ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈಗಾ ಭಯ ಬೇಡ: ನಿರ್ದೇಶಕರ ಅಭಯ

By Srinath
|
Google Oneindia Kannada News

kaiga unit
ಬೆಂಗಳೂರು, ಮಾ. 15: ಒಂದು ವೇಳೆ ಸುನಾಮಿ ಅಪ್ಪಳಿಸಿದರೂ ಕರ್ನಾಟಕದ ಕೈಗಾ ಅಣುಸ್ಥಾವರಕ್ಕೆ ಯಾವುದೇ ಅಪಾಯವಿಲ್ಲ. ಕೈಗಾ ಕೇಂದ್ರವು ಸಮುದ್ರ ತಟದಿಂದ ದೂರವಿದೆ. ಬಹು-ಸ್ತರೀಯ ಸುರಕ್ಷೆ ಮತ್ತು ಪರಿಹಾರ ವ್ಯವಸ್ಥೆಯನ್ನು ಹೊಂದಿದ್ದೇವೆ. ಆದ್ದರಿಂದ ಸುಮಾರು 880 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ನಾಲ್ಕು ಅಣುಶಕ್ತಿ ಉತ್ಪಾದನಾ ಘಟಕಗಳು ಅತ್ಯಂತ ಸುರಕ್ಷಿತವಾಗಿವೆ ಎಂದು ಕೈಗಾ ಸ್ಥಾವರದ ನಿರ್ದೇಶಕ ಜೆ.ಪಿ. ಗುಪ್ತಾ ಅಭಯ ನೀಡಿದ್ದಾರೆ.

ಈ ಮಧ್ಯೆ, ಜಪಾನ್ ಅಣುಸ್ಥಾವರ ದುರಂತದ ಹಿನ್ನೆಲೆಯಲ್ಲಿ ಭಾರತದಲ್ಲಿನ ಎಲ್ಲ ಅಣು ಸ್ಥಾವರಗಳ ಸುರಕ್ಷತೆಯನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ತಕ್ಷಣ ಪರೀಕ್ಷಿಸುವಂತೆ ಪ್ರಧಾನಿ ಮನಮೋಹನ್್ ಸಿಂಗ್ ಅವರು ಮಂಗಳವಾರ ಆದೇಶಿಸಿದಿದ್ದಾರೆ. ಭೂಕಂಪ, ಸುನಾಮಿಯಂತಹ ನೈಸರ್ಗಿಕ ವಿಕೋಪಗಳನ್ನು ತಡೆಯಲು ನಮ್ಮ ಅಣು ಕೇಂದ್ರಗಳು ಸುರಕ್ಷಿತವಾಗಿಯೇ ಎಂಬುದನ್ನು ಪರೀಕ್ಷಿಸುವಂತೆ ಅವರು ಸೂಚಿಸಿದ್ದಾರೆ.

'ಅರಬ್ಬಿ ಸಮುದ್ರದ ಪಶ್ಚಿಮ ಕರಾವಳಿಯಲ್ಲಿರುವ ಕಾರವಾರ ಭೂಕಂಪ ವಲಯಕ್ಕೆ ಬರುವುದಿಲ್ಲ. ಯಾವುದೇ ತುರ್ತು ಸ್ಥಿತಿ ಎದುರಿಸಲು ಮತ್ತು ವಿಕಿರಣ ಪತ್ತೆಹಚ್ಚಲು ಅತ್ಯಾಧುನಿಕ, ಸೂಕ್ಷ್ಮಾತಿಸೂಕ್ಷ ಸೆನ್ಸರ್-ಗಳನ್ನು ಹೊಂದಿದ್ದೇವೆ' ಎಂದು ಗುಪ್ತಾ ಬಹಿರಂಗಪಡಿಸಿದರು. ಕೈಗಾ ಸ್ಥಾವರದಲ್ಲಿ ನಾಲ್ಕು ಘಟಕಗಳು 2000ನೇ ಇಸವಿಯಿಂದ ಕಾರ್ಯಗತವಾಗಿದೆ. ಅಣು ರಿಯಾಕ್ಟರ್-ಗಳ ಆಯಸ್ಸು ಸುಮಾರು 80 ವರ್ಷ. ಇವು ಗರಿಷ್ಠ ತೀವ್ರತೆಯ ಭೂಕಂಪವನ್ನು ಎರಡು ಬಾರಿ ಮಾತ್ರ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತವೆ. ಎರಡಕ್ಕಿಂತ ಹೆಚ್ಚು ಬಾರಿ ಭಾರಿ ಭೂಕಂಪವಾದರೆ ರಿಯಾಕ್ಟರ್-ಗೆ ಅಪಾಯ ಕಟ್ಟಿಟ್ಟಬುತ್ತಿ.

ಗಮನಾರ್ಹವೆಂದರೆ ಚೆನ್ನೈ ಬಳಿಯಿರುವ ಕಲ್ಪಾಕಂ ಅಣು ಸ್ಥಾವರಕ್ಕೆ 2004ರಲ್ಲಿ ಭೀಕರ ಸುನಾಮಿ ಅಪ್ಪಳಿಸಿತ್ತು. ಆದರೆ ರಿಯಾಕ್ಟರ್-ಗೆ ಏನೂ ಆಗಿರಲಿಲ್ಲ. ಸುನಾಮಿ ಅಪ್ಪಳಿಸುತ್ತಿದ್ದಂತೆ ರಿಯಾಕ್ಟರ್ ತನ್ನಷ್ಟಕ್ಕೆ ತಾನೇ ಸ್ಥಗಿತಗೊಂಡಿತ್ತು. ಕೆಲ ದಿನಗಳ ನಂತರ ಕಾರ್ಯಾರಂಭ ಮಾಡಿತು. ಆ ರಿಯಾಕ್ಟರ್-ನ ವಿದ್ಯುತ್ ಉಪಕರಣಗಳು ನೆಲ ಮಟ್ಟಕ್ಕಿಂತ ಎತ್ತರದಲ್ಲಿರುವುದರಿಂದ ಸುನಾಮಿ ಬಂದರೂ ಏನೂ ಆಗಿರಲಿಲ್ಲ. ಸುನಾಮಿ ಬಳಿಕ ರಿಯಾಕ್ಟರ್ ಸುತ್ತ ಎತ್ತರದ ಗೋಡೆ ನಿರ್ಮಿಸಲಾಗಿದೆ. ಇನ್ನು, ಗುಜರಾತಿನ ಕಛ್-ನಲ್ಲಿ ಭಾರಿ ಭೂಕಂಪ ಸಂಭವಿಸಿದಾಗಲೂ ಕಾಕ್ರಾಪಾರ್ ಅಣು ಸ್ಥಾವರ ಸ್ಥಗಿತಗೊಂಡಿರಲಿಲ್ಲ.

English summary
'Situated on the west coast near Karwar off the Arabian Sea Kaiga Atomic Unit, does not fall in the earthquake zone. The advanced technology with sensors is being used to prevent any radiation leak in case of an emergency - said Kaiga station project director J.P. Gupta in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X