ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಕಿಲೀಕ್ಸ್ ವರದಿ ಸುಳ್ಳು ಎಂದ ಪ್ರಧಾನಿ ಆಪ್ತ

By Mahesh
|
Google Oneindia Kannada News

MK Narayanan
ಕೊಚ್ಚಿ, ಮಾ.18: ಪ್ರಧಾನಿ ಮನಮೋಹನ್ ಸಿಂಗ್ ಮತ್ತು ತಮ್ಮ ನಡುವೆ ಯಾವುದೇ ಭಿನ್ನಮತವಿಲ್ಲ. ವಿಕಿಲೀಕ್ಸ್ ವರದಿ ಸತ್ಯಕ್ಕೆ ದೂರವಾದುದು ಎಂದು ಮಾಜಿ ಭದ್ರತಾ ಸಲಹೆಗಾರ ಎಂ.ಕೆ. ನಾರಾಯಣನ್ ಗುರುವಾರ ಸ್ಪಷ್ಟನೆ ನೀಡಿದ್ದಾರೆ. ನಾನು ಯುಎಸ್ ರಾಯಭಾರಿ ಟಿಮೋಥಿ ರೋಮರ್ ಅವರೊಂದಿಗೆ ಅನೌಪಚಾರಿಕ ಮಾತುಕತೆಯಷ್ಟೇ ನಡೆಸಿದ್ದೆ. ಪಾಕ್ ಜೊತೆ ಬಾಂಧವ್ಯ ವೃದ್ಧಿ ಕುರಿತಾದ ಪ್ರಧಾನಿ ಚಿಂತನೆಯನ್ನು ಶ್ಲಾಘಿ
ಸಿದ್ದೆ ಎಂದು ನಾರಾಯಣನ್ ಹೇಳಿದ್ದಾರೆ.

26/11 ಮುಂಬೈ ಉಗ್ರರ ದಾಳಿಗೆ ಸಂಬಂಧಿಸಿದಂತೆ ಪ್ರಧಾನಿ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಮೂಡಿಲ್ಲ ವಿಕಿಲೀಕ್ ವರದಿಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ ಎಂದು ಹೇಳಿದರು. ಹಾಲಿ ಪಶ್ಚಿಮ ಬಂಗಾಲದ ರಾಜ್ಯಪಾಲರಾಗಿರುವ ನಾರಾಯಣನ್, ಕಳೆದ ಸಂಜೆ ಶಬರಿಮಲೆಗೆ ತೆರಳುವಾಗ ಈ ರೀತಿ ಪ್ರತಿಕ್ರಿಯೆ ನೀಡಿದರು.

ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪಾಕ್ ಮೇಲಿರುವಷ್ಟು ನಂಬಿಕೆ ನನಗಿಲ್ಲ ಅನ್ನೋದು ನಿಜ. ಆದರೆ, ಪಾಕ್ ಜೊತೆ ನಮಗೆ ಯಾವುದೇ ಭವಿಷ್ಯವಿಲ್ಲ ಎಂದು ಹೇಳಿರುವುದಾಗಿ ವಿಕಿಲೀಕ್ಸ್ ಹೇಳಿರುವುದರಲ್ಲಿ ಯಾವುದೇ ಹುರುಳಿಲ್ಲ. ಇಲ್ಲಿ ಅಭಿಪ್ರಾಯದಲ್ಲಿ ವ್ಯತ್ಯಾಸವಿಲ್ಲ, ಆದರೆ, ದೃಷ್ಟಿಕೋನದಲ್ಲಿ ವ್ಯತ್ಯಾಸವಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರದಂಥ ಉನ್ನತ ಹುದ್ದೆಯಲ್ಲಿರುವ ನಾನು ಪ್ರಧಾನಿ ಕುರಿತು ಹೇಳಲು ಹೇಗೆ ಸಾಧ್ಯ? ಈ ಕುರಿತು ಕನಿಷ್ಠ ಪಕ್ಷ ಯೋಚನೆನೂ ಮಾಡಿಲ್ಲ ಎಂದು ನಾರಾಯಣನ್ ಹೇಳಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಆಪ್ತರ ಕೂಟದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಏಕಾಂಗಿಯಾಗಿದ್ದಾರೆ. ಪ್ರಧಾನಿ ಕಚೇರಿಯಲ್ಲಿ ಕೇರಳ ಮಾಫಿಯಾ ಬೆಳೆಯುತ್ತಿದೆ. 26/11 ಘಟನೆಗೆ ಸಂಬಂಧಿಸಿದಂತೆ ನಾರಾಯಣನ್ ಮತ್ತು ಪ್ರಧಾನಿ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು ಎಂದು ವಿಕಿಲೀಕ್ಸ್ ವರದಿ ಮಾಡಿದ್ದನ್ನು ಆಂಗ್ಲ ದೈನಿಕವೊಂದು ಬಹಿರಂಗಗೊಳಿಸಿತ್ತು.

English summary
Former National Security Adviser MK Narayanan has denied that Wikileaks India claim that he had difference of opinion with Prime Minister Manmohan Singh on Pakistan against the backdrop of the 26/11 Mumbai terror attacks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X