ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಕಿರಣ ಅನಾಹುತ ಎಸ್ಎಂಎಸ್ ಬೋಗಸ್: ಬಿಬಿಸಿ

By Mahesh
|
Google Oneindia Kannada News

ಟೋಕಿಯೊ, ಮಾ.16: ಫುಕುಶಿಮಾದ ದೈಚಿ ಪರಮಾಣು ಸ್ಥಾವರದಿಂದ ವಿಕಿರಣ ಸೋರಿಕೆಯಾಗಿದೆ, ವಿಷ ಗಾಳಿ ಎಲ್ಲೆಡೆ ಹರಡುತ್ತಿದೆ ಎಂಬ ನಕಲಿ ಎಚ್ಚರಿಕೆ ಸಂದೇಶವೊಂದು ಏಷ್ಯಾದಾದ್ಯಂತ ಜನರನ್ನು ಗಾಬರಿಗೊಳಿಸಿತ್ತು. ಬಿಬಿಸಿಯಿಂದ ಬಂದಿದೆ ಎನ್ನಲಾದ ಈ ಎಸ್ಸೆಮ್ಮೆಸ್ ಸಂದೇಶ ಕಳೆದೆರಡು ದಿನ ಏಷ್ಯನ್ ರಾಷ್ಟ್ರಗಳ ಜನರ ನಿದ್ದೆಗೆಡಿಸಿತ್ತು. ಆದರೆ ಬಿಬಿಸಿ ಅಂತಹ ಸಂದೇಶ ಕಳುಸಿಲ್ಲ.

ವಿಕಿರಣದ ದುಷ್ಪರಿಣಾಮದ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಎಲ್ಲರಿಗೂ ಆಪತ್ತು ಕಾದಿದೆ ಎಂದು ಆ ಸಂದೇಶದಲ್ಲಿ ಹೇಳಲಾಗಿತ್ತು. ಈ ನಕಲಿ ಸಂದೇಶ ಫಿಲಿಪ್ಪೀನ್ಸ್‌ನಲ್ಲಿ ಬಹಳ ಅವಾಂತರವನ್ನು ಸೃಷ್ಟಿಸಿತ್ತು. ಈ ಗಾಳಿಸುದ್ದಿ ಹರಡಿದ ಬಳಿಕ ಕಾರ್ಮಿಕರು ಹಾಗೂ ಶಾಲಾಮಕ್ಕಳನ್ನು ಮನೆಗೆ ಕಳುಹಿಸಲಾಗಿತ್ತು. ಮಾಧ್ಯಮ ವರದಿಗಳನ್ನು ಕಂಡ ನಂತರ ಫಿಲಿಪ್ಪೀನ್ಸ್ ಸರ್ಕಾರವು ಇದನ್ನು ನಿರಾಕರಿಸಿ ಅಧಿಕೃತ ಘೋಷಣೆ ಹೊರಡಿಸಬೇಕಾಯಿತು.

ಜಪಾನ್‌ನಲ್ಲಿ ಸಂಭವಿಸಿರುವಂತಹ ವಿಕೋಪಗಳ ಬಳಿಕ ಕೆಲವು ಕಿಡಿಗೇಡಿಗಳು ಇಂತಹ ಎಸ್ಸೆಮ್ಮೆಸ್ ಹಾಗೂ ಇ-ಮೇಲ್ ಸಂದೇಶಗಳನ್ನು ಕಳುಹಿಸಿ ಜನರನ್ನು ಮೂರ್ಖರನ್ನಾಗಿಸಿ ಗಾಬರಿಗೊಳ್ಳುವಂತೆ ಮಾಡುವುದು ಸಾಧಾರಣವಾಗಿದೆ. ಜಪಾನಿನ ಭೂಕಂಪ ಹಾಗೂ ಸುನಾಮಿಯ ಕುರಿತು ನಕಲಿ ಸಂದೇಶಗಳ ಮೂಲಕ ಹಾಗೂ ನಕಲಿ ಆಂಟಿ ವೈರಸ್‌ಗಳ ಮೂಲಕ ಇ-ಮೇಲ್ ಅವ್ಯವಹಾರ ನಡೆಸುವ ಸಾಧ್ಯತೆಯ ವಿರುದ್ಧ ಅಮೆರಿಕದ ಕಂಪ್ಯೂಟರ್ ತುರ್ತು ಸಿದ್ಧತಾ ತಂಡUS Computer Emergency Readiness Team (US-CERT) ಕಂಪ್ಯೂಟರ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.

English summary
Japan Tsunami 2011 : SMS message from BBC circulating around Asian counties has found to be fake. BBC has never issued such flash message related to Tsunami. Hoax message created panic in Philippines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X