• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಗತ್ ಬಗ್ಗೆ ಗೊತ್ತಿಲ್ಲದ ಸಣ್ಣಸಣ್ಣ ಸಂಗತಿಗಳು

By Prasad
|

ಮಾರ್ಚ್ 23, 1931 ಷಹೀದ್ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ಅರ್ಪಿಸಿದ ದಿನ. ಕೇವಲ 23 ವರ್ಷದವರಿದ್ದಾಗಲೇ ಭಗತ್ ಸಿಂಗ್ ಮಾಡಿದ ಸಾಧನೆ ಇಂದಿನ ಯುವಜನತೆಗೆ ಇಂದಿಗೂ ಪ್ರೇರಣೆಯಾಗಿದೆ. ಭಾರತ ಕಂಡ ಅಪ್ರತಿಮ ಕ್ರಾಂತಿಕಾರನ ಬಗ್ಗೆ ತಿಳಿಯದವರೇ ಇಲ್ಲ. ಆದರೂ, ಅವರ ಬಗ್ಗೆ ತಿಳಿಯದ ಸಣ್ಣಸಣ್ಣ ಸಂಗತಿಗಳನ್ನು ಐಬಿಎನ್ ಲೈವ್ ದಾಖಲಿಸಿದೆ.

1. ಉತ್ತಮ ನಟರೂ ಆಗಿದ್ದ ಭಗತ್ ಕಾಲೇಜಿನಲ್ಲಿ ಅನೇಕ ನಾಟಕಗಳಲ್ಲಿ ಭಾಗವಹಿಸಿದ್ದರು. ರಾಣಾ ಪ್ರತಾಪ್, ಸಾಮ್ರಾಟ್ ಚಂದ್ರಗುಪ್ತ, ಭಾರತ ದುರ್ದಶ ಮುಂತಾದ ನಾಟಕಗಳಲ್ಲಿನ ಉತ್ತಮ ಅಭಿನಯಕ್ಕಾಗಿ ಶಿಕ್ಷಕರಿಂದ ಮೆಚ್ಚುಗೆ ಗಳಿಸಿದ್ದರು.

2. ಏಪ್ರಿಲ್ 13, 1919ರಂದು ನಡೆದ ಜಲಿಯನ್ ವಾಲಾ ಬಾಗ್ ದುರಂತ ನಡೆದ ದಿನ ಶಾಲೆಯಿಂದ ತಪ್ಪಿಸಿಕೊಂಡ ಹೋದ ಭಗತ್ ಸಿಂಗ್ ದುರಂತ ನಡೆದ ಸ್ಥಳಕ್ಕೆ ಹೋಗಿ ಖಾಲಿ ಬಾಟಲಿಯಲ್ಲಿ ರಕ್ತಸಿಕ್ತವಾಗಿದ್ದ ಮಣ್ಣನ್ನು ತುಂಬಿಕೊಂಡು ಬಂದಿದ್ದ. ನಂತರ ಅದನ್ನು ಪ್ರತಿದಿನವೂ ಪೂಜಿಸುತ್ತಿದ್ದ. ಆಗ ಅವನಿಗೆ ಕೇವಲ 12 ವಯಸ್ಸು.

3. ಚಿಕ್ಕವನಿದ್ದಾಗ ಭಗತ್ ಸಿಂಗ್ ಬ್ರಿಟಿಷರೊಂದಿಗೆ ಹೋರಾಟ ನಡೆಸಲು ಹೊಲಗದ್ದೆಗಳಲ್ಲಿ ಭತ್ತದ ಬದಲು ಬಂದೂಕುಗಳನ್ನು ಬೆಳೆಯಬೇಕೆಂದು ಎಲ್ಲರೆದಿರು ಹೇಳುತ್ತಿದ್ದ.

4. ಬಾಲ್ಯ ವಿವಾಹವನ್ನು ತಪ್ಪಿಸಿಕೊಳ್ಳಲು ಭಗತ್ ಮನೆಯಿಂದ ಪರಾರಿಯಾಗಿದ್ದ. ಮದುವೆಯಾಗುವುದು ಏನು ದೊಡ್ಡ ಸಾಧನೆಯಾ? ಎಂದು ತನ್ನ ಸಹಪಾಠಿಗಳನ್ನು ಕೇಳುತ್ತಿದ್ದ. ಮದುವೆ ಯಾರಾದರೂ ಆಗಬಹುದು, ಆದರೆ ನನ್ನ ಗುರಿ ಬ್ರಿಟಿಷರನ್ನು ಭಾರತದಿಂದ ಓಡಿಸುವುದು ಎಂದು ಎದೆತಟ್ಟಿ ಹೇಳುತ್ತಿದ್ದ.

