ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ ಜೀಮೇಲ್ ಬ್ಲಾಕ್; ಗೂಗಲ್ ಸಿಟ್ಟು

By Mahesh
|
Google Oneindia Kannada News

China vs Google
ಬೀಜಿಂಗ್, ಮಾ.22: ಚೀನಾದ ಕಮ್ಯೂನಿಸ್ಟ್ ಸರ್ಕಾರದ ವಿರುದ್ಧ ಸರ್ಚ್ ಇಂಜಿನ್ ದಿಗ್ಗಜ ಗೂಗಲ್ ಸಮರ ತಾರಕಕ್ಕೇರಿದೆ. ಚೀನಾದ ಎಡಪಂಥೀಯ ಸರ್ಕಾರ ಜನಪ್ರಿಯ ಇಮೇಲ್ ಸೇವೆ ಜೀಮೇಲ್ ಅನ್ನು ತಡೆ ಹಿಡಿದಿರುವುದಕ್ಕೆ ಗೂಗಲ್ ಆಕ್ರೋಶ ವ್ಯಕ್ತಪಡಿಸಿದೆ. ಆದರೆ, ವೆಬ್ ಸೆನ್ಸಾರ್ ಶಿಪ್ ಅಳವಡಿಸಿಕೊಂಡಿರುವ ಚೀನಾ ಎಲ್ಲಾ ವೆಬ್ ತಾಣಗಳಿಗೂ ಇದೇ ಕಟ್ಟುನಿಟ್ಟಿನ ಅನುಸರಿಸುತ್ತಿದ್ದು, ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.

ಚೀನಾ ಸರ್ಕಾರ ಜೀಮೇಲ್ ನಲ್ಲಿ ಇಣುಕುತ್ತಿರುವುದರಿಂದ ಚೀನಾದಲ್ಲಿರುವ ಗ್ರಾಹಕರಿಗೆ ಸರಿಯಾಗಿ ಜೀಮೇಲ್ ಸಂಪರ್ಕ ಸಾಧಿಸಲು ಆಗುತ್ತಿಲ್ಲ. ಗೂಗಲ್ ನ ಇಂಜಿನಿಯರ್ ಗಳಿಗೆ ತಾಂತ್ರಿಕವಾಗಿ ಯಾವುದೇ ಸಮಸ್ಯೆ ತಲೆ ದೋರದಿದ್ದಾಗ, ಚೀನಾ ಅನಗತ್ಯವಾಗಿ ಜೀಮೇಲ್ ಸೇವೆಗೆ ತಡೆ ಒಡ್ಡಿರುವ ವಿಷಯ ಬೆಳಕಿಗೆ ಬಂದಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಗೂಗಲ್ ಸಂಸ್ಥೆ ವಕ್ತಾರರು ಹೇಳಿದ್ದಾರೆ.

ಚೀನಾ ಸರ್ಕಾರ ಅತ್ಯಂತ ಜಾಗರೂಕತೆಯಿಂದ ಈ ಕೆಲಸ ನಿರ್ವಹಿಸಿದೆ.ಜೀಮೇಲ್ ನಲ್ಲೇ ಏನೋ ತಾಂತ್ರಿಕ ಸಮಸ್ಯೆಯಿದೆ ಎಂಬಂತೆ ಬಿಂಬಿಸಲಾಗಿದೆ. ಆದರೆ, ಜೀಮೇಲ್ ಸೇವೆಯಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಕಂಡುಬಂದಿಲ್ಲ. ಚೀನಾ ಸರ್ಕಾರ ಜೀಮೇಲ್ ಬ್ಲಾಕ್ ಮಾಡಿರುವ ವಿಷಯ ತಿಳಿಯದ ಬಳಕೆದಾರರು ಗೂಗಲ್ ಅನ್ನು ದೂರುತ್ತಿದ್ದಾರೆ.

ಇದು ನೆನ್ನೆ ಮೊನ್ನೆಯ ಸಂಗತಿಯಲ್ಲ. ಕಳೆದ ಜನವರಿಯಿಂದ ಈ ರೀತಿ ಸಮಸ್ಯೆ ಎದುರಾಗಿತ್ತು. ಚೀನಾದ ಬಳಕೆದಾರರಿಂದ ಪದೇ ಪದೇ ದೂರುಗಳು ಬರಲಾರಂಭಿಸಿತ್ತು. ಮೇಲ್ ಓಪನ್ ಆಗುತ್ತಿಲ್ಲ. ಕಳಿಸಿದ ಮೇಲ್ ಸರಿಯಾಗಿ ತಲುಪುತ್ತಿಲ್ಲ ಮುಂತಾದ ಸಮಸ್ಯೆಗಳು ಎದುರಾಗಿತ್ತು. ಆದರೆ, ಅದರ ಮೂಲ ಚೀನಾ ಸರ್ಕಾರದ ತಡೆಯೊಡ್ದುವ ತಂತ್ರ ಎಂಬುದು ಈಗ ಸ್ಪಷ್ಟವಾಗಿದೆ ಎಂದು ಗೂಗಲ್ ಹೇಳಿದೆ.

ಸುರಕ್ಷತಾ ವಿಧಾನಗಳನ್ನು ಅಳವಡಿಸಲು ಮುಂತಾದ ಚೀನಾ ಸರ್ಕಾರ, ಮೊದಲಿಗೆ ಎಲ್ಲಾ ಪ್ರೋನ್ ಸೈಟ್ ಗಳನ್ನು ಬಂದ್ ಮಾಡಿತ್ತು. ನಂತರ ಗೂಗಲ್ ಸರ್ಚ್ ಇಂಜಿನ್, ಯೂಟ್ಯೂಬ್, ಫೇಸ್ ಬುಕ್ ಹಾಗೂ ಟ್ವಿಟ್ಟರ್ ಮೇಲೆ ನಿರ್ಬಂಧ ಹೇರಿತ್ತು. ವೆಬ್ ಸೆನ್ಸಾರ್ ನೀತಿ ರೂಪಿಸಿ, ಸೈಬರ್ ಪೊಲೀಸ್ ಪಡೆಯನ್ನು ಬಳಸಿಕೊಂಡು ಅತ್ಯಂತ ಜಾಗರೂಕತೆಯಿಂದ ಸುರಕ್ಷಿತ ವೆಬ್ ಬ್ರೌಸಿಂಗ್ ವ್ಯವಸ್ಥೆ ಕಲ್ಪಿಸುವ ಅಭಿಯಾನಕ್ಕೆ ಚೀನಾ ಮುಂದಾಗಿತ್ತು. ಈ ಎಲ್ಲಾ ಬೆಳವಣಿಗೆ ಅನೇಕ ಜನಪ್ರಿಯ ವೆಬ್ ತಾಣಗಳಿಗೆ ಮುಳುವಾಗಿದೆ.

English summary
Web censorship in China : The rivalry between the Chinese Communist government and the search engine giant Google went up to new stage after Google accusing China's Left government of blocking its popular email service, Gmail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X