ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೈರ್ ಫಾಕ್ಸ್ 4 vs ಕ್ರೋಮ್ 10 vs ಐಇ 9

By Mahesh
|
Google Oneindia Kannada News

IE 9 vs Firefox 4 vs Chrome 10
ವೆಬ್ ಬ್ರೌಸರ್ ಕ್ಷೇತ್ರದಲ್ಲಿ ಅಧಿಪತ್ಯ ಸ್ಥಾಪಿಸಲು ಮೈಕ್ರೋ ಸಾಫ್ಟ್, ಮೋಝಿಲ್ಲಾ ಹಾಗೂ ಗೂಗಲ್ ತೀವ್ರ ಕಾದಾಟ ನಡೆಸುತ್ತಿರುವುದು, ಗ್ರಾಹಕರಿಗೆ ಒಂದು ರೀತಿ ಅನುಕೂಲವಾಗಿದೆ. ಐಇ 9 ಹಾಗೂ ಫೈರ್ ಫಾಕ್ಸ್ 4 ಲೋಕಾರ್ಪಣೆಯಾಗಿದ್ದು, ಗೂಗಲ್ ಸಹ ಕ್ರೋಮ್ ನ ಹೊಸ ಆವೃತ್ತಿಯೊಂದಿಗೆ ಪೈಪೋಟಿಗೆ ಇಳಿಯಲಿದೆ. ವೆಬ್ ಬ್ರೌಸರ್ ನ ಗ್ರಾಹಕ ಸ್ನೇಹಿ ಸೌಲಭ್ಯಗಳು, ಸುರಕ್ಷತೆ, ವೇಗ, ಉನ್ನತ ತಂತ್ರಜ್ಞಾನ ಬೆಂಬಲ, ಸ್ಥಿರತ ಹಾಗೂ ವೆಬ್ ಸ್ಟಾಂಡರ್ಡ್ಸ್ ಮುಂತಾದ ಅಂಶಗಳನ್ನು ಗಮನಿಸಿ ಫೈರ್ ಫಾಕ್ಸ್ 4 ಹಾಗೂ ಇಂಟರ್ ನೆಟ್ ಎಕ್ಸ್ ಪ್ಲೋರರ್ ನ ಹೋಲಿಕೆ ನೀಡಲಾಗಿದೆ.

ವೇಗ: ಸಾಮಾನ್ಯ ವೇಗ ಗಣಕದಲ್ಲಿ ಸನ್ ಸ್ಪೈಡರ್[SunSpider, a JavaScript benchmark] ಬಳಸಿ ವಿವಿಧ ಬ್ರೌಸರ್ ಗಳನ್ನು ಪರೀಕ್ಷಿಸಿದಾಗ ಬಂದ ಫಲಿತಾಂಶ ಅಚ್ಚರಿಯನ್ನು ತರಿಸುತ್ತದೆ. ಕ್ರೋಮ್ 10 ಸರಾಸರಿ 346.0ms, ಫೈರ್ ಫಾಕ್ಸ್ 4 308.5ms ಸರಾಸರಿ ತೆಗೆದುಕೊಂಡರೆ, ಐಇ9 288.8ms ಮಾತ್ರ ತೆಗೆದುಕೊಂಡಿದೆ. ಆದರೆ, ಸಾಮಾನ್ಯ ಬಳಕೆದಾರರ ಪರೀಕ್ಷೆಯಂತೆ ಟೆಕ್ ವೆಬ್ ಪುಟ ತೆರೆಯಲು ಫೈರ್ ಫಾಕ್ಸ್ ಗೆ 5 ಸೆಕೆಂಡ್ ಸಾಕು. ಕ್ರೋಮ್ ಗೆ 4 ಸೆಕೆಂಡ್ ಹಾಗೂ ಐಇ 9ಗೆ 8ರಿಂದ 9 ಸೆಕೆಂಡ್ ಬೇಕಾಗುತ್ತದೆ. ಯೂಟ್ಯೂನ್ ಮುಂತಾದ ವಿಡಿಯೋ ಆಧಾರಿತ ಪುಟ ಓಪನ್ ಆಗಲು ಫೈರ್ ಫಾಕ್ಸ್, ಐಇಗೆ 3ರಿಂದ 4 ಸೆಕೆಂಡ್ ಬೇಕಾದರೆ, ಕ್ರೋಮ್ ಕೊಂಚ ಹಿಂದಿದ್ದು 4 ರಿಂದ 5 ಸೆಕೆಂಡು ತೆಗೆದುಕೊಳ್ಳುತ್ತದೆ.

