ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಸಿಯೂಟದಲ್ಲಿ ಹಾವು, ಅದನ್ನು ತೆಗೆದು ಉಣಬಡಿಸಿದರು

By Srinath
|
Google Oneindia Kannada News

Mid-day Meals Karnataka
ಹಾವೇರಿ, ಮಾ. 20: ಸರ್ವಜ್ಞನ ಹುಟ್ಟೂರನ್ನು ಹೊಂದಿರುವ ಹಾವೇರಿ ಜಿಲ್ಲೆಯಲ್ಲಿ 10 ದಿನಗಳ ಹಿಂದೆ ನಡೆದ ಈ ಆತಂಕಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಬಡಿಸುವಾಗ ಸಾರಿನಲ್ಲಿ ಹಾವಿನ ಮರಿಯೊಂದು ಸತ್ತು ಬಿದ್ದಿರುವುದು ಕಂಡುಬಂದಿದೆ. ಬುದ್ಧಿವಂತ ಸಿಬ್ಬಂದಿ ತಕ್ಷಣ ಹಾವನ್ನು ಹೊರಗೆಸೆದು ಏನೂ ನಡೆದೇ ಇಲ್ಲವೆಂಬಂತೆ ಮಕ್ಕಳಿಗೆ ಅದನ್ನೇ ಉಣಿಸಿದ್ದಾರೆ. ಜಿಲ್ಲೆಯ ಹಿರೇಕೆರೂರು ತಾಲೂಕಿನ ಮಸೂರ್ ಸರಕಾರಿ ಶಾಲಾ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದಿರುವ ಈ ಘಟನೆಯ ಬಗ್ಗೆ ಸಿಬ್ಬಂದಿಯೇ ತಡವಾಗಿ ಬಾಯಿಬಿಟ್ಟಿದ್ದಾರೆ.

ಸಾರಿನಲ್ಲಿ ಬಿದ್ದಿದ್ದ ಹಾವನ್ನು ತೆಗೆದು ಅದನ್ನೇ ಮಕ್ಕಳಿಗೆ ಉಣಬಡಿಸಿದ ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಜಿಲ್ಲಾ ಮಾಹಿತಿ ಅಧಿಕಾರಿ ಸ್ವತಃ ತಕ್ಷಣ ಶಾಲೆಗೆ ಭೇಟಿ ನೀಡಿದ್ದರು. ಮಕ್ಕಳನ್ನು ತಕ್ಷಣ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ಯಾವುದೇ ಅಪಾಯವಿಲ್ಲದೆ ಮಕ್ಕಳು ಆರೋಗ್ಯವಾಗಿರುವುದನ್ನು ಖಾತ್ರಿ ಪಡಿಸಿಕೊಡು ಅವರು ಮರಳಿದ್ದರು ಎಂದು ತಿಳಿದುಬಂದಿದೆ.

ಈ ಮಧ್ಯೆ, 'ಸತ್ಯ ತಿಳಿದಿದ್ದರೂ ಅದನ್ನು ಮುಚ್ಚಿಟ್ಟು ಮಕ್ಕಳಿಗೆ ಊಟ ಬಡಿಸಿದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಇಡೀ ಘಟನೆ ಬಗ್ಗೆ ತನಿಖೆ ನಡೆಸಬೇಕು' ಎಂದು ಮಸೂರ್ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ರಾಮಚಂದ್ರಪ್ಪ ಜೋಗಿ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. 'ಈಗಾಗಲೇ ಶಾಲಾ ಮುಖ್ಯೋಪಾಧ್ಯಾಯರಿಗೆ ಮೆಮೊ ಕಳಿಸಲಾಗಿದೆ. ಅಲ್ಲಿನ ಸಿಬ್ಬಂದಿಯನ್ನು ಕೂಡಲೇ ವರ್ಗಾಯಿಸುವಂತೆ ಸೂಚನೆ ನೀಡಲಾಗಿದೆ' ಎಂದು ಬಿಇಒ ಶಿವಣ್ಣಗೌಡ ಪಾಟೀಲ್ ಹೇಳಿದ್ದಾರೆ.

English summary
During Mid-day Meals distribution the staff of a school in karnataka have found a snake. But they have simply removed it from rasam and served it to the children. The incident took place recently in the Girls' Middle School in Hirekerur taluk in Haveri district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X