ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಕ್ರೋಸಾಫ್ಟ್ ಪರೀಕ್ಷೆಯಲ್ಲಿ ಪೋರನ ವಿಶ್ವ ದಾಖಲೆ

By Srinath
|
Google Oneindia Kannada News

Microsoft Exam
ರಾಜಕೋಟಾ, ಮಾ. 20: ಅಮೆರಿಕದ ಮೈಕ್ರೋಸಾಫ್ಟ್ ಕಂಪನಿ ಇಂಟರ್ ನೆಟ್ ಮೂಲಕ ನಡೆಸಿದ ಕಂಪ್ಯೂಟರ್ ಪರೀಕ್ಷೆಯಲ್ಲಿ ನಗರದ 11 ವರ್ಷದ ಬಾಲಕನೊಬ್ಬ 1,000 ಕ್ಕೆ 1,000 ಅಂಕ ಗಳಿಸಿ, ವಿಶ್ವ ದಾಖಲೆ ಮಾಡಿದ್ದಾನೆ. ಗುಜರಾತಿನ ರಾಜಕೋಟೆಗೆ ಇದು ಎರಡನೆಯ ಹಿರಿಮೆಯಾಗಿದೆ.

ಐದನೇ ತರಗತಿಯ ಅಕ್ಷಿತ್ ಜಯೇಶ್ ಧ್ರುವ್ ಮಾರ್ಚ್ 16ರಂದು ಈ ಸಾಧನೆ ಮೆರೆದಿದ್ದಾನೆ. ಇನ್ ಸೈಡ್ ಟುಮಾರೊ ಕಂಪ್ಯೂಟರ್ ಅಕಾಡೆಮಿಯಲ್ಲಿ ಓದುತ್ತಿರುವ ಅಕ್ಷಿತ್, 119 ರಾಷ್ಟ್ರಗಳಲ್ಲಿ 3ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೆ ಓದುತ್ತಿರುವವರು 17,000 ಪರೀಕ್ಷಾರ್ಥಿಗಳನ್ನು ಸೋಲಿಸಿದ್ದಾನೆ ಎಂದು ಅಕಾಡೆಮಿ ಮುಖ್ಯಸ್ಥ ಚಿರಾಗ್ ಕೊಠಾರಿ ತಿಳಿಸಿದ್ದಾರೆ.

ಈ ಹಿಂದೆ ಇದೇ ನಗರದ 21 ವರ್ಷದ ಶ್ರುತಿ ದೋಶಿ ಅವರು ಇಂತಹ ಸಾಧನೆಗೈದಿದ್ದರು. 2004ರಲ್ಲಿ ನ್ಯೂಜಿಲಾಂಡ್-ನ ಪೀಟರ್ ಫಿಲ್ 2004ರಲ್ಲಿ 999 ಅಂಕ ಗಳಿಸಿದ್ದೇ ಈ ಹಿಂದಿನ ದಾಖಲೆಯಾಗಿತ್ತು. ಸ್ವಯಂಸೇವಾ ಸಂಸ್ಥೆಯೊಂದು ಈ ಅಕಾಡೆಮಿ ಉಸ್ತುವಾರಿ ವಹಿಸಿದ್ದು, ಕಂಪ್ಯೂಟರ್ ಸಾಕ್ಷರತೆ ಜಾಗೃತಗೊಳಿಸುವುದು ಇದರ ಉದ್ದೇಶವಾಗಿದೆ. ಹೆಚ್ಚಿನ ವಿವರಗಳಿಗೆ ಈ ಅಂತರ್ಜಾಲದಲ್ಲಿ ಜಾಲಾಡಿ: http://bit.ly/2ViMxe

English summary
Akshit Jayesh Dhruv, a class V student from Inside Tomorrow Computer Academy in Rajkot has become the youngest student to equal the world record of obtaining full 1,000 marks in an online computer exam conducted by US-based multinational Microsoft Corp. He obtained full marks in the exam conducted on March 16.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X