ಸ್ಥಿರತೆ, ವೆಬ್ ಸ್ಟಾಂಡರ್ಸ್ : ಮೂರು ಬ್ರೌಸರ್ ಗಳು HTML 5 ಸ್ಟಾಂಡರ್ಸ್ ಬೆಂಬಲಿಸುತ್ತದೆ. ಆದರೆ, ಬೇರೆ ಬೇರೆ ವಿಡಿಯೋ ಫಾರ್ಮಟ್ ಗೆ ಬೆಂಬಲಿಸುತ್ತದೆ. ಐಇ 9 ಪ್ರತಿ ಟ್ಯಾಬ್ ಅನ್ನು ಬೇರೆ ಕಾರ್ಯವಾಗಿ ಪರಿಗಣಿಸುವುದರಿಂದ ವಿಡಿಯೋ ನೋಡುವಾಗ ಕಿರಿಕಿರಿ, ಬ್ರೌಸರ್ ಕ್ರಾಶ್ ತಪ್ಪುತ್ತದೆ. ಪ್ಲಗ್ ಇನ್ ನಿಂದ ಉಂಟಾಗುವ ತೊಂದರೆಗೆ ಫೈರ್ ಫಾಕ್ಸ್ ನಲ್ಲಿ ಕ್ರಾಶ್ ಪ್ರೊಟೆಕ್ಷನ್ ಇದ್ದರೂ ಒಮ್ಮೆಗೆ ಒಂದು ಕ್ರಿಯೆಯನ್ನು ಮಾತ್ರ ಕೈ ಗೆತ್ತಿಕೊಳ್ಳುವುದರಿಂದ ಟ್ಯಾಬ್ ಮ್ಯಾನೇಜ್ ಮೆಂಟ್ ನಲ್ಲಿ ಇಇ 9 ಹಾಗೂ ಕ್ರೋಮ್ ಉತ್ತಮ.

ಬ್ರೌಸರ್ ವಿಶೇಷತೆಗಳು: ಟ್ಯಾಬ್ ಗ್ರೂಪಿಂಗ್ ಮೂಲಕ ಈಗಾಗಲೇ ತೆರೆಯಲ್ಪಟ್ಟ ವೆಬ್ ಪುಟಗಳನ್ನು ಸಂಗ್ರಹಿಸಲು ಫೈರ್ ಫಾಕ್ಸ್ ಸೌಲಭ್ಯ ಒದಗಿಸಿದೆ. ಇಮೇಲ್ ಹಾಗೂ ವೆಬ್ ಆಪ್ಸ್ ಉತ್ತಮ ಸೌಲಭ್ಯ ಎನ್ನಬಹುದು. ಹಲವು ಸಾಧಕಗಳಿಂದ ನಿಮ್ಮ ಬ್ರೌಸರ್ ಗೆ ಮಾಹಿತಿ ರವಾನಿಸಲು ಸುಲಭವಾಗಿ synchronisation ಸೌಲಭ್ಯ ಒದಗಿಸಲಾಗಿದೆ. ಓಪನ್ ಟ್ಯಾಬ್ ನಲ್ಲಿನ ಮಾಹಿತಿ ಸೇರಿದಂತೆ ಬುಕ್ ಮಾರ್ಗ್, ಹಿಸ್ಟರಿ ಇತ್ಯಾದಿಗಳನ್ನು ಸುಲಭವಾಗಿ ಈಗಿನ ಬ್ರೌಸರ್ ಗೆ ಸಿಂಕ್ ಮಾಡಬಹುದು. ಕ್ರೋಮ್ ನಲ್ಲಿ ಈ ಸೌಲಭ್ಯವಿದ್ದರು ಅಷ್ಟಾಗಿ ಸುಧಾರಣೆ ಗೊಂಡಿಲ್ಲ. ಇಇ9 ನಲ್ಲಿ ಈ ಬಗ್ಗೆ sync ಅನ್ನೋ ಮಾತಿಲ್ಲ. ಬುಕ್ ಮಾರ್ಕ್ ಸೌಲಭ್ಯ ನೀಡುವಲ್ಲಿ ಎಲ್ಲಾ ಬ್ರೌಸರ್ ಗಳು ಸ್ಕೋರ್ ಮಾಡುತ್ತವೆ.

