ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಠಾಣ್ ಬಳಕೆ: ಧೋನಿಗೆ ಒಂದು ಕಿವಿಮಾತು

By Mahesh
|
Google Oneindia Kannada News

ಚೆನ್ನೈ, ಮಾ.20: ಲೀಗ್ ಹಂತ ಮುಗಿದು ಕ್ವಾಟರ್ ಫೈನಲ್ ಆರಂಭವಾಗುವ ಹೊಸ್ತಿಲಲ್ಲಿ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ, ಬ್ಯಾಟಿಂಗ್ ಕ್ರಮಾಂಕ ಕುರಿತು ಒಂದು ಕಿವಿಮಾತು ಹೇಳಬೇಕಿದೆ. ಒತ್ತಡದ ಪರಿಸ್ಥಿತಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆ ಆಗಬಲ್ಲ ಆಲ್‌ರೌಂಡರ್ ಯೂಸುಫ್ ಪಠಾಣ್ ವಿಶ್ವಕಪ್‌ನಲ್ಲಿ ಮಂಕಾಗಿದ್ದಾರೆ. ಕಾರಣ ಅವರನ್ನು ಬ್ಯಾಟಿಂಗ್ ಕ್ರಮಾಂಕದಲ್ಲಿ ಮೇಲೆ ಕೆಳಗೆ ಆಡಿಸುತ್ತಿರುವುದು. ಬ್ಯಾಟಿಂಗ್ ನಲ್ಲಿ ಆರಂಭದ ಹಂತದಲ್ಲಿ ಸೆಹ್ವಾಗ್, ಇನ್ನಿಂಗ್ ಕೊನೆಗೆ ಪಠಾಣ್ ಇಬ್ಬರು ಅದೇ ಸ್ಥಾನದಲ್ಲಿ ಆಡಿದರೆ ಮಾತ್ರ ಒಳ್ಳೆ ಫಲ ಪಡೆಯಲು ಸಾಧ್ಯ.

Yusuf Pathan in WC 2011
ಅನಗತ್ಯವಾಗಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪ್ರಯೋಗದಿಂದಾಗಿ ಅವರು ವಿಫಲವಾಗುತ್ತಿರುವುದು ಮಾತ್ರವಲ್ಲ ಬೃಹತ್ ಮೊತ್ತ ಕಲೆ ಹಾಕುವಲ್ಲಿ ಎಡವುತ್ತಿದ್ದಾರೆ. ಇತ್ತೀಚೆಗೆ ಧೋನಿಗೆ ಯಾಕೋ ರನ್ ಚೇಸ್ ಮಾಡುವ ಹಂಬಲ ಉಂಟಾಗಿದ್ದು, ಈ ಹಂತದಲ್ಲಿ ಪಠಾಣ್ ಕೊಡುಗೆ ಅಮೂಲ್ಯವಾಗಿರುತ್ತದೆ ಎಂಬುದನ್ನು ಮನಗಾಣಬೇಕಿದೆ. ಕ್ವಾಟರ್ ಫೈನಲ್ ನಲ್ಲಿ ಶ್ರೀಲಂಕಾ ಅಥವಾ ಆಸ್ಟ್ರೇಲಿಯಾವನ್ನು ಎದುರಿಸಲಿರುವ ಭಾರತ, ಮುಂದಿನ ಹಂತ ಮುಟ್ಟಬೇಕಾದರೆ ಬೌಲಿಂಗ್ ಹಾಗೂ ಫೀಲ್ಡಿಂಗ್ ಅಲ್ಲದೆ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಕೂಡಾ ಗಮನ ಹರಿಸುವುದು ಒಳಿತು.ವಿಶ್ವಕಪ್ ನಲ್ಲಿ ಪಠಾಣ್ : ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವಕಪ್‌ನ ಕಳೆದ ಪಂದ್ಯದಲ್ಲಿ ಯೂಸುಫ್ ಪಠಾಣ್‌ರಿಗೆ ನಾಲ್ಕನೆ ಕ್ರಮಾಂಕದಲ್ಲಿ ಆಡಲು ನಾಯಕ ಧೋನಿ ಅವಕಾಶ ನೀಡಿದ್ದರು. ಆದರೆ ಅವರು ಶೂನ್ಯಕ್ಕೆ ಔಟಾದರು. ನೆದರ್ಲೆಂಡ್ ವಿರುದ್ಧ ಎರಡನೇ ಕ್ರಮಾಂಕದಲ್ಲಿ ಬಂದು ಗಳಿಸಿದ್ದು 11 ರನ್ ಮಾತ್ರ. ಐರ್ಲೆಂಡ್ ವಿರುದ್ಧ ಎಂದಿನಂತೆ ಆರನೇ ಕ್ರಮಾಂಕದಲ್ಲಿ ಆಡಿ 30 ರನ್(24 ಎಸೆತ, 2 ಬೌಂಡರಿ, 3 ಸಿಕ್ಸರ್) ಗಳಿಸಿದ್ದರು. ಇಂಗ್ಲೆಂಡ್ ವಿರುದ್ಧ ಕೊಹ್ಲಿಯನ್ನು ಕೆಳಗೆ ತಳ್ಳಿ ಪಠಾಣ್ ಮುಂಚೆ ಬಂದ್ರೂ ಹೊಡೆದಿದ್ದು 1 ಬೌಂಡರಿ, 1 ಸಿಕ್ಸರ್ ಇದ್ದ 14 ರನ್ ಮಾತ್ರ. ಅರಂಭದ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಸಚಿನ್, ಸೆಹ್ವಾಗ್ ಬ್ಯಾಟಿಂಗ್ ಮುಂದೆ 8 ರನ್ ಗಳಿಸಿದ ಪಠಾಣ್ ಮಂಕಾದರು.

