ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸವಣೂರು ಭ್ರಷ್ಟ ಇಂಜಿನಿಯರ್ ಲೋಕಾಯುಕ್ತ ಬಲೆಗೆ

By Mahesh
|
Google Oneindia Kannada News

Savanur junior engineer held by Lokayukta
ಸವಣೂರು, ಮಾ. 17: ಪುರಸಭೆಯ ವತಿಯಿಂದ ಪಾವತಿಸಬೇಕಾಗಿರುವ ಮೊತ್ತದ ದಾಖಲೆಗಳನ್ನು ಹಾಜರುಪಡಿಸಲು, ಲಂಚವನ್ನು ಪಡೆದ ಕಿರಿಯ ಅಭಿಯಂತರ ಮಾನಸಿಂಗ್ ರಾಠೋಡ್ ಬುಧವಾರದಂದು ಲೋಕಾಯುಕ್ತರ ಕೈವಶರಾಗಿದ್ದಾರೆ.

ಸವಣೂರಿನ ಅಂಬೇಡ್ಕರ್ ಓಣಿಯ ದೇವಸ್ಥಾನದ ಕಟ್ಟೆ ನಿರ್ಮಾಣವನ್ನು 27,000 ರೂಗಳ ಒಟ್ಟು ಮೊತ್ತದಲ್ಲಿ ನಿರ್ಮಿಸಲಾಗಿದೆ. ಅದರ ಬಿಲ್ ಪಾವತಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಮುಂದುವರೆಸಲು ಪುರಸಭೆಯ ಕಿರಿಯ ಅಭಿಯಂತರಾದ ಮಾನಸಿಂಗ್ ರಾಠೋಡ್ 2000/- ರೂಗಳನ್ನು ಫಿರ್ಯಾದಿ ಅರಬ್‌ಬೇಗ್ ಹಯಾತ್‌ಬೇಗ್ ಮಿರ್ಜಾ ಅವರ ಬಳಿ ಅಪೇಕ್ಷಿಸಿದ್ದಾರೆ.

ತಮಗೆ ಈ ಬಗ್ಗೆ ಮಾಹಿತಿ ನೀಡಿದ್ದ ಫಿರ್ಯಾದಿ ಮಿರ್ಜಾ ಲಂಚದ ಹಣವನ್ನು ನೀಡುತ್ತಿದ್ದ ಸಂದರ್ಭದಲ್ಲಿ ಈ ದಾಳಿ ಮಾಡಲಾಗಿದೆ. ಪುರಸಭೆಯ ಕಿರಿಯ ಅಭಿಯಂತರರನ್ನು ಲಂಚದ ಹಣದೊಂದಿಗೆ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ದಾವಣಗೆರೆ ಲೋಕಾಯುಕ್ತ ವರಿಷ್ಠಾಧಿಕಾರಿ ಎಸ್.ಎಫ್ ಕಂಬಾರ, ಡಿಎಸ್‌ಪಿ ಎಮ್.ಬಿ ಪಾಟೀಲ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಹಾವೇರಿಯ ಪಿಐ ಎಮ್.ಕೆ ಗಂಗಲ, ಬಿ.ಸಿ ಉಮಾಪತಿ ಸಿಬ್ಬಂದಿಗಳಾದ ಎ.ಕೆ ಕುಲಕರ್ಣಿ, ಎಸ್.ಡಿ ಪಾಲೇಗೊಂದಿ, ಎಮ್.ಡಿ ಹಿರೇಮಠ, ಕೆ.ಎಮ್ ಹಿರೇಮಠ, ಎಸ್.ಎಮ್ ಹಿರೇಮಠ, ಮದರಕಂಡಿ ಮುಂತಾದವರು ದಾಳಿಯಲ್ಲಿ ಪಾಲ್ಗೊಂಡಿದ್ದರು.

English summary
Haveri district Savanur City Corporation junior engineer Mansingh rathod has been held by Davangere Lokayukta SF Kambar lead team. Mansingh allegedly was receiving bribe in connection to building a temple in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X