ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿನ್ ಸೆಂಚುರಿಗಳ ಸೆಂಚುರಿಗೆ ಕ್ಷಣಗಣನೆ

By Srinath
|
Google Oneindia Kannada News

ಬೆಂಗಳೂರು, ಮಾ. 20: ಸಿಡಿಲ ಮರಿ ಎಂದೇ ಕ್ರಿಕೆಟ್ ವಿಶ್ವಕ್ಕೆ ಪರಿಚಿತರಾಗಿ ಬಂದ ಸಚಿನ್ ತೆಂಡೂಲ್ಕರ್ ಅವರ ಸೆಂಚುರಿಗಳ ಸವಾರಿ ಕ್ಷಣಗಣನೆ 99ಕ್ಕೆ ತಲುಪಿದ್ದು, ಮಾರ್ಚ್ 20ರಂದು ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ಶತಕಗಳ ಆರ್ಭಟ ಕಾಣಲಿದೆಯೇ ಎಂಬ ಕುತೂಹಲ ಮೂಡಿದೆ. ಭಾರತ ತಂಡದ ಆಯ್ಕೆ ದಾರ ಕೆ. ಶ್ರೀಕಾಂತ್ ಸೇರಿದಂತೆ ಅವರ ಕಟ್ಟರ್ ಅಭಿಮಾನಿಗಳಂತೂ ಇದು ನೂರಕ್ಕೆ ನೂರು ಸಂಭವ ಎಂದಿದ್ದಾರೆ. ನಿಜಕ್ಕೂ ಸಂಭವಾಮಿ ಯುಗೇ ಯುಗೇ ಅಂದರೆ ಯುಗಕ್ಕೊಮ್ಮೆ ಮಾತ್ರ ಇಂತಹ ಅದ್ಭುತಗಳು ಘಟಿಸಲಿವೆ.

ಭಾರತದ ತಂಡ ವಿಶ್ವಕಪ್ ಕ್ರಿಕೆಟ್ ಲೀಗ್-ನ ಕೊನೆಯ ಚರಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮಾರ್ಚ್ 20ರಂದು ಸೆಣಸಲಿದೆ. ಮುನ್ನಾ ದಿನವಾದ ಶನಿವಾರ ತೆಂಡೂಲ್ಕರ್ ಅವರು ಸ್ಟೇಡಿಯಂನ ನಟ್ಟನಡುವೆ ಪಿಚ್ ಪಕ್ಕದಲ್ಲಿಯೇ ಠಿಕಾಣಿ ಹೂಡಿದ್ದರು. ಒಂದಷ್ಟು ಸಹ ಆಟಗಾರರು ಅವರು ಜತೆಗಿದ್ದರು. ಸಚಿನ್ ಈ ಹಿಂದೆ ಇದೇ ಮೈದಾನದಲ್ಲಿ ಅನೇಕಾನೇಕ ಸುಮಧುರ ದಾಖಲೆಯ ಕ್ಷಣಗಳನ್ನು ಹೊಂದಿದ್ದಾರೆ. ಭಾನುವಾರದ ಮಧುರಾತಿಮಧುರ ಕ್ಷಣದ ಅನುಭವ ಹೊಂದಲು ಅವರು ಪ್ರಾಕ್ಟೀಸ್ ಮಾಡುತ್ತಿರುವಂತೆ ಭಾಸವಾಗುತ್ತಿತ್ತು. ರಿಹರ್ಸಲ್ ಅದ್ಭುತವಾಗಿಯೇ ನಡೆದಿತ್ತು.
ವಿಶ್ವಕಪ್ : ಅಭ್ಯಾಸ ಪಂದ್ಯಗಳ ಫಲಿತಾಂಶ ಮುಖಪುಟ | ಚಿತ್ರಪಟ | ಅಂಕಗಳ ಕೋಷ್ಟಕ | ಟಾಪ್ ಬ್ಯಾಟ್ಸ್ ಮನ್| ಟಾಪ್ ಬೌಲರ್

21 ವರ್ಷಗಳಿಂದ ದಣಿವರಿಯದೆ ತಂಡಕ್ಕಾಗಿ ಆಡುತ್ತಿರುವ ಸಚಿನ್ ಎಂದಿಗೂ ವೈಯಕ್ತಿಕ ದಾಖಲೆಗಾಗಿ ಆಡಿದವರಲ್ಲ. ಪ್ರಸ್ತುತ ಅವರ ಫಾರಂ ನೊಡಿದರೆ ನಾಳೆ ಶತಕ ಗ್ಯಾರಂಟಿ ಎಂದು ತಂಡದ ನಾಯಕ ಧೋನಿ ಸಚಿನ್ ಶತಕಗಳ ಶತಕಕ್ಕೆ ಮುನ್ನುಡಿ ಬರೆದಿದ್ದಾರೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ಸಫಾರಿಯಲ್ಲಿದ್ದಾಗ ಟೆಸ್ಟ್ ಕ್ರಿಕೆಟ್-ನಲ್ಲಿ 50ನೇ ಶತಕ ಸಿಡಿಸಿದ್ದ ಸಚಿನ್, ಪ್ರಸ್ತುತ ವರ್ಲ್ಡ್ ಕಪ್-ನಲ್ಲಿ ಸೆಂಚುರಿ ಮೇಲೆ ಸೆಂಚುರಿ ಬಾರಿಸಿರುವುದು ಗಮನಾರ್ಹ. ಇಂತಿಪ್ಪ ಸೆಂಚುರಿಗಳ ಸರದಾರ ಸಚಿನ್, ನರ್ವಸ್ ನೈಂಟಿ ಗುಮ್ಮ ನನ್ನನ್ನು ಕಾಡುತ್ತಿಲ್ಲ ಎಂದು ಪರೋಕ್ಷವಾಗಿ ಸೆಂಚುರಿ ಬಾರಿಸುವ ಬಗ್ಗೆ ಹೇಳಿರುವುದು ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದೆ. ಸೆಂಟ್ ಪರ್ಸೆಂಟ್ ಆಲ್ ದಿ ಬೆಸ್ಟ್ ಹೇಳುವ ನಮ್ಮ ಈ ವಾಮನ ಮೂರ್ತಿಗೆ!

English summary
World Cup 2011 : Sachin Tendulkar getting ready to hit a century of centuries in Chidambaram Stadium at Chennai on March 20 in India's last World Cup league encounter against the West Indies. So folks get ready to simply watch this rare spectacle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X