ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐದು ಜಿಲ್ಲೆಗಳಲ್ಲಿ ಡೆಂಗ್ಯೂ ಪರೀಕ್ಷಾ ಕೇಂದ್ರ

By Srinath
|
Google Oneindia Kannada News

Dengue Check-up Centres
ಬೆಂಗಳೂರು, ಮಾರ್ಚ್ 16 : ಬೇಸಿಗೆ ಈ ಬಾರಿಯೂ ಜೋರಾಗಿಯೇ ಇದೆ. ಡೆಂಗ್ಯೂ, ಎಚ್1ಎನ್1 ಜ್ವರವೂ ಲಗ್ಗೆಯಿಡುವ ಸಾಧ್ಯತೆ ಇದೆ. ಈ ಮಾರಿಯನ್ನು ಮಟ್ಟ ಹಾಕಲು ಸರಕಾರಿ ಆಸ್ಪತ್ರೆಗಳು ಸನ್ನದ್ಧವಾಗಿವೆ. ವಿಶೇಷವಾಗಿ ಐದು ಜಿಲ್ಲೆಗಳಲ್ಲಿ ಡೆಂಗ್ಯೂ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ವಿ. ಎಸ್. ಆಚಾರ್ಯ ಅವರು ವಿಧಾನ ಪರಿಷತ್-ನಲ್ಲಿ ಹೇಳಿದ್ದಾರೆ. ತುಮಕೂರು, ಮೈಸೂರು, ರಾಯಚೂರು, ಬೀದರ್ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಡೆಂಗ್ಯೂ ಪರೀಕ್ಷಾ ಕೇಂದ್ರಗಳು ತಲೆಯೆತ್ತಲಿವೆ.

ಈ ಮಧ್ಯೆ, ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಸಾರ್ವಜನಿಕರಲ್ಲಿ ವ್ಯಾಪಕ ಭಯ ಹುಟ್ಟಿಸಿದ್ದ ಎಚ್1ಎನ್1(Influenza A (H1N1) virus) ಮಾರಿಗೆ ಕಡಿವಾಣ ಹಾಕಲು ಸರಕಾರ ಬದ್ಧವಾಗಿದೆ. ಈಗಾಗಲೇ ರಾಜ್ಯದ ನಾಲ್ಕು ಕೇಂದ್ರಗಳಲ್ಲಿ ಎಚ್1ಎನ್1 ಮಾದರಿಗಳ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಎರಡು ಸರಕಾರಿ, ಇನ್ನೆರಡು ಖಾಸಗಿ ಆಸ್ಪತ್ರೆಗಳಲ್ಲಿವೆ ಎಂದು ಸಚಿವರು ಹೇಳಿದ್ದಾರೆ.

ಬೆಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ ಸಾರ್ವಜನಿಕರಲ್ಲಿ ವ್ಯಾಪಕ ಭಯ ಹುಟ್ಟಿಸಿದ್ದ ಎಚ್1ಎನ್1(Influenza A (H1N1) virus) ಮಾರಿಗೆ ಸೂಕ್ತ ಔಷಧಿ ಕೊರತೆಯಿಂದ ಅನೇಕ ಸಾವು ನೋವುಗಳು ಸಂಭವಿಸಿದ್ದವು. ಆದರೆ, ಸರಕಾರ ಈ ವರ್ಷ ಸೋಂಕನ್ನು ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಅಲ್ಲದೇ ಸಾಂಕ್ರಾಮಿಕ ರೋಗ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ತಿಳಿಸಿದರು.

ಬಳ್ಳಾರಿಯ ವಿಮ್ಸ್, ಶಿವಮೊಗ್ಗದ ಮೈಕ್ರೋಬಯಾಲಜಿ ಸೆಂಟರ್, ಮಂಗಳೂರು, ಬೆಳಗಾವಿ, ಹಾಸನ, ಚಿತ್ರದುರ್ಗ ಮತ್ತು ಉಡುಪಿ ಜಿಲ್ಲೆಗಳಲ್ಲಿರುವ ಪರೀಕ್ಷಾ ಕೇಂದ್ರಗಳು, ಕೋಲಾರ ಎಸ್ಸೆನ್ನಾರ್ ಆಸ್ಪತ್ರೆ, ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿಯೂ ಇದರ ಪರೀಕ್ಷೆಗೆ ಅವಕಾಶವಿದೆ ಎಂದು ಅವರು ವಿವರಿಸಿದರು.

English summary
Dengue fever check-up centres will be opened at 5 districts in the State - Mysore, Tumkur, Raichur, Bidar and Bijapur. State Higher Education Minister Dr. V.S. Acharya informed this in Legislative Council on March 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X