್ರೇಮಿಗಳಿಗೆ ತುರ್ತು ವೀಸಾ ಕಾಣಿಕೆ

By Srinath
|
Google Oneindia Kannada News

ಮೊಹಾಲಿ, ಮಾ. 25: ಹುಟ್ಟಾ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡದ ಮಧ್ಯೆ ಬುಧವಾರ ಸೆಮಿಫೈನಲ್ ಪಂದ್ಯ ನಿಕ್ಕಿಯಾಗುತ್ತಿದ್ದಂತೆ ಉಪಖಂಡದಲ್ಲಿ ಕ್ರಿಕೆಟ್ ಜ್ವರ ಜರ್ರನೇ ಏರಿದೆ. ಈ ಹಿನ್ನೆಲೆಯಲ್ಲಿ ಪಂದ್ಯವನ್ನು ಕಣ್ಣಾರೆ ನೋಡಿ ಆನಂದಿಸುವಂತಾಗಲು ಕೇಂದ್ರ ಗೃಹ ಸಚಿವಾಲಯ ಪಾಕಿಸ್ತಾನದ ಪ್ರಜೆಗಳಿಗಾಗಿ ವೀಸಾ ಪ್ರಕ್ರಿಯೆ ಸಡಿಲಿಸಿದೆ. ಪಾಕ್ ಕ್ರಿಕೆಟ್ ಪ್ರೇಮಿಗಳಿಗೆ ಹೃತ್ಪೂರ್ವಕ ಸ್ವಾಗತ ಕೋರಲು ಭಾರತೀಯರು ಉತ್ಸುಕರಾಗಿದ್ದಾರೆ. ಆದರೆ ಇದೇ ವೇಳೆ ಬಂದವರು ಹಾಗೆಯೇ ವಾಪಸಾಗಬೇಕೆಂದೂ ಆಶಿಸಿದ್ದಾರೆ. Pls, don't over-stay.

ಗುರುವಾರ ಆಸ್ಟ್ರೇಲಿಯಾ ವಿರುದ್ಧ ಭಾರತ ಭರ್ಜರಿ ಜಯ ದಾಖಲಿಸಿದ ಬಳಿಕ ಮಾರ್ಚ್ 30ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯ ಹೆಚ್ಚು ಕುತೂಹಲ ಕೆರಳಿಸಿದೆ. ಅದು ಭಾರತ ಮತ್ತು ಪಾಕ್ ನಡುವೆಯಾಗಿದ್ದು, ಇನ್ನೂ ಹೆಚ್ಚು ಮಹತ್ವ ಪಡೆದುಕೊಂಡಿದೆ. ಪಂದ್ಯವನ್ನು ನೇರವಾಗಿ ನೋಡುವ ತವಕದಲ್ಲಿರುವ ಪಾಕ್ ಕ್ರಿಕೆಟ್ ಪ್ರೇಮಿಗಳನ್ನು ನಿರಾಸೆಗೊಳಿಸುವುದು ಸಮಂಜಸವಲ್ಲ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕ್ಷಿಪ್ರವಾಗಿ ವೀಸಾ ವಿತರಿಸಲು ಪ್ರಕ್ರಿಯೆಯನ್ನು ಸಡಿಲಿಸಲಾಗಿದೆ ಎಂದು ಮೂಲಗಳು ಹೇಳಿವೆ.

Mohali Semi-finals

ಟಿಕೆಟ್ ಖರೀದಿಸಿರುವ ಎಲ್ಲರಿಗೂ 15 ದಿನಗಳ ವಾಸ್ತವ್ಯದ ವೀಸಾ ವಿತರಿಸಲಾಗಿದೆ. ವಿಶ್ವ ಕಪ್-ನಲ್ಲಿ ಪಾಕಿಸ್ತಾನ ಹಾಗೂ ಭಾರತ ಎರಡೂ ತಂಡಗಳು ಅನಿರೀಕ್ಷಿತವಾಗಿಯೇ ಎಂಬಂತೆ ಅತ್ಯುತ್ತಮ ಪ್ರದರ್ಶನ ತೋರುತ್ತಿವೆ. ಆದ್ದರಿಂದ ತಕ್ಷಣ ತ್ವರಿತ ವೀಸಾಗಾಗಿ ಏರ್ಪಾಡು ಮಾಡುವಂತೆ ಇಸ್ಲಾಮಾಬಾದಿನಲ್ಲಿರುವ ಭಾರತೀಯ ಹೈಕಮಿಷನ್ ಕೇಂದ್ರಕ್ಕೆ ತುರ್ತು ಮನವಿ ಮಾಡಿತ್ತು. ಗಮನಾರ್ಹವೆಂದರೆ, ಪ್ರಸಕ್ತ ವಿಶ್ವ ಕಪ್ ಕ್ರಿಕೆಟ್-ಗಾಗಿ ಈಗಾಗಲೇ ಒಟ್ಟು 5,000 ವೀಸಾಗಳನ್ನು ವಿತರಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.

English summary
The Indian Home ministry has relaxed visa norms for Pakistani fans for the semi final match between India at Mohali. The Indian High Commission in Islamabad had sent an SOS to North Block, to relax its visa norms for people from Pakistan following Pakistan's unexpected good performance in the World Cup.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X