ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂಚಿ ಶಂಕರಾಚಾರ್ಯ ಹೊಸ ಪಕ್ಷ ಉದಯ

By Srinath
|
Google Oneindia Kannada News

Kanchi Sankaracharya
ಚೆನ್ನೈ, ಮಾ. 24: ಕಂಚಿ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಅವರು ಕಂಚಿ ಶಂಕರಮಠದ ಆಶ್ರಯದಲ್ಲಿ ತಮಿಳುನಾಡು ದೇಶೀಯ ಆಣ್ಮಿಗ ಮಕ್ಕಳ್ ಕಚ್ಚಿ (ತಮಿಳುನಾಡು ರಾಷ್ಟ್ರೀಯ ಧಾರ್ಮಿಕ ಜನರ ಪಕ್ಷ ) ಪಕ್ಷಕ್ಕೆ ಬುಧವಾರ ಚಾಲನೆ ನೀಡಿದ್ದಾರೆ. ಇದೇ ವೇಳೆ ಪಕ್ಷದ ಧ್ವಜವನ್ನು ಅನಾವಣಗೊಳಿಸುತ್ತಾ ಅವರು 'ಇದು ಕೇವಲ ಒಂದು ಪಕ್ಷವಲ್ಲ. ಬದಲಿಗೆ ಧಾರ್ಮಿಕ ಭಕ್ತಿ ಆಚರಣೆ, ನಮ್ಮನ್ನು ಆವರಿಸಿರುವ ದುಷ್ಟ ಶಕ್ತಿಗಳಿಂದ ದೂರವಾಗಲು, ಸ್ವಚ್ಛಂದ ಜೀವನ ನಿರ್ವಹಿಸುವುದಕ್ಕೆ ಇದು ಪ್ರೇರಣೆ ನೀಡಲಿದೆ' ಎಂದು ಪಕ್ಷದ ಧ್ಯೇಯೋದ್ಧೇಶಗಳನ್ನು ಸ್ಪಷ್ಟಪಡಿಸಿದರು.

ಗಮನಾರ್ಹವೆಂದರೆ ಕಂಚಿ ಪೀಠಾಧೀಶ ಜಯೇಂದ್ರ ಸರಸ್ವತಿ ಅವರು ಈ ಧಾರ್ಮಿಕ ಪಕ್ಷದಲ್ಲಿ ಯಾವುದೇ ಹುದ್ದೆಯನ್ನು ಹೊಂದಿಲ್ಲ. ಪಕ್ಷವು ಸದ್ಯದಲ್ಲೇ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಳಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದೆ. ಆದರೆ ಪಕ್ಷವು ತನ್ನದೇ ಆದ ಪ್ರಣಾಳಿಕೆಗಳನ್ನು ಹೊಂದಿದೆ: ಧಾರ್ಮಿಕ ಮತಾಂತರ ನಿಷೇಧ, ಗೋಹತ್ಯೆ ನಿಷೇಧ, ದೇವಸ್ಥಾನಗಳಲ್ಲಿ ಸರಕಾರಿ ಆಡಳಿತವನ್ನು ಹಿಂತೆಗೆತಕ್ಕೆ ಪಕ್ಷ ಸಂಪೂರ್ಣ ಬೆಂಬಲ ಸೂಚಿಸಿದೆ.

ಇತ್ತೀಚೆಗಷ್ಟೇ 'ಯೋಗ ಗುರು' ರಾಮದೇವ್ ಅವರು 'ರಾಜ್ ಗುರು' ಆಗಿದ್ದಾರೆ. ಸ್ವಾಮಿಜಿಗಳು ರಾಜಕೀಯ ಪ್ರವೇಶಿಸುವುದು ಹೊಸದೇನೂ ಅಲ್ಲ. ಕಂಚಿ ಶಂಕರಾಚಾರ್ಯ ಅವರು ಬಾಬಾ ರಾಮದೇವ್ ಅವರ ಹಾದಿಯಲ್ಲಿ ಹೆಜ್ಜೆಹಾಕುತ್ತಿದ್ದಾರೆ ಎಂದು ರಾಜಕೀಯ ವಿಶ್ಲೇಷಕ ಚೊ. ರಾಮಸ್ವಾಮಿ ಅವರು ಈ ವಿದ್ಯಮಾನವನ್ನು ವಿಶ್ಲೇಷಿಸಿದ್ದಾರೆ.

English summary
Kanchi Sankaracharya Jayendra Saraswati officially launched a party called Tamil Nadu Desiya Aanmiga Makkal Katchi ( Tamil Nadu National Spiritual People's Party), under the aegis of the Kanchi Sankara Math on Wednesday (March 23).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X