ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂಪರ್ ಮೂನ್ ನೋಡಿ ಭಯಬೀಳಬೇಡಿ

By * ಜಿ ಶ್ರೀಧರ ರಾವ್, ಉಡುಪಿ
|
Google Oneindia Kannada News

ಮಾರ್ಚ್ 19ರಂದು ಸೂಪರ್ ಮೂನ್ ಅಂದರೆ ಚಂದ್ರ ಸಾಮಾನ್ಯ ಗಾತ್ರಕ್ಕಿಂತ ದೊಡ್ಡ ಗಾತ್ರದಲ್ಲಿ ಕಂಡುಬರುತ್ತಿರುವುದು ಅನೇಕರಲ್ಲಿ ಪುಳಕ ಮತ್ತು ಹಲವರಲ್ಲಿ ನಡುಕವನ್ನು ಸೃಷ್ಟಿಸಿದೆ. ಗುರುತ್ವಾಕರ್ಷಣ ಬಲದಿಂದ ಭೂಮಿಯ ಮೇಲೆ ಅತೀತ ಪರಿಣಾಮಗಳು ಸಂಭವಿಸಲಿವೆ ಎಂದು ಆತಂಕವನ್ನೂ ಹುಟ್ಟುಹಾಕಲಾಗಿದೆ. ಆದರೆ, ಇದೊಂದು ಸಹಜ ಕ್ರಿಯೆ, ಯಾವುದೇ ಭಯಪಡುವ ಪ್ರಮೇಯವೇ ಇಲ್ಲ ಎಂದು ವಿಜ್ಞಾನಿಗಳು ಜನರಿಗೆ ಅಭಯ ನೀಡಿದ್ದಾರೆ. ಈ ವಿದ್ಯಮಾನದಿಂದ ಏನಾಗಬಹುದು ಎಂಬ ಬಗ್ಗೆ ಲೇಖಕರು ಬೆಳದಿಂಗಳು ಚೆಲ್ಲಿದ್ದಾರೆ.

ಸೂರ್ಯ ಸದಾ ತನ್ನ ಕಕ್ಷೆಯಲ್ಲಿ ತಿರುಗುತ್ತದೆ. ಭೂಮಿ ತನ್ನ ಕಕ್ಷೆಯಲ್ಲಿ ತಿರುಗುತ್ತಾ ಸೂರ್ಯನಿಗೆ ಸುತ್ತು ಬರುತ್ತಿರುತ್ತದೆ. ಚಂದ್ರ ನಮ್ಮ ಭೂಮಿಗೆ ಸುತ್ತು ಬರುತ್ತಾ ಭೂಮಿಯೊಂದಿಗೆ ಸೂರ್ಯನಿಗೂ ಸುತ್ತು ಬರುತ್ತಿರುತ್ತದೆ. ಹುಣ್ಣಿಮೆ ದಿನ ಸೂರ್ಯ-ಚಂದ್ರ ಭೂಮಿಯ ವಿರುದ್ಧ ದಿಕ್ಕಿನಲ್ಲಿ ಇರುತ್ತದೆ. ಆಗ ಅವುಗಳ ಆಕರ್ಷಣೆಗಳು ಕೂಡಾ ಎದುರು ಬದುರಾಗಿರುತ್ತದೆ. ಅಮಾವಾಸ್ಯೆ ದಿನ ಸೂರ್ಯ- ಚಂದ್ರರು ಭೂಮಿಯ ಒಂದೇ ದಿಕ್ಕಿನಲ್ಲಿರುತ್ತವೆ. ಆಗ ಅವುಗಳ ಆಕರ್ಷಣೆ ಕೂಡ ಭೂಮಿಗೆ ಒಂದೇ ದಿಕ್ಕಿನಲ್ಲಿರುತ್ತವೆ.

ಈ ಒಂದು ಕಾರಣದಿಂದ ಸಮುದ್ರ ದಡದಲ್ಲಿ ಹೊಳೆ ಮುಂತಾದ ನೀರಿನ ತೊರೆಗಳಲ್ಲಿ ಭರತ-ಇಳಿತ ಉಂಟಾಗುತ್ತದೆ. ಮಾರ್ಚ್ 19ರಂದು ಹುಣ್ಣಿಮೆ ಚಂದ್ರ ಭೂಮಿಗೆ ಅತೀ ಸಮೀಪ ಬರುತ್ತದೆ. ಅದರ ಆಕರ್ಷಣೆಯ ಅಧಿಕ ಆದುದರಿಂದ ಎಲ್ಲಾ ಕಡೆ ಭರತ ಇಳಿತದಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬರಬಹುದು. ಆ ಸಮಯದಲ್ಲಿ ಹೊಳೆಗಳಿಗೆ ಇಳಿಯುವಾಗ ಜಾಗ್ರತೆ ವಹಿಸುವುದು ಉತ್ತಮ. ಹೆದರಿಕೆಯ ಅಗತ್ಯ ಇಲ್ಲ.

ಅರಬ್ಬಿ ಸಮುದ್ರದಲ್ಲಿ ಅಥವಾ ಉತ್ತರ ಹಿಂದೂ ಮಹಾಸಾಗರದಲ್ಲಿ ಪ್ರಬಲ ಭೂಕಂಪ ಆದರೆ ಮಾತ್ರ ನಮ್ಮ ಪಶ್ಚಿಮ ಕರಾವಳಿಯಲ್ಲಿ ಸುನಾಮಿ ಏಳಬಹುದು. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಭಯ ಅನವಶ್ಯಕ. ಇಂದು ಜಪಾನ್ ಪರಿಸರ ನಾಶವಾಗುತ್ತಾ ಹೋದರೆ ನಾಳೆ ಜಗತ್ತಿನ ಎಲ್ಲೆಲ್ಲೂ ಸುನಾಮಿ ಸಂಭವಿಸಬಹುದು. ಸದ್ಯದ ಪರಿಸ್ಥಿತಿಯಲ್ಲಿ ಭಯದ ಅವಶ್ಯಕತೆ ಇಲ್ಲ.

1955, 1974, 1992 ಮತ್ತು 2005ರಲ್ಲಿ ಚಂದ್ರ ಹೀಗೆ ಭೂಮಿಯ ಹತ್ತಿರಕ್ಕೆ (perigee) ಬಂದಿದ್ದ. ಆಗೇನೂ ಅಂಥಾದ್ದು ಆಗಿರಲಿಲ್ಲ. ಆದರೆ ಈ ಬಾರಿ...? ಭಾರಿ ಮಳೆ, ಭೂಕಂಪ, ಅಗ್ನಿಪರ್ವತಗಳ ರುದ್ರ ನರ್ತನ ಮುಂತಾದ ಮಹಾ ನೈಸರ್ಗಿಕ ವಿಕೋಪಗಳು ಮುಂದಿನ ಶನಿವಾರ ಸಂಭವಿಸಲಿವೆಯೇ? ಕಾದು ನೋಡೋಣ.

English summary
Aftermath of Japan Tsunami many claim that huge storms, earthquakes, tsunami and other natural disasters will occur on Saturday, Mar 19. Extreme Super Moon is natural cosmic event people can enjoy watching it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X