• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಗ್ಗದ ಪ್ರವಾಸಕ್ಕೆ ಹಾತೊರೆಯುವ ಭಾರತೀಯ ಮನಸುಗಳು

By Srinath
|

ಬೆಂಗಳೂರು, ಮಾ. 20: ಹೌದು, ಎಲ್ಲಿಗೇ ಆಗಲಿ ಪ್ರವಾಸ ಮಾಡುಲಿಚ್ಛಿಸುವ ಭಾರತೀಯ ಮನಸುಗಳಲ್ಲಿ ಮೊದಲು ಸುಳಿಯುವ ವಿಷಯ ಯಾವುದು? ಪ್ರಶ್ನೆಗೆ ಪ್ರಶ್ನೆ ಎಂಬಂತೆ 'ಅಗ್ಗದ ವಿಮಾನ ಪ್ರಯಾಣ ಯಾವುದು?' ಎಂಬ ದೊಡ್ಡ ಸವಾಲಿನ ಪ್ರಶ್ನೆ ಹಾರಿಬರುತ್ತದೆ. ಅಲ್ಲಿಂದ ಮುಂದಕ್ಕೆ ತಮ್ಮ ಗ್ರಾಹಕರನ್ನು ಎಬ್ಬಿಸಿ ಕರೆದುಕೊಂಡು ಹೋಗುವ ವೇಳೆಗೆ ಟ್ರಾವೆಲ್ ಏಜೆನ್ಸಿಗಳು ಹೈರಾಣವಾಗಿರುತ್ತವೆ. ಇದು ವಿಮಾನಕ್ಕೇ ಸೀಮಿತವಾಗದು, ಚೀಪ್ ಟ್ರೈನ್ ಯಾವುದಿದೆ? ಅಗ್ಗದ ಬಸ್ಸು ? ಹೀಗೆ ಪ್ರಶ್ನಾವಳಿ ಸಾಗುತ್ತದೆ. ಜನ್ಮತಹ ಬಂದ ಚೌಕಾಶಿ ಬುದ್ಧಿಯನ್ನು ಧಾರಾಳವಾಗಿ ಪ್ರಯೋಗಿಸುತ್ತಾರೆ. ಇನ್ನು ಅನೇಕರಿಗೆ ಬಾರ್ಗೇನ್ ಮಾಡದೆ ಶಾಪಿಂಗ್ ಮಾಡುವುದು ಶುದ್ಧ ಅಲರ್ಜಿಯಾದೀತು.

ವೆಬ್ ಸೈಟ್ ನಲ್ಲೂ ಬರೀ ಇಂಥವೇ ವಿಚಾರ ವಿನಿಮಯಗಳು. ಪ್ರವಾಸ ಎಂಬ ವಿಚಾರ ತಲೆಗೆ ಹೊಕ್ಕಿದೊಡನೇ ಭಾರತೀಯರು ಮೊದಲು ನೆರೆಹೊರೆ, ನೆಂಟರು ಪರಿಚಯಸ್ಥರು ಹೀಗೆ ಎಲ್ಲರನ್ನೂ, ಎಲ್ಲವನ್ನೂ ಪ್ರಯಾಣ ಸ್ಥಳದ ಬಗ್ಗೆ ವಿಚಾರಿಸತೊಡಗುತ್ತಾರೆ. ನಂತರ ಅಂತರ್ಜಾಲದಲ್ಲಿ ತಾವು ಭೇಟಿ ನೀಡಬೇಕಾದ ತಾಣಗಳ ಬಗ್ಗೆ ಜಾಲಾಡತೊಡಗುತ್ತಾರೆ. ಭಾರತೀಯರ ಮನಸುಗಳನ್ನು ಅರಿಯುವ ಸಾಹಸದಲ್ಲಿ ಇತ್ತೀಚೆಗೆ ಸುಮಾರು 2 ಲಕ್ಷ ವೆಬ್ ಸೈಟ್ ಗಳನ್ನು ಇದಕ್ಕೆಂದೇ ಸಮೀಕ್ಷಿಸಲಾಗಿದೆ. ಅದರಲ್ಲಿ ಈ ಪ್ರವರಗಳೆಲ್ಲ ದಾಖಲಾಗಿವೆ.

ಪ್ರವಾಸ ಸೇವಾ ಕಂಪನಿಗಳು ನೀಡಬಯಸುವ ಸೇವೆಗಳನ್ನು ತುಲನಾತ್ಮಕವಾಗಿ ಅಳೆಯುವುದು ಪ್ರವಾಸಿಗರಿಗೆ ಮಾಮೂಲು. ಏರ್ ಟಿಕೆಟ್, ಹೋಟೆಲ್, ಟ್ರೈನ್, ಬಸ್ ಬುಕ್ಕಿಂಗ್ ಇವೇ ಮುಂತಾದ ಸೇವಾ ಪದಗಳನ್ನು ಅಂತರ್ಜಾಲದಲ್ಲಿ ಹೆಚ್ಚಾಗಿ ತಡಕಾಡುತ್ತಾರೆ. ಸಾಮಾಜಿಕ ಸಂಪರ್ಕ ತಾಣಗಳಾದ ಟ್ವಿಟ್ಟರ್, ಫೇಸ್ ಬುಕ್ ಬಳಕೆಯೂ ಯಥೇಚ್ಛವಾಗಿರುತ್ತದೆ. ಏಕೆಂದರೆ ಇವುಗಳಲ್ಲಿ ಸಚಿತ್ರ ಮಾಲಿಕೆಗಳಿರುತ್ತವೆ. ಪ್ರೇಕ್ಷಣೀಯ ಸ್ಥಳಗಳ ಫೋಟೊಗಳು, ವೀಡಿಯೊಗಳು, ಟಿಪ್ಸ್, ಸಲಹೆ, ಸೂಚನೆಗಳು ಇಲ್ಲಿ ಧಾರಾಳವಾಗಿ ಕಾಣಿಸಿಕೊಳ್ಳುತ್ತವೆ. ಅಂದಹಾಗೆ ಮತ್ತೊಮ್ಮೆ ಬೇಸಿಗೆ ರಜೆ ಕಾಲಿರಿಸಿದೆ. ಪ್ರವಾಸಕ್ಕೆ ಅಣಿಯಾಗುತ್ತಿರುವ ಭಾರತೀಯ ಮನಸುಗಳು ಹೇಗೆ ಮಿಡಿಯುತ್ತವೆ ಎಂಬುದನ್ನು ಸಮೀಕ್ಷೆಯ ಮೂಲಕ ಸೂಕ್ಷ್ಮವಾಗಿ ಅರಿಯುವ ಪ್ರಯತ್ನ ನಡೆಸಲಾಗಿದೆ. ಅದಾಗಲೇ ಯಾರೋ 'ಚೀಪ್ ಅಂಡ್ ಬೆಸ್ಟ್ ಯಾವ್ದು ರೀ' ಎಂದು ವಿಚಾರಿಸುತ್ತಿರುವಂತಿದೆ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
An Indian traveller as usual practices cheap and best tour proceedings. Price-sensitive Indian enquires about cheap air tickets, then extends that to hotels, train and bus trips as well - says the Experian Hitwise Travel report, a study on how internet is used as an information source to plan a trip.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more