ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಣ ಅಗೆಯುವುದನ್ನು ನಿಲ್ಲಿಸಲಿರುವ ರೆಡ್ಡಿ

By Srinath
|
Google Oneindia Kannada News

Reddy to Become Public Servant
ಬೆಂಗಳೂರು, ಮಾ. 16: ಬಿಸಿನೆಸ್ ಮಾಡೋದಕ್ಕಿಂತ ಅದರಿಂದ ಸೃಷ್ಟಿಯಾಗುವ ವಿವಾದಗಳು, ಅವಾಂತರಗಳಿಂದ ನನಗಂತೂ ಸಾಕಾಗಿದೆ. ಏನು ಮಾಡಿದರೂ ಪ್ರತಿಪಕ್ಷಗಳು ವಿವಾದದ ಗುಡ್ಡೆ ಹಾಕುತ್ತವೆ. ಈ ಕಾರಣಕ್ಕಾಗಿ ಹಂತಹಂತವಾಗಿ ಬಿಸಿನೆಸ್-ನಿಂದ ಹಂತಹಂತವಾಗಿ ದೂರ ಸರಿಯುತ್ತೇನೆ ಎಂದು ಗಣಿ ಉದ್ಯಮದಿಂದಲೇ ಖ್ಯಾತರಾಗಿರುವ ಬಳ್ಳಾರಿ ಗಣಿ ಧಣಿ, ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ ತಣ್ಣಗೆ ಹೇಳಿದ್ದಾರೆ. ವಿಧಾನಪರಿಷತ್-ನಲ್ಲಿ ಸ್ವತಃ ಜನಾರೆಡ್ಡಿ ಅವರೇ ಮಂಗಳವಾರ ಈ ನಿರ್ಧಾರ ಪ್ರಕಟಿಸಿದ್ದಾರೆ.

ಹಾಗಾದರೆ ಮುಂದೇನು!?
ಏನೂ ಇಲ್ಲ. ಸಮಾಜ ಸೇವೆ...ಕೆರೆಯ ನೀರನು ಕೆರೆಗೆ ಚೆಲ್ಲಿ...ಹೌದಾ, ಇವರಿಗೆ ಪ್ರೇರಣೆಯಾಗಿದ್ದಾದರೂ ಯಾರು ಎಂದರೆ ಅಲ್ಲೇ ಎದುರಿಗಿದ್ದ ಹಿರಿಯ ರಾಜಕಾರಣಿ ಎಂ.ಸಿ. ನಾಣಯ್ಯ! 'ನಾಣಯ್ಯ ಅಂತಹ ಸಜನರಿಂದ ಪ್ರೇರಣೆ ಪಡೆದು ಸಮಾಜ ಸೇವೆಗೆ ಮುಂದಾಗುತ್ತಿದ್ದೇನೆ. ಹೀಗಾಗಿ ಇನ್ನು ಮುಂದೆ ಮೇಲ್ಮನೆ ಸದಸ್ಯನಾಗಿ ಸಮಾಜ ಸೇವೆಯನ್ನೇ ಮಾಡುತ್ತೇನೆ' ಎಂದು ರೆಡ್ಡಿ ಘಂಟಾಘೋಷವಾಗಿ ಹೇಳಿದ್ದಾರೆ.

'ನಾನು ಬಳ್ಳಾರಿಯಲ್ಲಿ ದೊಡ್ಡ ಪ್ರಮಾಣದ ಕೈಗಾರಿಕೆ ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದೆ. ಉದ್ಯಮಕ್ಕೆ 35 ಸಾವಿರ ಕೋಟಿ ರುಪಾಯಿ ಸುರಿಯುವ ಚಿಂತನೆಯೂ ಇತ್ತು. ಅದನ್ನು ಈಗಾಗಲೇ 'ಕೈ'ಬಿಟ್ಟಿರುವೆ. ನಿರಂತರ ಆರೋಪ, ಟೀಕೆಯ ಸುರಿಮಳೆಯಾಗುತ್ತಿದೆ. ಇದನ್ನೆಲ್ಲ ಕೇಳಿ ಸಾಕಾಗಿ ಹೋಗಿದೆ. ಇನ್ನಾದರೂ ಅನಗತ್ಯ ವಿವಾದಗಳಿಗೆ ಗುರಿಯಾಗುವುದು ತಪ್ಪಲಿದೆ. ಸಮಾಜ ಸೇವೆ ಕೆಲಸಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುತ್ತೇನೆ' ಎಂದು ಚಿಂತಕರ ಚಾವಡಿ ಎನಿಸಿರುವ ಮೇಲ್ಮನೆಯಲ್ಲಿ ರೆಡ್ಡಿ ತಮ್ಮ ಚಿಂತನೆ ಹರಿಯಬಿಟ್ಟಿದ್ದಾರೆ.
ಒಂದೆಡೆ ಸಿಬಿಐ ದಾಳಿ, ಮತ್ತೊಂದೆಡೆ, ಸುಪ್ರೀಂ ಕೋರ್ಟ್ ಕೆಂಗಣ್ಣಿಗೆ ಗುರಿಯಾಗಿ ರೆಡ್ಡಿ ಘಾಸಿಗೊಂಡಿದ್ದಾರೆ. ಅತ್ತ ಆಂಧ್ರ ಪ್ರದೇಶ ಸರಕಾರದ ಜತೆಗಿನ ುತ್ತಮ ಬಾಂಧವ್ಯವೂ ಕಡಿತಗೊಂಡ ಹಿನ್ನೆಲೆಯಲ್ಲಿ ರೆಡ್ಡಿಗೆ ಹಲವಾರು ಸಂಕಷ್ಟಗಳು ಬಾಧಿಸುತ್ತಿವೆ ಎನ್ನಲಾಗಿದೆ.

English summary
Karnataka Minister for Tourism and Mining Janardhana Reddy has declared that he would stop digging Bellary earth for Money. He also made a ponit clear that he would give up his career as a Mining industrialist for good. Reddy wants to lead life as public servant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X