ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನ್ ಕುಮಾರಣ್ಣ ಯಾಕ್ ಹಿಂಗ್ ಮಾಡ್ಬಿಟ್ರಿ?

By Mahesh
|
Google Oneindia Kannada News

HD Kumaraswamy at Channapatna
ಬೆಂಗಳೂರು, ಮಾ.23: ಚನ್ನಪಟ್ಟಣ ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಮೂಡಿದ್ದ ತೀವ್ರ ಕುತೂಹಲಕ್ಕೆ ತೆರೆ ಬಿದ್ದಿದೆ. ಮಾಜಿ ಮುಖ್ಯಮಂತ್ರಿ ಹಾಲಿ ಸಂಸದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ನಾನೇ ನಿಲ್ಲುತ್ತೇನೆ ಎಂದವರು, ಕೊನೆ ಗಳಿಗೆಯಲ್ಲಿ ಹಿರಿಯರನ್ನು ಒಪ್ಪಿಸೋದು ತುಂಬಾ ಕಷ್ಟ ಕಣಪ್ಪ ಎಂದು ಸದಾಶಿವನಗರದ ಮನೆಯಲ್ಲಿ ಕೂತು ಗೋಳು ತೋಡಿಕೊಂಡಿದ್ದಾರೆ. ಜೆಡಿಎಸ್ ತೊರೆದು ಅಶ್ವಥ್ ಬಿಜೆಪಿ ಸೇರಿದ ಪರಿಣಾಮ ತೆರವಾಗಿದ್ದ ಸ್ಥಾನಕ್ಕೆ ಜೆಡಿಎಸ್ ನ ಸಾಮಾನ್ಯ ಕಾರ್ಯಕರ್ತ ಸಿಂಗಾಪುರ ಲಿಂಗೇಗೌಡ ನಾಗರಾಜ ಅವರು ಸ್ಪರ್ಧಿಸಲಿದ್ದಾರೆ.

ಕುಮಾರಸ್ವಾಮಿ ಒಮ್ಮೆ ಹಾಗೆ ಇನ್ನೊಮ್ಮೆ ಹೀಗೆ ಹೇಳಿದರೂ, ಚುನಾವಣೆ ದಿನ ಘೋಷಣೆಯಾದ ದಿನದಂದೇ ಸಾಮಾನ್ಯ ಅಭ್ಯರ್ಥಿಯನ್ನು ನಿಲ್ಲಿಸಲು ಎಚ್ ಡಿ ದೇವೇಗೌಡರು ನಿರ್ಧರಿಸಿಯಾಗಿತ್ತು. ಮೊದಲಿಗೆ ಮುಸ್ಲಿಂ ಸಮುದಾಯದ ಅಭ್ಯರ್ಥಿಯನ್ನು ನಿಲ್ಲಿಸಲು ಮನಸ್ಸು ಮಾಡಲಾಗಿತ್ತಾದರೂ ನಂತರ ಪಕ್ಷದ ಹಿರಿಯ ಕಾರ್ಯಕರ್ತ ಸಿಂಲಿಂ ನಾಗರಾಜ ಅವರಿಗೆ ಆ ಭಾಗ್ಯ ದೊರಕಿದೆ. ಈ ವಿಷಯ ಎಲ್ಲಾ ಕುಮಾರಸ್ವಾಮಿಗೆ ಗೊತ್ತಿದ್ದರೂ, ಅಭಿಮಾನಗಳ ಒತ್ತಡಕ್ಕೆ ಮಣಿದು, ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದರು. ಇದೇ ರೀತಿ ಜಗಳೂರಿನಲ್ಲಿ ಹುಚ್ಚವನಹಳ್ಳಿ ಮಂಜುನಾಥ ಹಾಗೂ ಬಂಗಾರಪೇಟೆಯಲ್ಲಿ ವೆಂಕಟೇಶಪ್ಪ ಸ್ಪರ್ಧಿಸುವುದು ಖಚಿತವಾಗಿದೆ.

