ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳದಿಂದ ವಿಕಿರಣ: ಮೊಬೈಲ್ ಆಫ್ ಮಂಗಾಟ

By Mahesh
|
Google Oneindia Kannada News

Mars Rays Prank SMS
ಬೆಂಗಳೂರು, ಮಾ. 14: ಮಂಗಳ ಗ್ರಹದಿಂದ ಅಮಂಗಳಕಾರಿ ವಿಕಿರಣಗಳು ಭೂಮಿಯನ್ನು ಪ್ರವೇಶಿಸುತ್ತಲಿದ್ದು, ಇಂದು ರಾತ್ರಿ ಈ ಸಮಯದಲ್ಲಿ ನಿಮ್ಮ ಮೊಬೈಲ್ ಫೋನ್ ಗಳನ್ನು ಬಂದ್ ಮಾಡಿ ಎಂಬ ಎಸ್ ಎಂಎಸ್ ಅಥವಾ ಇಮೇಲ್ ಸಂದೇಶ ಈಗಾಗಲೇ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ಓದಿರಬಹುದು. ಈ ಎಸ್ಎಂಎಸ್ ಅನ್ನು ಬಿಬಿಸಿ ಹಾಗೂ ನಾಸಾ ಸಂಸ್ಥೆ ಕಳಿಸುತ್ತಿದೆ, ದಯವಿಟ್ಟು ನಿರ್ಲಕ್ಷಿಸಬೇಡಿ ಎಂಬ ಒಕ್ಕಣೆ ಬೇರೆ ಈ ಸಂದೇಶದಲ್ಲಿರುತ್ತದೆ. ಆದರೆ, ಈ ಸಂದೇಶ ಅಪ್ಪಟ ಸುಳ್ಳು ಸಂದೇಶವಾಗಿದೆ. ಕಿಡಿಗೇಡಿಗಳು ಮಜಾ ತೆಗೆದುಕೊಳ್ಳಲು ಕಳುಹಿಸಿದ ಮಂಗಾಟದ ಸಂದೇಶ ಎಂಬುದು ಸಾಬೀತಾಗಿದೆ.

ನಾಸಾ ಆಗಲಿ, ಬಿಬಿಸಿಯಾಗಲಿ ಈ ರೀತಿಯ ಸಂದೇಶವನ್ನು ಇದುವರೆವಿಗೂ ಕಳಿಸಿಲ್ಲ. ನಾಸಾ ಹಾಗೂ ಬಿಬಿಸಿ ವೆಬ್ ತಾಣದಲ್ಲಿ ಯಾವುದೇ ಎಚ್ಚರಿಕೆ ಸಂದೇಶ ನೀಡಿಲ್ಲ. ಮೇಲಾಗಿ ಮಂಗಳ ಒಂದು ಗ್ರಹವಾಗಿಲ್ಲ. ಗ್ರಹದಿಂದ ಯಾವುದೇ ವಿಕಿರಣಗಳಿ ಹೊರಹೊಮ್ಮುವುದಿಲ್ಲ. ಸೂರ್ಯ ಅಥವಾ ಯಾವುದೆ ನಕ್ಷತ್ರಗಳಿಂದ ವಿಕಿರಣಗಳು ಭೂಮಿಗೆ ತಲುಪುವ ಸಾಧ್ಯತೆಯಿದೆ. ಆದರೆ, ಅದೂ ಕೂಡಾ ಭೂಮಿಯ ಹೊರ ಮೇಲ್ಮೈ ದಾಡಿ ನಿಮ್ಮ ಮೊಬೈಲ್ ಗೆ ತಲುಪುವಷ್ಟರಲ್ಲಿ ಜೀವ ಕಳೆದುಕೊಂಡಿರುತ್ತದೆ.

