ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳಪೆ ಫಲಿತಾಂಶ ಭೀತಿ: ಎಸ್ಸೆಸೆಲ್ಸಿಗೆ ಸ್ಪೆಷಲ್ ಕೋಚಿಂಗ್

By Srinath
|
Google Oneindia Kannada News

Karnataka SSLC Exams
ಮೈಸೂರು, ಮಾ. 21: ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಇನ್ನು ಎರಡೇ ವಾರ ಬಾಕಿ. ಎಲ್ಲೆಡೆ ಪರೀಕ್ಷಾ ಆತಂಕ ನಿರ್ಮಾಣವಾಗುತ್ತಿದೆ. ಆದರೆ ನಮ್ಮ ಜಿಲ್ಲಾ ಉಸ್ತುವಾರಿ ಸಚಿವ ಎ. ರಾಮದಾಸ್ ಅವರಿಗೆ ಆಗಲೇ ಫಲಿತಾಂಶ ಭಯ ಕಾಡತೊಡಗಿದೆ. ಇದು ಒಳ್ಳೆಯದಕ್ಕೇ. ವಿಷಯ ಏನೆಂದರೆ ಜ್ಞಾನಗಂಗೋತ್ರಿ ಮೈಸೂರು ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಕಳಪೆ ಫಲಿತಾಂಶ ಕಾಣುತ್ತಿದ್ದು, 26ನೇ ಸ್ಥಾನದಲ್ಲಿದೆ. ಇದು ರಾಮದಾಸ್ ಅವರನ್ನು ಚಿಂತೆಗೀಡುಮಾಡಿದೆ. ಅದಕ್ಕೆಂದೇ ಅವರು 'ಯುದ್ಧ ಕಾಲೇ ಶಸ್ತ್ರಾಭ್ಯಾಸ' ಎನ್ನುವಂತೆ ಮೂಸೂರು ಜಿಲ್ಲೆ ಈ ಬಾರಿ ಎಸ್ಸೆಸೆಲ್ಸಿ ಫಲಿತಾಂಶದಲ್ಲಿ 'ಟಾಪ್ ಟೆನ್' ಸ್ಥಾನದಲ್ಲಿ ಕಂಗೊಳಿಸಬೇಕು ಎಂದು ಜಿಲ್ಲೆಯ ಎಲ್ಲ ಸರಕಾರಿ ಶಾಲೆಗಳ ಮುಖ್ಯಸ್ಥರಿಗೆ ಫರ್ಮಾನು ಹೊರಡಿಸಿದ್ದಾರೆ.