ಕ್ರೋಮ್ ರೀತಿ ವಿನ್ಯಾಸ ಉಳ್ಳ ಐಇ9 ನಲ್ಲಿ ಫೈರ್ ಫಾಕ್ಸ್ ಗಿಂತ ನೋಡಲು ಚೆಂದವಾಗಿ ಕಾಣಿಸುತ್ತದೆ. ಆದರೆ, ಫೈರ್ ಫಾಕ್ಸ್ ನಲ್ಲಿ ಪರ್ಸೋನಾಗಳು, ವೆಬ್ ಆಡ್ ಆನ್ ಮೂಲಕ ಬ್ರೌಸರ್ ಚೆಂದಗಾಣಿಸಬಹುದು. ಫೈರ್ ಫಾಕ್ಸ್ ನಲ್ಲಿ ಸಿಗುವ ಆಡ್ ಆನ್ ಗಳು, ಅಪ್ಲಿಕೇಷನ್ ಗಳು ಇನ್ನೂ ಐಇ ಕಡೆ ತಲುಪಿಲ್ಲ. ಬಹುಶಃ ತಲುಪುವುದು ಕಷ್ಟ. ಆದರೆ, ಗೂಗಲ್ ಅಪ್ಲಿಕೇಷನ್ ಗಳ ಅಪಾರ ಸಂಗ್ರಹವನ್ನು ತುಂಬಿಕೊಳ್ಳಲು ಕ್ರೋಮ್ ಆರಂಭಿಸಿದೆ.

ಕೊನೆ ಮಾತು: ಐಇ 9 ಬೆಂಚ ಮಾರ್ಕ್ ಟೆಸ್ಟ್ ನಲ್ಲಿ ವೇಗವಾಗಿ ಓಪನ್ ಆದರೂ, ಬಳಕೆದಾರರ ಪರೀಕ್ಷೆಯಲ್ಲಿ ಸೋತಿದೆ. ಸಾಮಾನ್ಯ ಬಳಕೆದಾರರಿಗೆ ಹೇಳಿಮಾಡಿಸಿದ ಹಾಗೆ ಇದೆ. ವಿಂಡೋಸ್ ವಿಸ್ತಾ ಹಾಗೂ ವಿಂಡೋಸ್ 7 ರಲ್ಲಿ ಮಾತ್ರ ಐಇ9 ಕಾರ್ಯ ನಿರ್ವಹಿಸುವುದು ಅತಿ ದೊಡ್ಡ ಹೊಡೆತ ಎನ್ನಬಹುದು. ಫೈರ್ ಫಾಕ್ಸ್ ವಿಂಡೋಸ್ ಎಕ್ಸ್ಪಿ, ಲೈನಕ್ಸ್, ಮ್ಯಾಕ್, ಆಂಡ್ರ್ಯಾಡ್ ಅಪರೇಟಿಂಗ್ ಸಿಸ್ಟಮ್ ನಲ್ಲೂ ಕಾರ್ಯನಿರ್ವಹಿಸುತ್ತದೆ. HTML 5, CSS 3, JS API, File API, HIstory API ಎಲ್ಲದರಲ್ಲೂ ಫೈರ್ ಫಾಕ್ಸ್ ಉತ್ತಮ ಎಂದು ಸಾಬೀತಾಗಿದೆ.

ಫ್ಲಾಶ್ ತಾಣಗಳು ಗೂಗಲ್ ಕ್ರೋಮ್ ನಲ್ಲಿ ಇನ್ನೂ ವೀಕ್ಷಣೆ ಕಷ್ಟ. ಒಟ್ಟಾರೆ, ಸಾಮಾನ್ಯರಿಗೆ ಐಇ9, ಎಲ್ಲರಿಗೂ ಫೈರ್ ಫಾಕ್ಸ್ ಎನ್ನಬಹುದು. ಮೊದಲ ದಿನ ಐಇ9 2.3 ಮಿಲಿಯನ್ ನಷ್ಟು ಡೌನ್ ಲೋಡ್ ಆಗಿದೆ. ಫೈರ್ ಫಾಕ್ಸ್ 4 ಈ ಸಮಯಕ್ಕೆ ಸರಿಯಾಗಿ 5.8 ಮಿಲಿಯನ್ ಡೌನ್ ಲೋಡ್ ಅಗಿದೆ ಎಂದರೆ, ಜನಪ್ರಿಯತೆಯನ್ನು ಲೆಕ್ಕಾಚಾರ ತಿಳಿಯುತ್ತದೆ.

English summary
Here is comparison of popular web browsers Mozilla Firefox 4 and Internet Explorer 9 with Google Chrome 10. IE 9 and Firefox 4 browsers are officially released and are available for downloading. Improved user interfaces, support for web standards and security issues are the key features compared.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X