ಹಿಂದೊಮ್ಮೆ ಚನ್ನಪಟ್ಟಣದ ಕಾರ್ಯಕರ್ತರ ಸಭೆಯಲ್ಲಿ ಗೊಳೋ ಎಂದು ಕಣ್ಣೀರು ಸುರಿಸಿದ್ದ, ಕುಮಾರಣ್ಣಗೆ ಪಕ್ಷದ ಕಾರ್ಯಕರ್ತರಲ್ಲಿ ಮೂಡಿದ್ದ ಒಡಕು ಸರಿ ಪಡಿಸಲು ಉಪ ಚುನಾವಣೆ ಸೂಕ್ತ ವೇದಿಕೆಯಾಗಿ ಪರಿಣಮಿಸಿತು. ಮೊದಲೇ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸುವುದಾಗಿ ಘೋಷಿಸಿದ್ದರೆ, ಈ ಪಾಟಿ ಜೋಶ್ ಉಂಟಾಗಲು ಸಾಧ್ಯವಿರಲಿಲ್ಲ. ಅಪ್ಪನ ಮಾತು ಮೀರಲು ಸಾಧ್ಯವಿಲ್ಲ ಎನ್ನುವ ಕುಮಾರಸ್ವಾಮಿಗೆ ಅಸಲಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಮನಸ್ಸೇ ಇಲ್ಲ. ಹಳ್ಳಿಗಿಂತ ದಿಲ್ಲಿಯೇ ವಾಸಿ ಎನ್ನುವ ಮನಸ್ಥಿತಿಯಲ್ಲಿದ್ದಾರೆ.

ಕುಟುಂಬ ಕಲಹ ತಪ್ಪಿಸಲು ಈ ಕ್ರಮ? : ಚನ್ನಪಟ್ಟಣದಿಂದ ಕುಮಾರಸ್ವಾಮಿ ಸ್ಪರ್ಧಿಸಿ, ವಿಧಾನಸಭೆಗೆ ಆಯ್ಕೆಯಾದರೆ ಗೊಂದಲ ಉಂಟಾಗುವ ಸಾಧ್ಯತೆಯಿತ್ತು. ಜೆಡಿಎಸ್ ಕಾರ್ಯಕರ್ತರು ಎಚ್ ಡಿ ರೇವಣ್ಣ, ಕುಮಾರಸ್ವಾಮಿ ಇಬ್ಬರಲ್ಲಿ ಯಾರನ್ನು ಬೆಂಬಲಿಸಬೇಕು ಎಂದು ತಿಳಿಯದೇ ಗೊಂದಲವಾಗುತ್ತಿತ್ತು. ಮಧುಗಿರಿ ಶಾಸಕ ಅನಿತಾ ಕುಮಾರಸ್ವಾಮಿ, ರೇವಣ್ಣ ಅವರ ಧರ್ಮಪತ್ನಿ ಭವಾನಿ ಅವರ ಹೆಸರು ಕೇಳಿ ಬಂದಿತ್ತು. ಅನಿತಾ ಮೇಡಂ ಕಸ್ತೂರಿ ಚಾನೆಲ್ ರಿಪೇರಿ ಕೆಲ್ಸದಲ್ಲಿ ನಿರತರಾಗಿದ್ದಾರೆ. ಭವಾನಿ ಅವರು ಇನ್ನೆರಡು ವರ್ಷ ರಾಜಕೀಯಕ್ಕೆ ಇಳಿಯಲಾರೆ ಎಂದಿದ್ದಾರೆ. ಕೊನೆಗೆ ದೇವೇಗೌಡರ ಮಾತಿನ ಪ್ರಕಾರವೇ ಎಲ್ಲಾ ನಡೆದಿದೆ.

English summary
Karnataka By Election 2011 : JDS state president, Bangalore Rural constituency MP HD Kumaraswamy has decided not to contest Karnataka By Election 2011 from Channapatna constituency. Party worker SL Nagaraj is contesting in Channapatna. Venkateshappa from Bangarpet and Hucchuvanalli Manjunath from Jagalur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X