ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಟರ್ ಪೋಲ್ ತೆಕ್ಕೆಗೆ ಕ್ರಿಕೆಟ್ ಉಗ್ರ: ಹೈ ಅಲರ್ಟ್

By Super
|
Google Oneindia Kannada News

ನವದೆಹಲಿ, ಮಾ. 25: ಹಾಲಿ ವಿಶ್ವ ಕಪ್ ಕ್ರಿಕೆಟ್-ಗೆ ಭಯೋತ್ಪಾದಕ ದಾಳಿ ಭೀತಿ ದಟ್ಟವಾಗಿದ್ದು ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಅನಾಥ ಬ್ಯಾಗೊಂದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲ ಬ್ಯಾಗೇಜ್-ಗಳನ್ನೂ ಕಟ್ಟುನಿಟ್ಟಾಗಿ ತಪಾಸಣೆ ನಡೆಸುವಂತೆಯೂ ಸೂಚಿಸಿಲಾಗಿದೆ. ಮುಂಬೈನಲ್ಲಿ ಏಪ್ರಿಲ್ 2ರಂದು ಫೈನಲ್ಸ್ ನಡೆಯುವ ಹಿನ್ನೆಲೆಯಲ್ಲಿ ಈ ಕಟ್ಟೆಚ್ಚರ ಘೋಷಿಸಲಾಗಿದೆ.

Interpol Chief, Terrorist Arrested
ಈ ಮಧ್ಯೆ ಪಾಕಿಸ್ತಾನದ ನೆರವಿನೊಂದಿಗೆ ವಿಶ್ವ ಕಪ್ ಕ್ರಿಕೆಟ್ -ನಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಶಂಕಿತ ಉಗ್ರನೊಬ್ಬನನ್ನು ಬಂಧಿಸಿರುವುದಾಗಿ ಇಂಟರ್ ಪೋಲ್ ಮುಖ್ಯಸ್ಥ ರೊನಾಲ್ಡ್ ನೋಬಲ್ ತಿಳಿಸಿದ್ದಾರೆ. ಭಯೋತ್ಪಾದಕನನ್ನು ಯಾವ ರಾಷ್ಟ್ರದಲ್ಲಿ ಬಂಧಿಸಲಾಗಿದೆ ಎಂಬುದನ್ನು ಬಹಿರಂಗಪಡಿಸದ ನೋಬಲ್, ಬಂಧಿತ ಉಗ್ರನು ಯಾವುದೇ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾನೆಯೇ ಎಂಬುದನ್ನೂ ತಿಳಿಸಲಿಲ್ಲ.

ಭಯೋತ್ಪಾದನೆ ದಾಳಿ ಮಾಡುವ ಉದ್ದೇಶದೊಂದಿಗೆ ಕರಾಚಿಯಿಂದ ಮಾಲ್ಡೀವ್ಸ್-ನತ್ತ ಹೊರಟಿದ್ದ ಉಗ್ರನೊಬ್ಬನನ್ನು ಕಳೆದ ವಾರ ಪತ್ತೆ ಹಚ್ಚಿ, ಬಂಧಿಸಲಾಗಿದೆ. ಇದಕ್ಕೆ ಪಾಕ್, ಶ್ರೀಲಂಕಾ ಮತ್ತು ಮಾಲ್ಡೀವ್ಸ್ ಪೊಲೀಸರ ನೆರವು ಪಡೆಯಲಾಗಿತ್ತು. ದಾಳಿಯ ಭೀತಿ ಗಂಭೀರವಾಗಿತ್ತು. ಆದರೆ ಉಪಖಂಡದ ಪೊಲೀಸರು ಇದೀಗ ನಿರಾಳರಾಗಿದ್ದು, ಯಾವುದೇ ಆತಂಕವಿಲ್ಲದೆ ಪಂದ್ಯಗಳು ಸುಸೂತ್ರವಾಗಿ ನಡೆಯಲಿವೆ ಎಂದು ನೋಬಲ್ ಇಸ್ಲಾಮಾಬಾದಿನಲ್ಲಿ ಶುಕ್ರವಾರ ಹೇಳಿದ್ದಾರೆ.

English summary
Interpol chief Ronald Noble has said in Islamabad on Friday (March 25) that interpol was able to identify, locate and arrest a terrorist, who had left Karachi on his way to the Maldives with criminal intentions. Acting on the tip provided by Interpol, the Indian Government has announced high alert across all airports in the country
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X