ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿ ಜಿಂದಾಲ್ ಮೇಲೆ ಆದಾಯ ತೆರಿಗೆ ದಾಳಿ

By * ರೋಹಿಣಿ ಬಳ್ಳಾರಿ
|
Google Oneindia Kannada News

IT raid on Jindal steel
ಬಳ್ಳಾರಿ, ಮಾ. 16 : ಗಣಿಗದ್ದಲ ಮತ್ತೊಮ್ಮೆ ಧೂಳೆಬ್ಬಿಸಿದೆ. ರಾಜ್ಯ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಗಣಿ ಗದ್ದಲ ಕೇಳಲು ಕಾರಣವಾಗಿರುವ ಜಿಂದಾಲ್ ಸಮೂಹ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪ್ರೇರಣಾ ಟ್ರಸ್ಟಿಗೆ ಜಿಂದಾಲ್ ಸ್ಟೀಲ್ ಮತ್ತಿತರ ಸಂಸ್ಥೆಗಳಿಂದ 27.18 ಕೋಟಿ ರು. ದೇಣಿಗೆ ಸಂದಾಯವಾಗಿದೆ.

ಜಿಂದಾಲ್‌ನ ತೋರಣಗಲ್ಲು ಜೆಎಸ್‌ಡಬ್ಲ್ಯು ಘಟಕದ ಮಾನವಸಂಪನ್ಮೂಲ ವಿಭಾಗ, ಲೆಕ್ಕಚಾರ ವಿಭಾಗ ಸೇರಿ ಇನ್ನಿತರೆ ವಿಭಾಗಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಬುಧವಾರ ಬೆಳಗ್ಗೆಯಿಂದಲೇ ದಾಳಿ ನಡೆಸಿದ್ದು, ತನಿಖೆ ಪ್ರಾರಂಭಿಸಿದ್ದಾರೆ.

ಈ ದಾಳಿಗೆ ಪೂರಕವಾಗಿ ಸೌತ್ ವೆಸ್ಟ್ ಮೈನಿಂಗ್ ಕಂಪನಿ, ತಿಮ್ಮಪ್ಪನಗುಡ್ಡ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಾ ಜಿಂದಾಲ್ ಸಮೂಹಗಳ ಜೊತೆ ವ್ಯವಹಾರಿಕ ಸಂಪರ್ಕ ಹೊಂದಿರುವ ಎಂಎಂಎಲ್ ಹಾಗೂ ಇನ್ನಿತರೆ ಗಣಿ ಕಂಪನಿಗಳ ಮೇಲೆ ಕೂಡ ಅಧಿಕಾರಿಗಳು ದಾಳಿ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ. ಇದೇ ರೀತಿಯಲ್ಲಿ ಜಿಂದಾಲ್ ಗ್ರೂಪ್‌ನ ಬೆಂಗಳೂರು ಮತ್ತು ಬಾಂಬೆ ಘಟಕಗಳ ಮೇಲೆ ಕೂಡ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ, ತನಿಖೆ ನಡೆಸಿದ್ದಾರೆ.

ಆದರೆ, ತನಿಖೆಯ ಮಾಹಿತಿ ಸ್ಪಷ್ಟವಾಗಿ ಲಭ್ಯವಾಗುತ್ತಿಲ್ಲ. ಜಿಂದಾಲ್‌ನ ಸಿಬ್ಬಂದಿ, ಸಮೂಹದ ಎಲ್ಲಾ ಕಚೇರಿಗಳ ಮೇಲೆ ದಾಳಿ ನಡೆದಿದೆ. ಕೈಗಾರಿಕಾ ಉತ್ಪಾದನಾ ಘಟಕಗಳು ಎಂದಿನಂತೆ ನಡೆಯುತ್ತಿವೆ. ಕಂಪನಿಗಳ ಚಟುವಟಿಕೆಗಳು ಯಥಾರೀತಿಯಲ್ಲಿ ನಡೆಯುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.

ಪ್ರೇರಣ' ಟ್ರಸ್ಟ್‌ಗೆ ದೇಣಿಗೆ ನೀಡಿರುವ ಪಟ್ಟಿಯಲ್ಲಿ ಜೆಎಸ್‌ಡಬ್ಲು ಕಂಪನಿ ಕೂಡ ಸೇರಿದೆ. ಈ ವಿಚಾರ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ತೀವ್ರ ಚರ್ಚೆಗೆ ಬಂದಿದೆ. ಈ ಹಿನ್ನಲೆಯಲ್ಲಿ ಜಿಂದಾಲ್ ಸಮೂಹ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ದಾಳಿ ನಡೆದಿದೆ ಎಂದೇ ಹೇಳಲಾಗಿದೆ.

English summary
Income tax department has raided Jindal group of companies in Bellary on Mar 16. It is alleged that Jindal steels has donated Rs 27.18 cr along with other companies to Prerana trust belonging to BS Yeddyurappa and his son-in-law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X