ತಡವಾಗಿಯಾದರೂ ನಿದ್ದೆಯಿಂದ ಎಚ್ಚೆತ್ತಿರುವ ನಮ್ಮ ಸಚಿವರು, ಖಾಸಗಿ ಶಾಲೆಗಳ ಮಕ್ಕಳು ಅತ್ಯುತ್ತಮ ಅಂಕಗಳನ್ನು ಗಳಿಸುತ್ತಿದ್ದರೆ ನಿಮಗೇನಾಗಿದೆ (ಸರಕಾರಿ ಶಾಲೆಗಳ ಸಿಬ್ಬಂದಿ) ದಾಡಿ ಎಂದು ಗುಡುಗಿದ್ದು, ಮಕ್ಕಳು ಕಳಪೆ ಪ್ರದರ್ಶನ ನೀಡಿದರೆ ಶಿಕ್ಷಕರಿಗೆ ಶಿಕ್ಷೆ ಕಾದಿದೆ ಎಂದು ಎಚ್ಚರಿಸಿದ್ದಾರೆ. ನಿರ್ದಿಷ್ಟವಾಗಿ 7ನೇ ಸ್ಥಾನವನ್ನೇ ಗಳಿಸಸಬೇಕು ಎಂದು ಆಶಿಸಿರುವ ಸಚಿವರು ಕಳಪೆ ಪ್ರದರ್ಶನ ನೀಡುವ ಶಾಲೆಗಳ ಶಿಕ್ಷಕರನ್ನು ಮುಲಾಜಿಲ್ಲದೆ ವರ್ಗಾಯಿಸುವೆ. ಈ ವಿಷಯದಲ್ಲಿ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಗಮನಾರ್ಹವೆಂದರೆ ಸಮಯಾವಕಾಶ ಹೆಚ್ಚಾಗಿಲ್ಲದಿರುವುದು ಮತ್ತು ಹಲವು ನ್ಯೂನತೆಗಳು ಸರಕಾರಿ ಶಾಲೆಗಳನ್ನು ಕಾಡುತ್ತಿರುವುದು ಸ್ವತಃ ಅವರಿಗೇ ಮನವರಿಕೆಯಾಗಿದ್ದು, ರಾಜಿ ಧಾಟಿಯಲ್ಲಿ 'ಆಯ್ತು, ಇನ್ನಾದರೂ ಹೆಚ್ಚು ಶ್ರಮ ಹಾಕಿ. ಮಕ್ಕಳನ್ನು ಪರೀಕ್ಷೆಗೆ ಸಜ್ಜುಗೊಳಿಸಿ. ಸ್ಪೆಷಲ್ ಕ್ಲಾಸ್ ಇಟ್ಟುಕೊಳ್ಳಿ' ಎಂದು ಶಿಕ್ಷಕರನ್ನು ತರಾಟೆಗೆ ತೆಗೆದುಕೊಡಿದ್ದಾರೆ. ಇನ್ನು, ಮುಂದಿನ ವರ್ಷದ ಬಗ್ಗೆ ಈಗಲೇ ಆಲೋಚನೆ ನಡೆಸಿರುವ ಸಚಿವರು ಹೆಚ್ಚು ಬುದ್ಧಿವಂತರಲ್ಲದ ಮಕ್ಕಳಿಗಾಗಿ ವಾರಾಂತ್ಯಗಳಲ್ಲಿ ಸ್ಪೆಷಲ್ ಕ್ಲಾಸ್ ನಡೆಸಿ, ಆರಂಭದಿಂದಲೇ ಪರೀಕ್ಷೆಗೆ ಸಿದ್ಧಗೊಳಿಸಿ ಎಂದು ಅಧಿಕಾರಿಗಳಿಗೆ ಹೇಳುವುದನ್ನು ಮರೆಯಲಿಲ್ಲ.

ಗಣಿತ, ವಿಜ್ಞಾನ ಮತ್ತು ಆಂಗ್ಲ ಭಾಷೆ ವಿಷಯಗಳತ್ತ ಗಮನಹರಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಜಿಲ್ಲಾಯದ್ಯಂತ 60 ಕಡೆ ಸ್ಪೆಷಲ್ ಕೋಚಿಂಗ್ ಕ್ಲಾಸ್ ಕೇಂದ್ರಗಳನ್ನು ನಡೆಸಲಾರಂಭಿಸಿದೆ. ಈ ವಿಶೇಷ ತರಗತಿಗಳು ಬೆಳಗ್ಗೆ 8ರಿಂದ ಆರಂಭವಾಗಿ ಸಂಜೆ 6 ರವರೆಗೆ ನಡೆಯಲಿದೆ. ಇದು ಮಾರ್ಚ್ 27ರವರೆಗೂ ಜಾರಿಯಲ್ಲಿರುತ್ತದೆ. ಪರೀಕ್ಷಾರ್ಥಿಗಳು ಯಾವುದೇ ಸಬೂಬು ಹೇಳದೆ, ಶ್ರದ್ಧೆಯಿಂದ ತರಗತಿಗಳಿಗೆ ಹಾಜರಾಗಿ ಉತ್ತಮ ಅಂಕ ಗಳಿಸುವತ್ತ ಮುಂದಾಗಬೇಕು.

English summary
Facing a threat of poor performance among SSLC students in Government Schools in Mysore District, the District in-Charge Minister A. Ramdas has ordered the teaching staff to make special efforts to improve the results. The Department of Public Instruction has established special coaching centres for students who have scored poorly in the exams.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X