ಆಲ್ ರೌಂಡರ್ ಕೊರತೆ: ಒತ್ತಡದ ನಡುವೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಎದುರಾಳಿ ತಂಡದ ಬೌಲರ್‌ಗಳ ಬೆವರಿಳಿಸುವ ಯೂಸುಫ್ಆರನೇ ಅಥವಾ ಏಳನೆ ಕ್ರಮಾಂಕದಲ್ಲಿ ಆಡಿ ಈ ವರೆಗೂ ಯಶಸ್ಸು ಸಾಧಿಸಿದ್ದಾರೆ. ಆದರೆ, ಬ್ಯಾಟಿಂಗ್ ಬಡ್ತಿ ನೀಡಿದಾಗೆಲ್ಲಾ ವೈಫಲ್ಯ ಕಂಡಿದ್ದಾರೆ. ಪ್ರಸಕ್ತ ವಿಶ್ವಕಪ್ ನಲ್ಲಿ ಪಠಾಣ್ 60 ಚಿಲ್ಲರೆ ರನ್ ಮಾತ್ರ ಗಳಿಸಿರಬಹುದು. ಆದರೆ, ಯಾವಾಗಲೂ ಉತ್ತಮ ಸ್ಟ್ರೈಕ್ ರೇಟ್ ಹೊಂದುವುದು ಅವರ ರೂಢಿ. ಭಾರತಕ್ಕೆ ಸಮರ್ಥ ಆಲ್ ರೌಂಡರ್ ಇಲ್ಲದೆ ಇರುವುದರಿಂದ 6 ಹಾಗೂ 7 ಕ್ರಮಾಂಕ ಮಹತ್ವ ಪಡೆದಿದೆ. ಬಾಲಂಗೋಚಿಗಳನ್ನು ಕಟ್ಟಿಕೊಂಡು ಇನ್ನಿಂಗ್ ಮುಂದುವರೆಸುವ ಚಾಕಚಕ್ಯತೆಯುಳ್ಳ ಆಟಗಾರ ಈ ಕ್ರಮಾಂಕವನ್ನು ತುಂಬ ಬೇಕಾಗುತ್ತದೆ. ಪಠಾಣ್ ಅವರ ಬ್ಯಾಟಿಂಗ್ ಹಾಗೂ ಬೌಲಿಂಗ್ ಸಾಮರ್ಥ್ಯವನ್ನು ಟೀಂ ಇಂಡಿಯಾ ನಾಯಕ ಧೋನಿ ಸರಿಯಾಗಿ ಬಳಸಿಕೊಳ್ಳಬೇಕಿದೆ. ಪಂದ್ಯದ ದಿಕ್ಕುದೆಸೆ ಬದಲಿಸಿದ ಪಠಾಣ್ ಇನ್ನಿಂಗ್ಸ್ ನ ಅವಲೋಕನ ಕೆಳಗಿನಂತಿದೆ:[ಪಠಾಣ್ ವೃತ್ತಿ ಜೀವನ ವಿವರ]