5. ಲೆನಿನ್ ಅಕ್ಟೋಬರ್ ಕ್ರಾಂತಿ ಭಗತ್ ನನ್ನು ಬಹುವಾಗಿ ಆಕರ್ಷಿಸಿತು. ಚಿಕ್ಕಪ್ರಾಯದಲ್ಲೇ ಸಾಮಾಜಿಕ ಕ್ರಾಂತಿ ಕುರಿತ ಅನೇಕ ಪುಸ್ತಕಗಳನ್ನು ಓದಲಾರಂಭಿಸಿದ.

6. ಸಿಂಗ್ ಹೇಳಿದ ಈ ಮಾತು ಎಂದಿಗೂ ಅಜರಾಮರ, "ಅವರು ನನ್ನನ್ನು ಕೊಲ್ಲಬಹುದು, ಆದರೆ ನನ್ನ ಚಿಂತನೆಗಳನ್ನು ಕೊಲ್ಲಲಾರರು. ಅವರು ನನ್ನ ದೇಹವನ್ನು ಹೊಸಕಿ ಹಾಕಬಹುದು, ಆದರೆ ನನ್ನ ಸ್ಫೂರ್ತಿಯನ್ನು ಹೊಸಕಿ ಹಾಕಲು ಸಾಧ್ಯವೇ ಇಲ್ಲ."

7. ದೆಹಲಿಯ ಸೆಂಟ್ರಲ್ ಅಸೆಂಬ್ಲಿಯ ಮೇಲೆ ಭಗತ್ ಮತ್ತು ಸಹಚರರು ಎಸೆದ ಬಾಂಬುಗಳು ಕಡಿಮೆ ತಾಕತ್ತಿನ ಸ್ಫೋಟಕಗಳಾಗಿದ್ದವು. ಅಲ್ಲಿ ಕಾರಿಡಾರಿನಲ್ಲಿ ನೆರೆದಿದ್ದ ಜನರನ್ನು ಬೆದರಿಸಿ ಓಡಿಸಲು ಮಾತ್ರ ಅವನ್ನು ಬಳಸಲಾಗಿತ್ತು. ಇದನ್ನು ಬ್ರಿಟಿಷ್ ತನಿಖೆ ಕೂಡ ದೃಢಪಡಿಸಿದೆ.

8. 1930ರಲ್ಲಿ ಜೈಲಿನಲ್ಲಿದ್ದಾಗ 'ರಾಜಕೀಯ ಸೆರೆಯಾಳು' ಎಂಬ ಪದವನ್ನು ಹುಟ್ಟುಹಾಕಿದ್ದೇ ಭಗತ್. ತನಗೆ ಮತ್ತು ತನ್ನ ಸಹಚರರಿಗೆ ಎಲ್ಲ ಸವಲತ್ತುಗಳನ್ನು ಕೊಡಬೇಕೆಂದು ಆಗ್ರಹಿಸಿದ್ದರು. ಅಲ್ಲಿ ಬ್ರಿಟಿಷ್ ಕಳ್ಳರು, ದಂಗೆಕೋರರಿಗೆ ನೀಡುತ್ತಿದ್ದ ಸವಲತ್ತುಗಳನ್ನು ಭಾರತೀಯ ಕೈದಿಗಳಿಗೆ ನೀಡುತ್ತಿರಲಿಲ್ಲ.

9. ಇನ್ ಕ್ವಿಲಾಬ್ ಜಿಂದಾಬಾದ್ ಎಂದು ಘೋಷಣೆ ಮಾಡಿದ್ದು ಭಗತ್ ಸಿಂಗ್. ಮುಂದೆ ಇದೇ ಘೋಷಣೆ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಘೋಷವಾಕ್ಯವೂ ಆಯಿತು.

10. ನಿಗದಿಪಡಿಸಿದ ವೇಳೆಗಿಂತ ಒಂದು ಗಂಟೆ ಮೊದಲೇ ಭಗತ್ ನನ್ನು ಗಲ್ಲಿಗೇರಿಸಲಾಯಿತು ಮತ್ತು ರಹಸ್ಯವಾಗಿ ಆತನ ಸತ್ಲೆಜ್ ನದಿಯ ತಟದ ಮೇಲೆ ಜೈಲು ಅಧಿಕಾರಿಗಳಿಂದ ಅಂತ್ಯಕ್ರಿಯೆ ನಡೆಸಲಾಯಿತು. ಇದು ಜನರ ಕಿವಿಗೆ ಬೀಳುತ್ತಿದ್ದಂತೆ ಪ್ರತಿಭಟನೆ ನಡೆಸಿ ಆತನ ಚಿತಾಭಸ್ಮದೊಡನೆ ಮೆರವಣಿಗೆಯನ್ನೂ ನಡೆಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
It is known fact that Indian freedom fighter Bhagat Singh was hanged on March 23, 1931. So, March 23 is observed as martyrdom day. But, there are many facts which are not so known to the public about Bhagat Singh.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more