ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್ತು: ವಿಕಿಲೀಕ್ಸ್ ಆರೋಪ ಅಲ್ಲಗೆಳೆದ ಪ್ರಧಾನಿ

By Mahesh
|
Google Oneindia Kannada News

PM MM Sing on Cash for votes Wikileaks India
ನವದೆಹಲಿ, ಮಾ.18: ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಯುಪಿಎ ಸರ್ಕಾರ ಎಂದಿಗೂ ಓಟಿಗಾಗಿ ನೋಟು ಕೃತ್ಯಕ್ಕೆ ಬೆಂಬಲಿಸಲು ಸಾಧ್ಯವಿಲ್ಲ. ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಯಾರಿಗೂ ಲಂಚ ನೀಡಿಲ್ಲ. ವಿಕಿಲೀಕ್ಸ್ ದಾಖಲೆಯಿಂದ ಏನನ್ನೂ ಸಾಬೀತು ಪಡಿಸಲು ಸಾಧ್ಯವಿಲ್ಲ. ವಿಕಿಲೀಕ್ಸ್ ಪ್ರಕಟಿಸಿದಂತೆ ವೋಟಿಗಾಗಿ ನೋಟು ಕ್ರಿಯೆಗೆ ಕಾಂಗ್ರೆಸ್ ನ ಯಾವ ವ್ಯಕ್ತಿಯನ್ನು ನಾನು ನಿಯುಕ್ತಿಗೊಳಿಸಿಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಇಂದು ರಾಜ್ಯ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ವಿಕಿಲೀಕ್ಸ್ ನ ಸತ್ಯಾಸತ್ಯತೆ ಬಗ್ಗೆ ಪ್ರಶ್ನಿಸಿದ ಪ್ರಧಾನಿ, ವಿಕಿಲೀಕ್ಸ್ ವರದಿಯನ್ನು ದೃಢೀಕರಿಸಲಾಗಿಲ್ಲ. 2008ರಲ್ಲಿ ನಡೆದಿದೆ ಎನ್ನಲಾದ ಓಟಿಗಾಗಿ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದೀಯ ಸಮಿತಿ ತನಿಖೆ ನಡೆಸಿಯಾಗಿದೆ. ಸಮಿತಿ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ. ಯುಪಿಎ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದು ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದು ಸಹಜ. ಆದರೆ, ವಿಶ್ವಾಸಮತ ಯಾಚನೆಯಲ್ಲಿ ಸಂದರ್ಭದಲ್ಲಿ ಯುಪಿಎಗೆ ಸಂಪೂರ್ಣ ಬಹುಮತ ಲಭಿಸಿದೆ.

2008ರ ಜುಲೈ 22 ರಂದು ನಡೆದಿದ್ದ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಸರ್ಕಾರ ಉಳಿಸಿಕೊಳ್ಳಲು ಆರ್ ಎಲ್ ಡಿ ಸಂಸದರಿಗೆ ಸುಮಾರು 60 ಕೋಟಿ ಲಂಚ ನೀಡಲಾಗಿದೆ ಎಂದು ವಿಕಿಲೀಕ್ಸ್ ವರದಿ ಮಾಡಿತ್ತು. ಅಲ್ಲದೆ, ಪ್ರಣಬ್ ಮುಖರ್ಜಿಯವರನ್ನು ಹಣಕಾಸು ಸಚಿವರನ್ನಾಗಿ ಆಯ್ಕೆ ಮಾಡಿರುವುದರಲ್ಲಿ ಇರುವ ರಾಜಕೀಯ ತಂತ್ರದ ಬಗ್ಗೆ ಕೂಡಾ ವಿಕಿಲೀಕ್ಸ್ ಪ್ರಶ್ನಿಸಿತ್ತು. ಭಾರತದ ಆರ್ಥಿಕ ನೀತಿಗಳು, ಸಚಿವರುಗಳ ಬದಲಾವಣೆ, ಸಚಿವರುಗಳ ನೇಮಕ, ಇತರ ಆಂತರಿಕ ವಿಚಾರಗಳ ಕುರಿತು ಅಮೆರಿಕಕ್ಕೆ ಇರುವ ನಿಲುವೇನು ಎಂಬುದರ ಬಗ್ಗೆ ವಿಕಿಲೀಕ್ಸ್ ಮಾಹಿತಿ ನೀಡಿತ್ತು. ನೈತಿಕತೆ ಕಳೆದುಕೊಂಡಿರುವ ಯುಪಿಎ ಸರ್ಕಾರ, ಪ್ರಜಾಪ್ರಭುತ್ವವನ್ನು ಬಲಿ ಕೊಟ್ಟಿದೆ. ಮನಮೋಹನ್ ಸಿಂಗ್ ರಾಜೀನಾಮೆ ನೀಡಬೇಕು ಎಂದು ವಿಪಕ್ಷಗಳು ಆಗ್ರಹಿಸಿದ್ದವು.

English summary
Prime Minister Manmohan Singh makes statement in Lok Sabha on Wikileaks cash for votes. He said he has not authorized anybody to purchase votes nor was he involved in any such transactions. MM Singh also denied Wikileaks allegation on appointment of Pranab Mukherjee as Finance Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X