ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುವರ್ಣ ಟಿವಿಗೆ ರಂಗನಾಥ್ ರಾಜೀನಾಮೆ ನಿರಾಕರಣೆ

By Shami
|
Google Oneindia Kannada News

Suvarna News 24/7 editor HR Ranganath
ಬೆಂಗಳೂರು, ಮಾ. 17 : "ಸುವರ್ಣ ನ್ಯೂಸ್ 24/7 ಕನ್ನಡ ಸುದ್ದಿ ವಾಹಿನಿಯ ಸಾರಥಿ ಎಚ್ಆರ್ ರಂಗನಾಥ್ ತಮ್ಮ ಹುದ್ದೆಗೆ ರಾಜಿನಾಮೆ ಕೊಟ್ಟಿದ್ದಾರೆ. ಗುರುವಾರದಿಂದ ಕಚೇರಿಗೆ ಬರದಂತೆ ಮ್ಯಾನೆಜ್ಮೆಂಟ್ ಅವರಿಗೆ ಸೂಚಿಸಿದೆ". ಹಾಗಂತ ಸಾರುವ ಒಂದು ಬ್ರೇಕಿಂಗ್ ನ್ಯೂಸ್ ಕನ್ನಡದ ಬ್ಲಾಗಿನಲ್ಲಿ ಬುಧವಾರ ರಾತ್ರಿ ಪ್ರಕಟವಾಗಿದೆ. 'ಒಳ್ಳೆಯದಕ್ಕೆ ಮಿಡಿ ಕೆಟ್ಟದ್ದಕ್ಕೆ ಛಡಿ' ಎಂಬ ಅಡಿಬರಹವಿರುವ ಕನ್ನಡ ಬ್ಲಾಗ್ ಮೀಡಿಯಾಮನ.ಬ್ಲಾಗ್ ಸ್ಪಾಟ್ ಪ್ರಕಟಿಸಿರುವ ಸುದ್ದಿಯ ಪೂರ್ಣ ಪಾಠ ಈ ಕೆಳಗಿನಂತಿದೆ:

ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ಎಚ್. ಆರ್. ರಂಗನಾಥ ರಾಜೀನಾಮೆ ನೀಡಿದ್ದಾರೆ.ಇದು ಈ ಕ್ಷಣದ ಬ್ರೆಕಿಂಗ್ ನ್ಯೂಸ್! ರಂಗನಾಥ್ ಸುವರ್ಣ ಚಾನಲ್ ಬಿಟ್ಟು ಸಮಯ ಖರೀದಿಸುತ್ತಾರೆ, ಕಸ್ತೂರಿಗೆ ಹೋಗುತ್ತಾರೆ ಎಂದೆಲ್ಲ ಹರಡಿದ್ದ ಸುದ್ದಿಗಳೆಲ್ಲ ಗಾಳಿಯಲ್ಲಿ ಲೀನವಾಗಿ ಸುವರ್ಣ ನ್ಯೂಸ್ ಚಾನಲ್ ನಿಂದ ಅವರು ಹೊರಹಾಕಿಸಿಕೊಳ್ಳುವುದರಲ್ಲಿ ಪರ್ಯಾವಸಾನವಾಗಿದೆ. ಅವರಿಗೆ ಗುರುವಾರದಿಂದ ಕಚೇರಿಗೆ ಬರದಂತೆ ಮ್ಯಾನೆಜ್ಮೆಂಟ್ ಸೂಚಿಸಿದೆ.

ಈ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ರಂಗ ರಾತ್ರಿ ನ್ಯೂಸ್ ನಲ್ಲಿ ಕಾಣಿಸಿಕೊಂಡಿಲ್ಲ. ರಂಗ ಅವರ ಜೊತೆಗೆ ಅವರ ಎಷ್ಟು ಸಹೋದ್ಯೋಗಿಗಳು ಅವರನ್ನು ಹಿಂಬಾಲಿಸುತ್ತಾರೆ ಎಂಬುದು ಗೊತ್ತಾಗಿಲ್ಲ. ರಂಗ ಅವರ ಬಗ್ಗೆ ಕಳೆದ ಕೆಲವು "ಸಮಯ"ದಿಂದ ಮ್ಯಾನೆಜ್ಮೆಂಟ್ಗೆ ಅಸಮಾಧಾನ ಇತ್ತು. ಸಮಯ ಚಾನಲ್ ಖರೀದಿಸಲು ರಂಗ ಮುಂದಾದಾಗಿನಿಂದ ಈ ಅಸಮಾದಾನ ಹೆಚ್ಚಾಗಿತ್ತು. ಆದರೆ ರಂಗ ಮಾತ್ರ ಪರದೆ ಮೇಲೆ ಮೆರೆಯುತ್ತಲೇ ಇದ್ದರು.

