ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇತ್ರಾವತಿ ನದಿ ತಿರುವು ಮಾರಕವಲ್ಲ: ಬೊಮ್ಮಾಯಿ

By Mahesh
|
Google Oneindia Kannada News

Minister Basavaraj Bommai
ಬೆಂಗಳೂರು, ಮಾ. 14: ಪರಿಸರಕ್ಕೆ ಹಾನಿಕಾರಕವಾಗಿರುವ ಪ್ರಸ್ತಾವಿತ "ಪಶ್ಚಿಮವಾಹಿನಿ" ಯೋಜನೆ ಅಥವಾ ನೇತ್ರಾವತಿ ನದಿ ತಿರುವು ಯೋಜನೆ ಕೂಡಲೇ ಕೈಬಿಡಬೇಕೆಂದು ಮಂಗಳೂರಿನ ನಾಗರೀಕರು ಸರ್ಕಾರದಲ್ಲಿ ಮನವಿ ಮಾಡಿಕೊಂಡಿದ್ದಕ್ಕೆ ಪ್ರತಿಕ್ರಿಯೆ ಸಿಕ್ಕಿದೆ. ಪಶ್ಚಿಮ ವಾಹಿನಿಯ ಜಲ ಸಂಪತ್ತನ್ನು ಬಯಲು ಸೀಮೆಗೆ ಬಳಕೆ ಉದ್ದೇಶದ ನೇತ್ರಾವತಿ ತಿರುವು ಯೋಜನೆಯಲ್ಲಿ ಪಶ್ಚಿಮ ಘಟ್ಟ ಅದರಲ್ಲೂ ವಿಶೇಷವಾಗಿ ಕರಾವಳಿ ಪ್ರದೇಶದ ಜನರ ಹಿತಕ್ಕೆ ಧಕ್ಕೆ ತರಲ್ಲ ಮತ್ತು ಪರಿಸರನಾಶಕ್ಕೆ ಅವಕಾಶ ನೀಡಲ್ಲ ಎಂದು ಕರ್ನಾಟಕ ಸರ್ಕಾರ ಸ್ಪಷ್ಟಪಡಿಸಿದೆ.

ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ನೀರಾವರಿ ಸಚಿವ ಬಸವರಾಜ್ ಬೊಮ್ಮಾಯಿ, ಈ ಯೋಜನೆಗೆ ಸಂಬಂಧಪಟ್ಟಂತೆ ತಜ್ಞರ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಈ ವಿಚಾರದಲ್ಲಿ ಸರ್ಕಾರ ಕೆ.ಸಿ.ರೆಡ್ಡಿ ವರದಿ ಕಾರ್ಯಗತಗೊಳಿಸಲು ಬದ್ಧವಾಗಿದ್ದು, ಈ ಸಂಬಂಧ ಪ್ರಸಕ್ತ ಬಜೆಟ್‌ನಲ್ಲಿ 200 ಕೋಟಿ ಮೀಸಲಿರಿಸಲಾಗಿದೆ ಎಂದು ಹೇಳಿದರು.

ನದಿ ತಿರುವು ಯೋಜನೆ ಬಗ್ಗೆ ಈಗಾಗಲೇ ಎನ್‌ಆರ್‌ಎಸ್ ಈ ಸರ್ವೆ ನಡೆಸಲಾಗಿದೆ. ಡಿಪಿಆರ್ ಟೆಂಡರ್ ಸಹ ಕರೆಯಲಾಗಿದ್ದು, ಪರಿಸರ ಇಲಾಖೆ ಮತ್ತು ತಜ್ಞರ ಅಭಿಪ್ರಾಯ ಪಡೆದುಕೊಳ್ಳಲಾಗುತ್ತಿದೆ. ಅಲ್ಲದೆ ಎತ್ತಿನಹೊಳೆ ಯೋಜನೆಗೆ ಒಂದಿಂಚು ಭೂಮಿ ಕಬಳಿಸುವುದಿಲ್ಲ ಮತ್ತು ಒಂದು ಗಿಡ ಕೂಡಾ ನಾಶ ಮಾಡುವುದಿಲ್ಲ ಎಂಬ ಭರವಸೆಯನ್ನು ಬೊಮ್ಮಾಯಿ ನೀಡಿದರು.

ಪರಿಸರಕ್ಕೆ ಹಾನಿಕಾರಕವಲ್ಲ: ನದಿ ತಿರುವು ಯೋಜನೆ ವೈಜ್ಞಾನಿಕ ಕ್ರಮದಲ್ಲಿ ನಡೆಯಲಿದ್ದು, ಪರಿಸರ ನಾಶ ಪಡಿಸಲ್ಲ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಈ ಯೋಜನೆ ಜಾರಿಗೆ ಪ್ರಯತ್ನಿಸಲಾಗುವುದು. ಎಲ್ಲ ವಿಚಾರಗಳಲ್ಲಿ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಪರಿಸರ ತಜ್ಞರೊಡನೆ ಚರ್ಚೆ ನಡೆಸಿ ನಂತರ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಜನರ ಹಿತಕ್ಕೆ ಧಕ್ಕೆ ತರುವ ಯೋಜನೆಯನ್ನು ಸರ್ಕಾರ ಕೈಗೊಂಡಿಲ್ಲ ಎಂದು ಸಚಿವ ಬೊಮ್ಮಾಯಿ ಹೇಳಿದರು.

English summary
Karnataka Irrigation Minister Basavaraj Bommai has defended proposed Netravati River Diversion Scheme(Paschima Vahini Scheme). He said it scientific and implemented using latest technology with no damage to ecology, flora, fauna of western ghat. Government will protect Uttar Kannada and Dakshina Kannada ditrict environment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X