ಯಾವುದೇ ವಿಕಿರಣ ಒಂದು ವೇಳೆ ಭೂಮಿಯನ್ನು ತಲುಪಿದರೂ, ಸಂವಹನ ಕ್ರಿಯೆಗೆ ಮೊಬೈಲ್ ಕಮ್ಯೂನಿಕೇಷನ್ ಗೆ ತೊಂದರೆ ಪಡಿಸುವಷ್ಟು ಮಾರಕವಾಗಿರುವುದಿಲ್ಲ. ಹಾಗಾಗಿ ಗ್ರಾಹಕರು ಧೈರ್ಯವಾಗಿ ಇಂದು ರಾತ್ರಿ 12 ರಿಂದ 3 ಗಂಟೆ ವೇಳೆಗೆ ಅಥವಾ ನಾಳೆ ಅಥವಾ ಎಂದೆಂದಿಗೂ ಯಾವುದೇ ಭಯವಿಲ್ಲದೆ ಮೊಬೈಲ್ ಫೋನ್ ಬಳಸಬಹುದು. ಸೂರ್ಯನಿಂದ ಬರುವ ಇನ್ಫ್ರಾರೆಡ್, ಅಲ್ಟ್ರಾ ವೈಲೇಟ್ ಕಿರಣಗಳು, ಗ್ಯಾಮಾ, ಎಕ್ಸ್ ರೇಗಳು ಬೇಕಾದರೆ ಮನುಷ್ಯರಿಗೆ ತಕ್ಕಮಟ್ಟಿಗೆ ಹಾನಿಕಾರಕ ಎಂದರೆ ನಂಬಬಹುದು. ಆದರೆ, ಮಂಗಳದಿಂದ ಹಾನಿಕಾರಕ ಕಿರಣ ಅದು ಮೊಬೈಲ್ ಗೆ ಹಾನಿ ಎಂದರೆ ನಿದ್ದೆಗಣ್ಣಿನಲ್ಲಿದ್ದರೂ ನಂಬುವಂಥ ವಿಷಯವಲ್ಲ.

ಈ ರೀತಿ ಸುಳ್ಳು ಸಂದೇಶ ಸುಮಾರು 2 ಮೂರು ವರ್ಷಗಳಿಂದ ಹರಿದಾಡುತ್ತಿದೆ. ಸಾಮಾನ್ಯ ಜ್ಞಾನ ಇದ್ದವರು ಮೊದಲಿಗೆ ಈ ರೀತಿ ಸಂದೇಶಗಳ ಸತ್ಯಾಸತ್ಯತೆ ಬಗ್ಗೆ ಅರಿಯದೆ ಸುಮ್ಮನೆ ಇನ್ನೊಬ್ಬರಿಗೆ ಮೇಸೇಜ್ ಫಾರ್ವಡ್ ಮಾಡುತ್ತಾರೆ. ಜನ ಸುಮ್ಮನೆ ಭಯ ಭೀತರಾಗುತ್ತಾರೆ. ನಮ್ಮ ಓಜೋನ್ ಪದರ ಕಾಸ್ಮಿಕ್ ಕಿರಣಗಳನ್ನು ತಡೆಯುವಷ್ಟು ಸಾಮರ್ಥ್ಯ ಹೊಂದಿದೆ. ಗ್ರಹಗಳಿಗೆ ಹೊಳೆಯುವ ಗುಣವಿಲ್ಲ. ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತವೆ. ನಕ್ಷತ್ರಗಳು ಮಾತ್ರ ಹೊಳೆಯುತ್ತವೆ ಎಂಬ ಸಾಮಾನ್ಯ ವಿಜ್ಞಾನದ ವಿದ್ಯಾರ್ಥಿಗೆ ಇರುವ ತಿಳುವಳಿಕೆ ನೆಟಿಜನ್ಸ್, ಗಿಜ್ಮೋಫ್ರಿಕ್ ಯುವಕರಿಗೆ ಇದ್ದರೆ ಒಳಿತು ಎಂದು ಬೆಂಗಳೂರಿನ ನೆಹರೂ ತಾರಾಲಯದ ವಿಜ್ಞಾನಿ ಬಿಎಸ್ ಶೈಲಜಾ ಅವರು ಹೇಳಿದ್ದಾರೆ.

English summary
Short messge service(SMS), emails on Cosmic rays from Mars entering the Earth is spreading among students and citizens at a lightening speed. But, this is hoax SMS which is revolving around public from past 2-3 years. Neither NASA nor BBC has sent any such warning messages confirms Banaglore Nehru Planetarium Scientist BS Shailaja.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X