ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕ್ ಆಫ್ ಅಮೆರಿಕಾ ಅಂಬಾರಿಯೇರಿದ ಮುಖೇಶ್

By Prasad
|
Google Oneindia Kannada News

Mukhesh Ambani joins BofA
ನ್ಯೂಯಾರ್ಕ್, ಮಾ. 17 : ಫೋರ್ಬ್ಸ್ ಸಂಸ್ಥೆ ಪ್ರಕಟಿಸಿರುವ 2011ರ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ರಿಲಾಯನ್ಸ್ ನ ಮುಖ್ಯಸ್ಥ ಮುಖೇಶ್ ಅಂಬಾನಿ ಅವರು ಬ್ಯಾಂಕ್ ಆಫ್ ಅಮೆರಿಕಾದ ನಿರ್ದೇಶಕ ಮಂಡಳಿಯಲ್ಲಿ ಸ್ಥಾನ ಗಳಿಸಿದ್ದು, ವಿಶ್ವದಲ್ಲಿ ಭಾರತದ ಪತಾಕೆಯನ್ನು ಮತ್ತೊಮ್ಮೆ ಹಾರಿಸಿದ್ದಾರೆ.

ಅಮೆರಿಕಾದ ಬ್ಯಾಂಕ್ ಗಳಲ್ಲಿಯೇ ಬ್ಯಾಂಕ್ ಆಫ್ ಅಮೆರಿಕಾ ಅತೀ ದೊಡ್ಡದು. ಇಂಥ ಶ್ರೀಮಂತ ಬ್ಯಾಂಕ್ ನ ನಿರ್ದೇಶಕ ಮಂಡಳಿಗೆ ಆಯ್ಕೆಯಾಗಿರುವ ಅಮೆರಿಕೇತರರಲ್ಲಿ ಮುಖೇಶ್ ಅಂಬಾನಿಯೇ ಮೊದಲಿಗರು. ಮುಂಬರುವ ವಾರ್ಷಿಕ ಚುನಾವಣೆಯಲ್ಲಿ ಮುಖೇಶ್ ಅಂಬಾನಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

ಬ್ಯಾಂಕ್ ಆಫ್ ಅಮೆರಿಕಾದ ಚೇರ್ಮನ್ ಚಾರ್ಲ್ಸ್ ಓ ಹಾಲಿಡೆ ಅವರು ಅಂಬಾನಿಯ ಸೇರ್ಪಡೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದು, "ಜಾಗತಿಕ ದೃಷ್ಟಿಕೋನವುಳ್ಳ ಮುಖೇಶ್ ಅಂಬಾನಿಯವರ ಉಪಸ್ಥಿತಿಯಿಂದ ಬ್ಯಾಂಕ್ ನ ಶೇರುದಾರರು ಪ್ರಯೋಜನ ಪಡೆಯಲಿದ್ದಾರೆ. ಇಂಧನ, ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಕ್ಷೇತ್ರಗಳ ನಿರ್ವಹಣೆಯಲ್ಲಿ ಅವರು ಅಸಾಧ್ಯ ನೈಪುಣ್ಯತೆ ಹೊಂದಿದ್ದಾರೆ" ಎಂದು ಅಂಬಾನಿಯನ್ನು ಹೊಗಳಿ ಅಂಬಾರಿಯ ಮೇಲೆ ಕುಳಿಸಿದ್ದಾರೆ.

ನಿರ್ದೇಶಕ ಮಂಡಳಿಗೆ ಆಯ್ಕೆಯಾಗಿದ್ದಕ್ಕೆ ಪ್ರತಿತ್ರಿಯಿಸಿರುವ ಮುಖೇಶ್, ನನಗೆ ಅತೀವ ಸಂತಸವಾಗಿದೆ. ವಿಶ್ವದ ಅತೀ ದೊಡ್ಡ ಹಣಕಾಸು ಸಂಸ್ಥೆಯ ಮಂಡಳಿಗೆ ಅಮೆರಿಕೇತರ ನಿರ್ದೇಶಕನಾಗಿ ಆಯ್ಕೆಯಾಗಿದ್ದು ನನಗೆ ದೊರೆತಿರುವ ವಿಶೇಷ ಗೌರವ. ಬ್ಯಾಂಕ್ ಆಫ್ ಅಮೆರಿಕಾದ ಬೆಳವಣಿಗೆಗೆ ನನ್ನ ಕೊಡುಗೆ ನೀಡಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.

ಈ ಗೌರವದ ಹೊರತಾಗಿ ಮುಖೇಶ್ ಅಂಬಾನಿಯವರು, ಭಾರತದ ಪ್ರಧಾನಿ ವ್ಯಾಪಾರ ಮತ್ತು ಉದ್ಯಮ ಮಂಡಳಿಯ ಸದಸ್ಯರಾಗಿದ್ದಾರೆ. ಇಂಡೋ-ಅಮೆರಿಕಾ ಸಿಇಓ ಫೋರಂನ ಸಕ್ರಿಯ ಸದಸ್ಯರೂ ಅವರಿಗಾದ್ದಾರೆ. ಜಪಾನ್-ಇಂಡಿಯಾ ಬಿಸಿನೆಸ್ ಲೀಡರ್ಸ್ ಫೋರಂನ ಅಧ್ಯಕ್ಷ ಸ್ಥಾನವನ್ನೂ ಅವರು ಪಡೆದಿದ್ದಾರೆ. ಜೊತೆಗೆ ಇಂಡೋ-ರಷ್ಯಾ ಸಿಇಓ ಕೌನ್ಸಿಲ್ ನ ಅಧ್ಯಕ್ಷರೂ ಆಗಿದ್ದಾರೆ.

English summary
Reliance chief Mukhesh Ambani joins Bank of America in US as a director on board. Mukhesh Ambani, the 9th richest person the world according to Forbes list, is the only and first non-american to join the board of directors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X