ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಡಿಕೆ ಆಗ್ರಹಿಸಿ ವೈಶ್ಯ ಬ್ಯಾಂಕ್ ನೌಕರರ ಹರತಾಳ

By * ರೋಹಿಣಿ ಬಳ್ಳಾರಿ
|
Google Oneindia Kannada News

ING Vysya Bank employees protest in Bellary
ಬಳ್ಳಾರಿ, ಮಾ. 17 : ಕೈಗಾರಿಕಾ ನಿಯಮದಂತೆ ಸಿಬ್ಬಂದಿ ನೇಮಕ, ಅರೆಕಾಲಿಕ ನೌಕರರ ಸೇವೆ ಕಾಯಂ, ನಿವೃತ್ತಿ ವಯಸ್ಸು ಏರಿಕೆ ಮತ್ತು ಅರ್ಹರಿಗೆ ಬಡ್ತಿ ಮುಂತಾದ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಐಎನ್‌ಜಿ ವೈಶ್ಯ ಬ್ಯಾಂಕ್ ನೌಕರರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಬಳ್ಳಾರಿ ಜಿಲ್ಲಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್ ಅಧ್ಯಕ್ಷ ಸತ್ಯನಾರಾಯಣ ಅವರು ಮಾತನಾಡಿ, ಅಖಿಲ ಭಾರತ ಐಎನ್‌ಜಿ ವೈಶ್ಯ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆದಿದೆ. ಬ್ಯಾಂಕ್‌ನ ಆಡಳಿತ ಮಂಡಲಿ ನೌಕರರ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿದರು.

ಕೈಗಾರಿಕಾ ಸೇವಾ ನಿಯಮಗಳು ಅನ್ವಯ ಆಗುವಂತೆ ಬ್ಯಾಂಕ್ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು. ಹೊರಗುತ್ತಿಗೆ ಮತ್ತು ಗುತ್ತಿಗೆ ಆಧಾರದ ನೇಮಕಾತಿ ಪ್ರಕ್ರಿಯೆಗಳನ್ನು ಕೂಡಲೇ ತಡೆಯಬೇಕು. ನೌಕರರ ನಿವೃತ್ತಿ ವಯಸ್ಸನ್ನು 60ಕ್ಕೆ ಏರಿಸಬೇಕು. ಅರ್ಹರಿಗೆ ಬಡ್ತಿ ನೀಡಬೇಕು ಎಂದು ಅವರು ಆಗ್ರಹಿಸಿದರು.

ಅರೆಕಾಲಿಕ ನೌಕರರ ವೇತನವನ್ನು ಪುನರ್ ನಿಗದಿಗೊಳಿಸಬೇಕು. ಅರೆಕಾಲಿಕ ನೌಕರರ ಸೇವೆಯನ್ನು ಖಾಯಂ ಮಾಡಬೇಕು. ಅರ್ಹ ನೌಕರರಿಗೆ ಬಡ್ತಿ ನೀಡಬೇಕು. ದುಡಿಯುವ ವರ್ಗಕ್ಕೆ ನ್ಯಾಯ ಒದಗಿಸುವ ರೀತಿಯಲ್ಲಿ ನೀತಿ, ನಿಯಮಗಳನ್ನು ರೂಪಿಸಿ ಜಾರಿ ಮಾಡಬೇಕು. ಬ್ಯಾಂಕ್‌ನ ಆಡಳಿತ ಮಂಡಲಿ ನೌಕರರ ಪರವಾದ ನಿಲುವು ತಾಳಬೇಕು ಎಂದರು.

ಬ್ಯಾಂಕ್ ಯೂನಿಯನ್‌ನ ಮುಖಂಡರಾದ ಬಿ. ವಾಸು, ಆರ್.ಜಿ. ಶೆಟ್ಟರ್, ನಾಗರಾಜ್, ಜೆ.ಯೋಗೇಂದ್ರ, ಶಿವರಾಜ್, ಆನಂದತೀರ್ಥ, ಹರಿನಾಥರಾವ್ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

English summary
ING Vysya Bank employees protest in Bellary demanding various demands including increase in retirement age, confirmation of temporary employees, increment to eligible etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X