* ನ್ಯೂಜಿಲೆಂಡ್ ವಿರುದ್ಧ ಬೆಂಗಳೂರಿನಲ್ಲಿ 2010ರ ಡಿ.7ರಂದು ನಡೆದ ಏಕದಿನ ಪಂದ್ಯದಲ್ಲಿ 6ನೆ ಕ್ರಮಾಂಕದಲ್ಲಿ ಆಡಿ ಅಜೇಯ 123 ರನ್‌ಗಳನ್ನು ಸಿಡಿಸಿದ್ದರು.
* 2011ರ ಜನವರಿ 23ರಂದು ಸೆಂಚೂರಿಯನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಏಳನೆ ಕ್ರಮಾಂಕದಲ್ಲಿ 105 ರನ್ ಬಾರಿಸಿದ್ದರು.
* ಬೆಂಗಳೂರಿನಲ್ಲಿ 316 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ 108 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಯೂಸುಫ್ ಐದನೆ ವಿಕೆಟ್‌ಗೆ ರೋಹಿತ್ ಶರ್ಮಾರೊಂದಿಗೆ ಜತೆಯಾಟದಲ್ಲಿ 80ರನ್ ಮತ್ತು ಸೌರಭ್ ತಿವಾರಿಯೊಂದಿಗೆ ಏಳನೆ ವಿಕೆಟ್‌ಗೆ ಮುರಿಯದ ಜತೆಯಾಟ ನೀಡಿದ್ದರು. ಇವರು 133ರನ್ ರನ್‌ಗಳನ್ನು ತಂಡದ ಖಾತೆಗೆ ಸೇರಿಸಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು.
* ಸೆಂಚೂರಿಯನ್‌ನಲ್ಲಿ ಮಳೆಯಿಂದ ತೊಂದರೆಗೊಳಗಾದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 46 ಓವರ್‌ಗಳಲ್ಲಿ 268 ರನ್‌ಗಳ ಗುರಿ ಪಡೆದ ಭಾರತ 60ಕ್ಕೆ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಯೂಸುಫ್ ಪಠಾಣ್ 70 ಎಸೆತಗಳಲ್ಲಿ 8 ಬೌಂಡರಿ ಮತ್ತು 8 ಸಿಕ್ಸರ್ ಇರುವ 105 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು.
* 2011ರ ಜನವರಿ 18ರಂದು ಕೇಪ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಯೂಸುಫ್ ಪಠಾಣ್ 50 ಎಸೆತಗಳಲ್ಲಿ 59(6 ಬೌಂಡರಿ, 3 ಸಿಕ್ಸರ್)ರನ್ ಬಾರಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. 221 ರನ್‌ಗಳ ಗುರಿ ಬೆನ್ನಟ್ಟಿದ ಭಾರತ 93 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡಾಗ ಪಠಾಣ್ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದ್ದರು.
* ಮೂರು ಅರ್ಧಶತಕಗಳು (ಇಂಗ್ಲೆಂಡ್ ವಿರುದ್ಧ ಅಜೇಯ 50, ಶ್ರೀಲಂಕಾ ವಿರುದ್ಧ ಅಜೇಯ 59 ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 59) 7ನೆ ಕ್ರಮಾಂಕದಲ್ಲಿ ಆಡುವುದರ ಮೂಲಕ ದಾಖಲಾಗಿದೆ.
* ಪಶ್ಚಿಮ ವಲಯ ಮತ್ತು ದಕ್ಷಿಣ ವಲಯ ನಡುವಿನ ದಿಲೀಪ್ ಟ್ರೋಫಿ ಫೈನಲ್‌ನಲ್ಲಿ ಪಠಾಣ್ ಏಳನೆ ಕ್ರಮಾಂಕದಲ್ಲಿ ಆಡಿ ಅಜೇಯ 210(19 ಬೌಂಡರಿ, 10 ಸಿಕ್ಸರ್) ರನ್ ಬಾರಿಸಿದ್ದರು. ಇದು ಅವರು ಭಾರತ ತಂಡಕ್ಕೆ ಮತ್ತೆ ಮರಳಲು ಸಹಯಾಕವಾಯಿತು.

ಯೂಸುಫ್ ಈ ವರೆಗೆ ಆಡಿರುವ 50 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ 36 ಇನಿಂಗ್ಸ್‌ಗಳಲ್ಲಿ 6 ಮತ್ತು 7ನೆ ಕ್ರಮಾಂಕದಲ್ಲಿ ಯಶಸ್ಸು ಸಾಧಿಸಿದ್ದಾರೆ ಎರಡು ಶತಕಗಳನ್ನು ಸಿಡಿಸಿದ್ದಾರೆ. 3ನೆ ಕ್ರಮಾಂಕದಲ್ಲಿ 1 ಬಾರಿ ಆಡಿ 11 ರನ್, 4ನೆ ಕ್ರಮಾಂಕದಲ್ಲಿ 5 ಬಾರಿ ಆಡಿ 108 ರನ್(ಗರಿಷ್ಠ 44), 5ನೇ ಕ್ರಮಾಂಕದಲ್ಲಿ 4 ಇನಿಂಗ್ಸ್ ಆಡಿ 8 ರನ್, 6ನೇ ಕ್ರಮಾಂಕದಲ್ಲಿ 7 ಇನ್ನಿಂಗ್ಸ್ ಆಡಿ 193 ರನ್ (ಗರಿಷ್ಠ 123), 7ನೆ ಕ್ರಮಾಂಕದಲ್ಲಿ 19 ಇನಿಂಗ್ಸ್ ಆಡಿ 437 ರನ್ ಗಳಿಸಿದ್ದಾರೆ. ಇದರಲ್ಲಿ ಗರಿಷ್ಠ 123 ಹಾಗೂ 3 ಅರ್ಧಶತಕಗಳು ಸೇರಿವೆ. ಸುಮಾರು 59 ಬೌಂಡರಿಗಳು, 41 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ.

English summary
World Cup 2011 : Team India have qualified for the Quarter Finals. But, shuffling in Batting order has made impact on Yusuf Pathan's performance. India face either Sri Lanka or Australia on QF so, team need hitter like Yusuf Pathan at the bottom of the line up.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X