ರಂಗನಾಥ್ ಅವರು ಸುವರ್ಣ ತೊರೆಯುತ್ತಾರೆ. ಮುಂದಿನ ಅವರ ಯೋಜನೆಗಳಲ್ಲಿ ಬೇರೆ ಯಾವುದಾದರೂ ಟಿವಿಗೆ ಸೇರಿಕೊಳ್ಳುತ್ತಾರಂತೆ ಅಥವಾ ತಾವೇ ಟಿವಿ ವಾಹಿನಿಯನ್ನು ಖರೀದಿಸುತ್ತಾರಂತೆ ಎಂಬಂತಹ ಗಾಸಿಪ್ಪುಗಳು ಕನ್ನಡ ಪತ್ರಕರ್ತರ, ವಿಶೇಷವಾಗಿ ಟಿವಿಗಳಲ್ಲಿ ಕೆಲಸಮಾಡುವವರ ಅಂಗಳದಿಂದ ಎದ್ದೇಳುತ್ತಿತ್ತು. ಚಕಿತಗೊಳಿಸುವ ಸುದ್ದಿ ಎಂದರೆ ನಿನ್ನೆ ರಾತ್ರಿ ಈ ಗಾಳಿಮಾತು ಇಂಟರ್ನೆಟ್ಟಿನಲ್ಲೂ ತೂರಿಬಂತು.

"ರಾಜಿನಾಮೆ ಸುದ್ದಿ ಸುಳ್ಳು. ನಾನು ಈಗ ಸುವರ್ಣ ಕಚೇರಿಯಲ್ಲೇ ಇದ್ದೇನೆ. ಇದು ಕೇವಲ ವದಂತಿ" ಎಂದು ತಮ್ಮನ್ನು ಸಂಪರ್ಕಿಸಿದ ಒನ್ ಇಂಡಿಯ-ಕನ್ನಡದ ವರದಿಗಾರರಿಗೆ ರಂಗನಾಥ್ ಗುರುವಾರ ಮಧ್ಯಾನ್ಹದ ಊಟದ ವೇಳೆ ಸ್ಪಷ್ಟೀಕರಣ ನೀಡಿದರು. ಇಂಥ ಸುದ್ದಿಗಳು ಹರಡುವುದು ಏಕೆ? ಅದನ್ನು ಹರಡುವವರು ಯಾರು? ಅವರ ಉದ್ದೇಶವಾದರೂ ಏನು? ಎಂಬ ಪ್ರಶ್ನೆಗೆ ಒಮ್ಮೆ ನಕ್ಕು ಸುಮ್ಮನಾದ ರಂಗನಾಥ್, ಮಾತು ಮುಂದುವರಿಸಿ "ಸದ್ಯಕ್ಕಂತೂ ಇಲ್ಲಿದ್ದೇನೆ ಶಾಮ್" ಎಂದು ಮೊಬೈಲ್ ಸಂಭಾಷಣೆ ಮುಗಿಸಿದರು.

ಸುದ್ದಿ ಸ್ವಾರಸ್ಯಗಳು ಹೇಗಿರುತ್ತವೆಂದರೆ ನಿನ್ನೆಯೂ ಇಂಥದೊಂದು ವದಂತಿ ಏಷಿಯಾದ್ಯಂತ ಹರಡಿತ್ತು. ರೇಡಿಯೇಷನ್ ಎಫೆಕ್ಟ್ ಶುರುವಾಗುತ್ತಿದೆ, ಇದರಿಂದ ಭಾರಿ ಭಾರಿ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳುವ ಎಸ್ಎಂಎಸ್ ಸುದ್ದಿಗಳು ಫೋನಿನಿಂದ ಫೋನಿಗೆ ತಲುಪಿ ಅನೇಕರಿಗೆ ಕಳವಳಕ್ಕೆ ಕಾರಣೀಭೂತವಾಗಿತ್ತು. ಆದರೆ, ಬುಧವಾರ ಮಧ್ಯಾನ್ಹ ಸ್ವತಃ ಬಿಬಿಸಿ ಸಂಸ್ಥೆಯೇ ಒಂದು ಹೇಳಿಕೆಯನ್ನು ತನ್ನ ವೆಬ್ ಸೈಟಿನಲ್ಲಿ ಪ್ರಕಟಿಸಿ ವದಂತಿಯನ್ನು ಸಾರಾಸಗಟಾಗಿ ತಳ್ಳಿಹಾಕಿತ್ತು. ಅದು ಹೀಗಿತ್ತು: BBC Disowns Radiation Text Message, Calls it Fake.

English summary
Suvarna News 24/7 Channel chief editor H R Ranganath refutes his resignation news published on mediamana blog spot dot com. He has termed the blog news post as "fake".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X