ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂತ್ರಾಲಯದಲ್ಲಿ ಆಚಾರ್ಯರ ಭರ್ಜರಿ ಡೀಲ್

By Mahesh
|
Google Oneindia Kannada News

Muzrai Minister VS Acharya
ಬೆಂಗಳೂರು, ಮಾ.21: ಕರ್ನಾಟಕ ಹಿಂದೂ ಧಾರ್ಮಿಕ ಕೇಂದ್ರಗಳು ಹಾಗೂ ದತ್ತಿ ಸಂಘಗಳ ಕಾಯಿದೆ 2011 ಜಾರಿಗೆ ತರಲು ಚಿಂತನೆ ನಡೆಸಿರುವ ಸಚಿವ ಆಚಾರ್ಯ ಅವರು ಸುಮಾರು 35,000 ದೇಗುಲಗಳು ಈ ಕಾಯಿದೆ ಅಡಿಗೆ ಒಳಪಡಲಿದೆ ಎಂದಿದ್ದಾರೆ. ಆದರೆ, ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಮುಜರಾಯಿ ಸಚಿವ ವಿ ಎಸ್ ಆಚಾರ್ಯ, ಬಿಜೆಪಿ ನಾಯಕರೊಬ್ಬರ ಮಗನಿಗೆ ರಾಜ್ಯ ಸರ್ಕಾರದ ಅಧಿ ನದಲ್ಲಿ ಮಂತ್ರಾಲಯದಲ್ಲಿರುವ ಅತಿಥಿ ಗೃಹವನ್ನು ಕಡಿಮೆ ಮೊತ್ತಕ್ಕೆ ಭೋಗ್ಯಕ್ಕೆ ಕೊಟ್ಟಿರುವ ಆರೋಪಗಳು ಕೇಳಿಬಂದಿವೆ.

ರಾಜ್ಯ ಸರ್ಕಾರಕ್ಕೆ ಲಾಭ ತರುತ್ತಿದ್ದ ಸುಧೀಂದ್ರ ರಾವ್ ಕಸ್ಬೆ ಅವರ ಮಗ ಗಿರಿಧರ ರಾವ್ ಕಸ್ಬೆಗೆ ಭೋಗ್ಯಕ್ಕೆ ಕೊಡಲಾಗಿದೆ. 1984ರಿಂದ ಕಾರ್ಯಾರಂಭಗೊಂಡ ಈ ಅತಿಥಿ ಗೃಹವು 33 ಕೊಠಡಿಗಳ ಸಹಿತ ಒಂದು ಕಲ್ಯಾಣ ಮಂಟಪವನ್ನು ಹೊಂದಿದೆ. ಇದುವರೆಗೆ ರಾಜ್ಯಕ್ಕೆ ಈ ಅತಿಥಿಗೃಹದ ಸಂಪೂರ್ಣ ಒಡೆತನ ಸಿಕ್ಕಿಲ್ಲ. ಅತಿಥಿಗೃಹದ ಭೂಮಿಯ ಸ್ಯಾಮ್ಯವನ್ನು ಆಂಧಪ್ರದೇಶ ಸರ್ಕಾರ ಇದುವರೆಗೆ ನೀಡಿಲ್ಲ.

ಆದರೆ, ಮುಜರಾಯಿ ಸಚಿವ ಆಚಾರ್ಯ ತಮ್ಮ ಕಮವನ್ನು ಸಮರ್ಥಿಸಿಕೊಂಡಿದ್ದಾರೆ. ಗಿರಿಧರ್ ಕಸ್ಬೆ ಎಂಬಿಎ ಪದವೀಧರ. ಸ್ವಉದ್ಯೋಗ ಮತ್ತು ಭಕ್ತರ ಆಸಕಿಯ ದೃಷ್ಟಿಯಿಂದ ಇದು ಮಹತ್ವದ್ದಾಗಿತ್ತು ಎಂಬ ಹೇಳಿಕೆ ನೀಡಿದ್ದಾರೆ. ಪ್ರತಿ ತಿಂಗಳು ಲಕ್ಷಾಂತರ ರೂಗಳ ಆದಾಯ ತಂದು ಕೊಡುವ ಅತಿಥಿಗೃಹವನ್ನು ಐದು ವರ್ಷಗಳ ಕಾಲ ಪ್ರತಿ ತಿಂಗಳಿಗೆ 50,000 ರೂಪಾಯಿಯಂತೆ ಭೋಗ್ಯಕ್ಕೆ ಒಪ್ಪಂದ ಮಾಡಿಕೊಡಲಾಗಿದೆ.

ಅಲ್ಲದೆ ರಾಜ್ಯದಿಂದ ಮಂತ್ರಾಲಯಕ್ಕೆ ತೆರಳಿ ಆಶ್ರಯ ಪಡೆಯುವ, ಕಾರ್ಯಕ್ರಮ ಆಯೋಜಿಸುವ ಭಕ್ತಾದಿಗಳಿಗೆ ಮುಂದಿನ ದಿನಗಳಲ್ಲಿ ತೊಂದರೆಯಾಗಲಿದೆ. ಅತಿಥಿಗೃಹದಲ್ಲಿನ ಕೋಣೆಗಳಿಗೆ ಇಂತಿಷ್ಟೇ ದರ ನಿಗದಿಪಡಿಸಬೇಕು ಎಂದು ಸರ್ಕಾರ ಹೇಳಿಲ್ಲ. ದರ ನಿಗದಿ ಕಂಟ್ರಾಕ್ಟರ್ ಪಡೆದವರ ತೀರ್ಮಾನಕ್ಕೆ ಬಿಡಲಾಗಿದೆ. ಯಾವುದೇ ದೃಷ್ಟಿಯಿಂದ ನೋಡಿದರೂ ಅತಿಥಿಗೃಹವನ್ನು ಭೋಗ್ಯಕ್ಕೆ ಕೊಟ್ಟಿರುವುದು ಸರಿಯಲ್ಲ. ಇದೊಂದು ಸಾರ್ವಜನಿಕ ಆಸ್ತಿಯಾಗಿದೆ ಎಂದು ಮುಜರಾಯಿ ಖಾತೆ, ಕಾನೂನು ಇಲಾಖಾ ಅಧಿಕಾರಿಗಳು, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಮತ್ತು ಅತಿಥಿ ಗೃಹದ 17 ಮಂದಿ ಉದ್ಯೋಗಿಗಳ ಕಟು ವಿರೋಧದ ನಡುವೆಯೂ ಭೋಗ್ಯಕ್ಕೆ ನೀಡಿರುವ ಅವಧಿ ಮುಂದುವರೆದಿದೆ.

English summary
Muzrai Minister VS Acharya is thinking of introducing a new Muzrai bill. But, He is allegedly given Mantralaya Math guest house building lease to BJP leader Sudhindra rao Kasbe and his son to the lesser amount than it is supposed to be. This is objected by guest house workers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X